ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಎಲ್ಲಿ ಹೋದರು 'ಸೈನೇಡ್‌' ರಮೇಶ್‌? (Cyanide | A.M.R.Ramesh | K.V.Raju | Ravikaale)
EVENT
'ಸೈನೇಡ್‌' ರಮೇಶ್‌ ಎಂದಾಕ್ಷಣ ಇವರು ಉಗ್ರಗಾಮಿಗಳು ಕುತ್ತಿಗೆಗೆ ನೇತುಹಾಕಿಕೊಳ್ಳುವ ಸೈನೇಡ್‌ ಕ್ಯಾಪ್ಸೂಲ್‌ನ ಸರಬರಾಜುದಾರನಿರಬಹುದೇ ಎಂದು ಗೊಂದಲಗೊಳ್ಳಬೇಡಿ. ರಾಜೀವ್‌ಗಾಂಧಿಯವರ ಹಂತಕ ಶಿವರಾಸನ್‌ ಕುರಿತಾದ ಕಥೆಯ ಎಳೆಯನ್ನು ಹೊಂದಿದ್ದ 'ಸೈನೇಡ್‌' ಚಿತ್ರದ ನಿರ್ದೇಶಕ ಎ.ಎಂ.ಆರ್‌. ರಮೇಶ್‌ ಇವರೇನೇ..!!

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬೆಂಗಳೂರಿನ ಆಚಾರ್ಯ ಪಾಠಶಾಲೆ ಮತ್ತು ಬಸವನಗುಡಿಯ ನ್ಯಾಷನಲ್‌ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವಾಗಲೇ ಸಮರ್ಥ ನೃತ್ಯಪಟುವೆನಿಸಿಕೊಂಡಿದ್ದ ರಮೇಶ್‌ ಚಿತ್ರರಂಗದೆಡೆಗೆ ಆಕರ್ಷಿತರಾದದ್ದು ಸಹಜವೇ ಆಗಿತ್ತು. ಹೀಗಾಗಿ ಗಾಂಧಿನಗರದೆಡೆಗೆ ಪಯಣ ಬೆಳೆಸಿದ ಅವರು ನಿರ್ದೇಶಕ ಕೆ.ವಿ.ರಾಜುರವರ ಗರಡಿಯನ್ನೂ ಸೇರಿದರು.

ಕೆ.ವಿ.ರಾಜು ನಿರ್ದೇಶನ, ಜಗ್ಗೇಶ್‌-ಪ್ರಿಯಾಂಕ ಅಭಿನಯದ 'ಬೊಂಬಾಟ್‌ ಹುಡುಗ' ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲೂ ಕಾಣಿಸಿಕೊಂಡ ರಮೇಶ್‌, ನಿರ್ದೇಶನದ ಮಟ್ಟುಗಳನ್ನೂ ಜೊತೆಜೊತೆಗೇ ಕಲಿಯುತ್ತಿದ್ದರು. ನಿರ್ದೇಶನಕ್ಕೆ ಬೇಕಾದ ಜ್ಞಾನ ಮತ್ತು ಪೂರಕ ಅಂಶಗಳೆಲ್ಲಾ ಜೊತೆಗಿವೆ ಎಂಬುದು ಖಾತ್ರಿಯಾಗುತ್ತಿದ್ದಂತೆ ಅಖಾಡಕ್ಕೆ ಪ್ರವೇಶಿಸಿದರು.

ಆಗ ಹೊರಬಂದದ್ದೇ 'ಸೈನೇಡ್‌' ಚಿತ್ರ. ಇದು ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ತಮ್ಮ ಪ್ರಭಾವಲಯವನ್ನು ವಿಸ್ತರಿಸಿಕೊಂಡಿರುವ ರವಿಕಾಳೆ ಎಂಬ ಕಲಾವಿದರನ್ನು 'ಕನ್ನಡದಲ್ಲಿ ನಿಮ್ಮ ಈವರೆಗಿನ ಅದ್ಭುತ ಪಾತ್ರ ಯಾವುದು?' ಎಂದು ಕೇಳಿದರೆ ಅವರು ಬೆರಳುಮಾಡಿ ತೋರಿಸುವುದು 'ಸೈನೇಡ್‌' ಚಿತ್ರದ ಶಿವರಾಸನ್‌ ಪಾತ್ರದ ಕಡೆಗೇ..!!

'ಸೈನೇಡ್‌' ನಂತರ 'ಪೊಲೀಸ್‌ ಕ್ವಾರ್ಟರ್ಸ್‌' ಎಂಬ ಚಿತ್ರವನ್ನು ರಮೇಶ್‌ ನಿರ್ದೇಶಿಸಿದರಾದರೂ ಅದು 'ಸೈನೇಡ್‌' ಚಿತ್ರದಷ್ಟು ಸಮರ್ಥವಾಗಿರಲಿಲ್ಲ. ನಂತರ ಏಕಾಏಕಿ ಯಾರಿಗೂ ಕಾಣಿಸದಂತೆ ಮರೆಯಾಗಿದ್ದ ರಮೇಶ್‌ ಮೊನ್ನೆ 'ಯೋಗರಾಜ' ಚಿತ್ರದ ಪೂರ್ವಭಾವಿ ಪ್ರದರ್ಶನದಲ್ಲಿ ಕಾಣಿಸಿಕೊಂಡದ್ದು ಸಮಾಧಾನದ ಸಂಗತಿ. ಯಶಸ್ಸುಗಳು ಮತ್ತು ವೈಫಲ್ಯಗಳು ಎಲ್ಲಾ ರಂಗದಲ್ಲೂ ಇದ್ದದ್ದೇ. ಇದನ್ನು ರಮೇಶ್‌ ಮನಸ್ಸಿಗೆ ಹಚ್ಚಿಕೊಳ್ಳದೇ 'ಸೈನೇಡ್‌'ನಂಥ ಮತ್ತೊಂದು ಉತ್ತಮ ಚಿತ್ರವನ್ನು ಕಟ್ಟಿಕೊಡಲಿ ಎಂಬುದೇ ನಮ್ಮ ಆಶಯ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ