ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಈ ಮಾಸಾಂತ್ಯಕ್ಕೆ 'ಸ್ವಯಂಕೃಷಿ' ಬಿಡುಗಡೆ (Swayam Krishi | Veerendra babu | Ambarish | Kannada Movies)
EVENT
ಒಂದಿಲ್ಲೊಂದು ಕಾರಣಗಳಿಂದಾಗಿ ವಿಳಂಬವಾಗುತ್ತಲೇ ಬಂದಿದ್ದ 'ಸ್ವಯಂಕೃಷಿ' ಚಿತ್ರದ ಬಿಡುಗಡೆಯು ಈ ತಿಂಗಳ 28ಕ್ಕೆ ಆಗಲಿದೆ ಎಂದು ಚಿತ್ರದ ನಾಯಕ-ನಿರ್ಮಾಪಕ-ನಿರ್ದೇಶಕ ವೀರೇಂದ್ರಬಾಬು ತಿಳಿಸಿದ್ದಾರೆ. ಚಿತ್ರೀಕರಣ ಪ್ರಾರಂಭವಾಗಿ ವರ್ಷವೇ ಕಳೆದಿದ್ದರೂ ಬಿಡುಗಡೆಯು ತಡವಾಗಿರುವುದಕ್ಕೆ ಅಭಿಮಾನಿಗಳಿಗೆ ಬೇಸರವಾಗಿರಬಹುದು. ಆದರೆ ತಡವಾಗಿ ಬಂದರೂ ದೃಢವಾಗಿ ಬರುತ್ತೇವೆ ಎಂಬ ಸುದ್ದಿಯನ್ನು ವೀರೇಂದ್ರಬಾಬು ಈ ಮ‌ೂಲಕ ನೀಡಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಚಿತ್ರದಲ್ಲಿ ಮತ್ತಷ್ಟು ವಿಶೇಷತೆಗಳಿರುವುದನ್ನು ಕಾಣಬಹುದು. ಮೊಟ್ಟಮೊದಲ ಬಾರಿಗೆ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಚಿತ್ರದ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿರುವುದು ಒಂದು ವಿಶೇಷವಾದರೆ, ರೆಬೆಲ್‌ಸ್ಟಾರ್ ಅಂಬರೀಷ್‌ರವರು ಈ ಚಿತ್ರದಲ್ಲಿ ಮುಖ್ಯಮಂತ್ರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ.

ರಾಜಕೀಯದ ವಲಯಗಳಲ್ಲಿ ಸ್ಪಷ್ಟವಾಗಿ ಗುರುತಿಸಿಕೊಂಡಿರುವ ತಾವು ಈ ಚಲನಚಿತ್ರದ ಮ‌ೂಲಕವಾದರೂ ಮುಖ್ಯಮಂತ್ರಿಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅಂಬರೀಷ್‌ರವರು ಹೊಸ ಚಿತ್ರತಂಡದ ಉತ್ಸಾಹವನ್ನು ಶ್ಲಾಘಿಸುತ್ತಲೇ ಪುಟ್ಟಣ್ಣ ಕಣಗಾಲರ ಜೊತೆಗಿನ ಒಡನಾಟದ ದಿನಗಳನ್ನು ಹೇಳಿಕೊಳ್ಳುತ್ತಾ ನೆನಪಿಗೆ ಜಾರಿದ್ದು ವಿಶೇಷವೆನಿಸಿತ್ತು.

ವೀರೇಂದ್ರಬಾಬುರವರಿಗೆ ಚಿಕ್ಕಂದಿನಿಂದಲೂ ಅಂಬರೀಷ್‌ ಎಂದರೆ ಪ್ರಾಣವಂತೆ. ಆದರೆ ಅವರನ್ನೇ ನಿರ್ದೇಶಿಸುವಂತಾಗಿದ್ದು ತಮ್ಮ ಪೂರ್ವಜನ್ಮದ ಸುಕೃತ ಎಂದು ಅವರು ಕರೆದುಕೊಂಡರು ಮತ್ತು ಅವರಿಗೆ ಡಾಕ್ಟರೇಟ್‌ ನೀಡುವ ಕಡೆಗೆ ವಿಶ್ವವಿದ್ಯಾಲಯಗಳು ಮನಸ್ಸು ಮಾಡಬೇಕು ಎಂಬ ಆಶಯವನ್ನೂ ವ್ಯಕ್ತಪಡಿಸಿದರು. ಅವರ ಮನದಿಂಗಿತ ಕೈಗೂಡಲಿ ಎಂದು ಹಾರೈಸೋಣವೇ?

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ