ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಲೀಡರ್' ಓಂ ಪ್ರಕಾಶ್‌ 'ಒಳ್ಳೇ ಹುಡುಗ'...!! (Leader | Om Prakash | Olle Huduga | Cotten Pete)
EVENT
ಓಂ ಪ್ರಕಾಶ್‌ರವರು ನಿರ್ದೇಶಕರಾಗಿರುವುದರಿಂದ ಅವರನ್ನು 'ಲೀಡರ್' ಎಂದು ಕರೆಯುವುದರಲ್ಲಿ ಅರ್ಥವಿದೆ; ಆದರೆ ಅವರನ್ನು ಈಗ 'ಒಳ್ಳೇ ಹುಡುಗ' ಎಂದು ಕರೆದಿದ್ದಕ್ಕೆ ಕಾರಣವಾದ ಸಂದರ್ಭ ಯಾವುದು ಎಂದು ನೀವು ನಮ್ಮನ್ನು ಕೇಳಬಹುದು. ವಿಷಯ ಅದಲ್ಲ, 'ಲೀಡರ್' ಮತ್ತು 'ಒಳ್ಳೇ ಹುಡುಗ' ಎಂಬ ವಿಶೇಷೋಕ್ತಿಗಳು ಓಂ ಪ್ರಕಾಶ್‌ ನಿರ್ದೇಶಿಸಲು ಬಯಸಿರುವ ಎರಡು ಹೊಸ ಚಿತ್ರಗಳ ಶೀರ್ಷಿಕೆಗಳು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪತ್ರಕರ್ತರೊಂದಿಗೆ ಅವರು ಈ ವಿಷಯಗಳನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ಚಿತ್ರರಂಗದ ಕೆಲವು ಜನರ ವರ್ತನೆಗಳನ್ನು ವಿಷಾದದ ನಗೆಯೊಂದಿಗೆ ಹಂಚಿಕೊಂಡರು. ಹೋದ ವರ್ಷ ಅವರಿಗೆ ಅಪಘಾತವಾಗಿ ಮಲಗಿದ್ದಾಗ ಅವರ ಕುರಿತು ಸತ್ಯಕ್ಕೆ ದೂರವಾದ ಬಗೆಬಗೆಯ ಸುದ್ದಿಗಳು ಹಬ್ಬಿದ್ದು, ಅವರಿಗೆ ದುಡ್ಡು ಕೊಡಬೇಕಾದವರೊಬ್ಬರು ಮನೆಗೆ ಬಂದಿದ್ದರೂ ದೊಡ್ಡು ಕೊಡದೆ ಹೋದದ್ದನ್ನೂ ಎಳೆ ಎಳೆಯಾಗಿ ಬಿಡಿಸಿ ಹೇಳಿದ ಓಂ, ಬಣ್ಣದ ಮಂದಿಯ ಈ ಸ್ವಭಾವವನ್ನು ತಮ್ಮಪ್ಪ ಬದುಕಿರುವಾಗಲೇ ಹೇಳಿದ್ದರಿಂದ ಇದರಿಂದ ತಮಗೇನೂ ಆಘಾತವಾಗಲಿಲ್ಲ ಎಂಬುದನ್ನು ಹೇಳಲು ಮರೆಯಲಿಲ್ಲ.

'ಲೀಡರ್' ಚಿತ್ರದಲ್ಲಿ ಆದಿತ್ಯ ಹಾಗೂ ವಿಜಯ್‌ ಇಬ್ಬರೂ ನಾಯಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು. ಆದಿತ್ಯ ನಾಯಕನಾಗಿ ನಟಿಸುತ್ತಿರುವ 'ಕಾಟನ್‌ಪೇಟೆ' ಚಿತ್ರದಲ್ಲಿ ಓಂ ಪ್ರಕಾಶ್‌ ತೊಡಗಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ 'ಎ.ಕೆ.56' ಎಂಬ ಚಿತ್ರವನ್ನೂ ಅವರು ಮುಗಿಸಿದ್ದು, ಇದು ಅತ್ಯಂತ ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಹಾಗೂ ಆಗಸ್ಟ್‌ ತಿಂಗಳಲ್ಲಿ ಅದು ಬಿಡುಗಡೆಯಾಗಲಿದೆ.

'ಹತ್ತಾರು ಚಿತ್ರಗಳಿಂದ ದೃಶ್ಯಗಳನ್ನು ಎಗರಿಸಿ ತೇಪೆ ಹಚ್ಚಿ ಓಂ ಪ್ರಕಾಶ್‌ ಕನ್ನಡದಲ್ಲಿ ಒಂದು ಚಿತ್ರವನ್ನು ಮಾಡುತ್ತಾರೆ. ವಾಸ್ತವವಾಗಿ ಅವರಿಗಿರುವ ಹಾಸ್ಯಪ್ರಜ್ಞೆ ಮತ್ತು ದೃಶ್ಯವನ್ನು ಕಟ್ಟಿಕೊಡುವ ತಾಕತ್ತನ್ನು ಬಳಸಿಕೊಂಡು ಸ್ವತಂತ್ರ ಚಿತ್ರವನ್ನೇ ಅವರು ರೂಪಿಸಬಹುದು; ಆದರೆ ಅವರೇಕೋ ಮನಸ್ಸು ಮಾಡುತ್ತಿಲ್ಲ, ಅವಸರದ ಅಡುಗೆಯೆ ಕಡೆಗೇ ಗಮನ ಹರಿಸುತ್ತಿದ್ದಾರೆ' ಎಂಬುದು ಓಂ ಪ್ರಕಾಶ್‌ ಕುರಿತಾಗಿ ಗಾಂಧಿನಗರದಲ್ಲಿ ಚಾಲ್ತಿಯಲ್ಲಿರುವ ಅಭಿಪ್ರಾಯ. ಓಂ ಇದರ ಕಡೆಗೆ ಗಮನಹರಿಸಿ ಸ್ವತಂತ್ರ ಚಿತ್ರಗಳನ್ನು ನೀಡುವಂತಾಗಲಿ ಎಂಬುದೇ ನಮ್ಮ ಹಾರೈಕೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ