ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಾಕ್‌ಲೈನ್‌-ಶಿವಣ್ಣ ಜೋಡಿ ಮತ್ತೊಮ್ಮೆ ಫೀಲ್ಡಿಗಿಳಿದರೆ ಚೆನ್ನ..! (Rockline Venkatesh | Preethse | Shivaraj kumar | Super)
EVENT
ಇದು ಚಲನಚಿತ್ರಾಭಿಮಾನಿಗಳ ಬಯಕೆ. ಈ ಹಿಂದೆ ರಾಕ್‌ಲೈನ್‌ ವೆಂಕಟೇಶ್‌ 'ಪ್ರೀತ್ಸೆ' ಚಿತ್ರವನ್ನು ನಿರ್ಮಿಸಿದಾಗ ಮ‌ೂಲ ಹಿಂದಿ ಚಿತ್ರದಲ್ಲಿ ಸನ್ನಿ ಡಿಯೋಲ್‌ ಪಾತ್ರಕ್ಕೆ ಶಿವರಾಜ್‌ ಕುಮಾರ್‌ರನ್ನು ಆರಿಸಿದ್ದರು. ಅದೇ ರೀತಿಯಲ್ಲಿ ಶಾರುಖ್‌ಖಾನ್‌ ನಿರ್ವಹಿಸಿದ್ದ ಪಾತ್ರದಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದು, ಸದರಿ ಚಿತ್ರ, ಚಿತ್ರದ ಹಾಡುಗಳು ಸೂಪರ್‌ಹಿಟ್‌ ಆಗಿದ್ದು ಇವೆಲ್ಲಾ ನಿಮಗೆ ಗೊತ್ತೇ ಇದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಉತ್ತಮ ನಿರ್ಮಾಣ ಮೌಲ್ಯಗಳನ್ನು ಒಳಗೊಂಡಿರುವ ರಾಕ್‌ಲೈನ್‌ ಪ್ರೊಡಕ್ಷನ್ಸ್‌ ವತಿಯಿಂದ ಚಿತ್ರವೊಂದು ನಿರ್ಮಾಣಗೊಂಡು ಅದರಲ್ಲಿ ಶಿವಣ್ಣ ನಟಿಸಲಿ ಎಂದು ಅಭಿಮಾನಿಗಳು ಬಯಸುತ್ತಿರುವುದರಲ್ಲಿ ಅರ್ಥವೂ ಇದೆ. ಈಗೀಗ ಚಿತ್ರನಿರ್ಮಾಣಕ್ಕೆ ಅಡಿಯಿಡುತ್ತಿರುವ ಹೊಸಬರು ಅಥವಾ ಈಗಾಗಲೇ ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದು, ಇಲ್ಲೂ ಒಂದು ಕೈ ನೋಡುವಾ ಎಂದು ಪ್ರಯತ್ನಿಸುವವರು ತಮ್ಮ ಮಗನನ್ನೋ ಅಥವಾ ತಮ್ಮನನ್ನೋ ನಾಯಕನನ್ನಾಗಿಸಲು ಹೊರಡುತ್ತಾರೆ. ಒಂದು ಪಕ್ಷ ಸೂಪರ್‌ಸ್ಟಾರ್‌ಗಳನ್ನು ಹಾಕಿಕೊಂಡರೂ ಸಹ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಚಿತ್ರವನ್ನು ಕಟ್ಟುವಲ್ಲಿ ಇಂಥವರು ವಿಫಲರಾದಾಗ ಚಿತ್ರವು ಸೋಲುವುದರ ಜೊತೆಗೆ ಸಂಬಂಧಿತ ಸ್ಟಾರ್‌ಗಳ ಇಮೇಜಿಗೂ ಧಕ್ಕೆಯಾಗುತ್ತದೆ.

ಶಿವಣ್ಣ, ಪುನೀತ್‌, ಉಪೇಂದ್ರ ಮೊದಲಾದ ಸ್ಟಾರ್ ನಟರನ್ನು ಹಾಕಿಕೊಂಡು ಚಿತ್ರವನ್ನು ನಿರ್ಮಿಸಬಲ್ಲ ಕೆಲವೇ ಸಮರ್ಥ ನಿರ್ಮಾಪಕರಲ್ಲಿ ರಾಕ್‌ಲೈನ್‌ ವೆಂಕಟೇಶ್‌ ಕೂಡಾ ಒಬ್ಬರಾಗಿದ್ದಾರೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ನಾಮಮಾತ್ರಕ್ಕೆ ದೊಡ್ಡ ನಟರನ್ನು ಹಾಕಿಕೊಂಡು ಚಿತ್ರವನ್ನು ಪ್ರಾರಂಭಿಸಿ, ನಂತರದಲ್ಲಿ ವೆಚ್ಚಗಳನ್ನು ನಿರ್ವಹಿಸಲಾರದೆ ಚಿತ್ರ ಬಿಡುಗಡೆಯಾಗುತ್ತದೋ ಇಲ್ಲವೋ ಎಂಬ ಸ್ಥಿತಿಯನ್ನು ಉಂಟುಮಾಡುವ ಅನನುಭವಿ/ಅಸಮರ್ಥ ನಿರ್ಮಾಪಕರ ಸಾಲಿಗೆ ರಾಕ್‌ಲೈನ್‌ ಸೇರುವುದಿಲ್ಲ.

ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸಿರುವ ಚಿತ್ರಗಳ ಪಟ್ಟಿ ಮತ್ತು ಅದರಲ್ಲಿ ನಟಿಸಿರುವ ಕಲಾವಿದರ ವಿವರಗಳನ್ನು ಒಮ್ಮೆ ಅವಲೋಕಿಸಿದರೆ ಅವರೆಂಥಾ ಸಮರ್ಥ ನಿರ್ಮಾಪಕ ಎಂಬುದು ಅರಿವಾಗುತ್ತದೆ. 'ಲಾಲಿ' (ವಿಷ್ಣುವರ್ಧನ್‌), 'ಯಾರೇ ನೀನು ಚೆಲುವೆ' (ರವಿಚಂದ್ರನ್‌), 'ಪ್ರೀತ್ಸೆ' (ಶಿವರಾಜ್‌ಕುಮಾರ್ ಮತ್ತು ಉಪೇಂದ್ರ), 'ಸೂಪರ್' (ಉಪೇಂದ್ರ) ಮೊದಲಾದ ಚಿತ್ರಗಳನ್ನು ಈ ನಿಟ್ಟಿನಲ್ಲಿ ಉದಾಹರಿಸಬಹುದು.

ಎರಡೂ ಕೈ ಸೇರಿದರೆ ಚಪ್ಪಾಳೆ ಎಂಬ ಮಾತಿನಂತೆ, ಉತ್ತಮವಾದ ಚಿತ್ರವೊಂದನ್ನು ಜನರಿಗೆ ನೀಡುವ ದೃಷ್ಟಿಯಿಂದ ಶಿವಣ್ಣ ಮತ್ತು ರಾಕ್‌ಲೈನ್‌ ಮತ್ತೊಮ್ಮೆ ಒಂದಾಗಲಿ ಎಂದು ನಾವೂ-ನೀವೂ ಆಶಿಸೋಣ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ