ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಹರೇ ರಾಮ ಹರೇ ಕೃಷ್ಣ' ಮಂತ್ರ ಜಪಿಸಲಿರುವ ಮುರಳಿ (Hare Rama Hare Krishna | Murali | Chandra Chakori | C.V.Ashoke Kumar)
EVENT
ಬ್ರೇಕ್‌ಗಾಗಿ ಕಾಯುತ್ತಿರುವ ನಟ-ನಟಿಯರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಈಗಿನದು ಮುರಳಿಯ ಕುರಿತಾದ ಸುದ್ದಿ. ಇವರು ನಟ ವಿಜಯ ರಾಘವೇಂದ್ರರ ಸೋದರ ಎಂಬುದು ನಿಮಗೆ ಗೊತ್ತಿರುವ ವಿಷಯವೇ. ಮುರಳಿ ಅಭಿನಯದ 'ಹರೇ ರಾಮ ಹರೇ ಕೃಷ್ಣ' ಸದ್ಯದಲ್ಲಿಯೇ ಬಿಡುಗಡೆಯಾಗಲಿದ್ದು ಅದು ಅವರನ್ನು ಮತ್ತೊಮ್ಮೆ ಲೈಮ್‌ಲೈಟ್‌ಗೆ ತರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಎಸ್‌.ನಾರಾಯಣ್‌ರವರ 'ಚಂದ್ರಚಕೋರಿ' ಚಿತ್ರಕ್ಕೆ ಇವರು ನಾಯಕರಾಗಿ ಆಯ್ಕೆಯಾದಾಗ ಚಿತ್ರೋದ್ಯಮದ ಬಹಳಷ್ಟು ಮಂದಿ 'ಇದು ಉಚಿತವೇ?' ಎಂಬಂತೆ ಹುಬ್ಬೇರಿಸಿದ್ದರು. ಆದರೆ ಚಿತ್ರವು ಬೆಳಗಾವಿಯಂಥ ಪ್ರಾಂತ್ಯದಲ್ಲೂ ಶತದಿನೋತ್ಸವವನ್ನು ದಾಖಲಿಸಿದಾಗ ಇದೇ ಜನ ಬಾಯಿಯ ಮೇಲೆ ಬೆರಳಿಟ್ಟಿದ್ದರು.

ಇಂಪಾದ ಹಾಡುಗಳು, ಹದವರಿತ ಅಭಿನಯ, ಹೃದ್ಯವಾದ ನಿರೂಪಣೆ ಈ ಎಲ್ಲಾ ಕಾರಣಗಳಿಂದ ಈ ಚಿತ್ರ ಯಶಸ್ಸನ್ನು ದಾಖಲಿಸಿತ್ತು. ಇದಾದ ನಂತರ ಮುರಳಿಯವರು 'ಯಶವಂತ್‌', 'ಕಂಠಿ', 'ಮಿಂಚಿನ ಓಟ', 'ಪ್ರೀತಿಗಾಗಿ', 'ಶ್ರೀಹರಿಕಥೆ' ಮೊದಲಾದ ಚಿತ್ರಗಳಲ್ಲಿ ನಟಿಸಿದರು. ಇವುಗಳ ಪೈಕಿ ಮೊದಲ ಎರಡು ಚಿತ್ರಗಳಷ್ಟೇ ಯಶಸ್ಸನ್ನು ದಾಖಲಿಸಿದವು.

ಈಗ ಅವರ ಗಮನವೆಲ್ಲಾ 'ಹರೇ ರಾಮ ಹರೇ ಕೃಷ್ಣ' ಚಿತ್ರದ ಮೇಲೆ ನಿಂತಿದೆ. ಸಿ.ವಿ.ಅಶೋಕ್‌ ಕುಮಾರ್ ಈ ಚಿತ್ರದ ನಿರ್ದೇಶಕರು. ಕಥೆ-ಚಿತ್ರಕಥೆ-ಸಂಭಾಷಣೆಯ‌ೂ ಅವರದ್ದೇ. ಕೆ.ವಿನೋದ್‌ ಸಿಂಧ್ಯ ಮತ್ತು ಕೆ.ಶಿವಕುಮಾರ್ ಚಿತ್ರದ ನಿರ್ಮಾಪಕರು. ಹಂಸಲೇಖಾರವರು ಗೀತೆಗಳನ್ನು ರಚಿಸಿದ್ದರೆ ಬಹಳ ದಿನಗಳ ನಂತರ ಇಳಯರಾಜಾರವರು ಸಂಗೀತ ನೀಡಿರುವುದು ನಿರೀಕ್ಷೆಯನ್ನು ಹೆಚ್ಚಿಸಿದೆ. ಹೊರಾಂಗಣ ಚಿತ್ರೀಕರಣದಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಪಿ.ಕೆ.ಎಚ್‌. ದಾಸ್‌ ಚಿತ್ರದ ಛಾಯಾಗ್ರಾಹಕರು ಮತ್ತು ಟಿ.ಶಶಿಕುಮಾರ್ ಸಂಕಲನಕಾರರು. ಚಿತ್ರಕ್ಕೆ ಯಶಸ್ಸನ್ನು ಹಾರೈಸೋಣ.


ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ