ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಇನ್ನೂರೈವತ್ತು ಚಿತ್ರಮಂದಿರಗಳಲ್ಲಿ 'ಜೋಗಯ್ಯ' ಬಿಡುಗಡೆ (Jogayya | Shivaraj Kumar | Prem | Harikrishna)
EVENT
ಶಿವರಾಜ್‌ಕುಮಾರ್ ನಾಯಕತ್ವದ 'ಜೋಗಯ್ಯ' ಚಿತ್ರದ ಬಿಸಿ ದಿನೇದಿನೇ ಏರುತ್ತಿದೆ. ಈ ಚಿತ್ರ ಶಿವಣ್ಣನ 100ನೇ ಚಿತ್ರವಾಗಿರುವುದರ ಜೊತೆಗೆ ಹಲವು ಪ್ರಥಮಗಳನ್ನು ಒಳಗೊಂಡಿರುವುದೇ ಇದಕ್ಕೆ ಕಾರಣವೆನ್ನಬಹುದು. ಈ ಹಿಂದೆ ತಾವು ನಿರ್ದೇಶಿಸಿದ್ದ ಪುನೀತ್‌ ರಾಜ್‌ಕುಮಾರ್ ಅಭಿನಯದ 'ರಾಜ್‌' ಚಿತ್ರವನ್ನು 150 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಪ್ರೇಮ್‌ ಹೇಳಿಕೊಂಡಿದ್ದು ನಿಮಗೆ ನೆನಪಿರಬಹುದು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಬಾರಿಯದು ಅದನ್ನೂ ಮೀರಿಸಲಿದೆ. ಕಾರಣ 'ಜೋಗಯ್ಯ' ಚಿತ್ರವು ಏಕಕಾಲಕ್ಕೆ 250 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆಯಂತೆ. ಕೆಂಪೇಗೌಡ ರಸ್ತೆಯಲ್ಲಿ ಚಿತ್ರವೊಂದಕ್ಕೆ ಒಂದು ಚಿತ್ರಮಂದಿರ ಸಿಕ್ಕಿದರೆ ಅದೃಷ್ಟ. ಆದರೆ ಈ ರಸ್ತೆಯ ಎರಡು ಚಿತ್ರಮಂದಿರಗಳಲ್ಲಿ 'ಜೋಗಯ್ಯ' ಕಾಣಿಸಿಕೊಳ್ಳಲಿದ್ದಾನಂತೆ ಹಾಗೂ ಜನಜಂಗುಳಿಯ ನೂಕುನುಗ್ಗಲನ್ನು ತಪ್ಪಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆಯೆಂತೆ. ಇದು ಅಭಿಮಾನಿಗಳಲ್ಲಿ ಸಂಚಲನೆಯನ್ನೇ ಸೃಷ್ಟಿಸಿದೆ.

ಇತ್ತೀಚೆಗಷ್ಟೇ ಚಿತ್ರದ ಪ್ರಚಾರಾರ್ಥವಾಗಿ ಟಿ-ಷರ್ಟ್‌, ಕ್ಯಾಪ್‌ ಮತ್ತು 3ಡಿ ಫೋಟೋ ಕಾರ್ಡ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಶಾರುಖ್‌ಖಾನ್‌ ಅಭಿನಯದ 'ರಾ-ಒನ್‌' ಚಿತ್ರವನ್ನು ಬಿಟ್ಟರೆ ದೇಶದಲ್ಲಿ ಈ ಬಗೆಯ 3ಡಿ ಫೋಟೋ ಕಾರ್ಡ್‌ ಬಿಡುಗಡೆಯ ಹೆಮ್ಮೆಯನ್ನು ದಾಖಲಿಸಿರುವ ಏಕೈಕ ಚಿತ್ರ 'ಜೋಗಯ್ಯ' ಎಂಬುದು ನಿರೀಕ್ಷೆಯ ಹೆಚ್ಚಳಕ್ಕೆ ಮತ್ತೊಂದು ಕಾರಣವಾಗಿದೆ.

ಕರ್ನಾಟಕ ಮಾತ್ರವಲ್ಲದೆ ಅಮೆರಿಕಾ ಹಾಗೂ ಇತರ ದೇಶಗಳಲ್ಲೂ 'ಜೋಗಯ್ಯ' ಬಿಡುಗಡೆಯಾಗುತ್ತಿರುವುದು ಶಿವಣ್ಣ ಅಭಿಮಾನಿಗಳ ಉತ್ಸಾಹ ಹೆಚ್ಚಲು ಕಾರಣವಾಗಿದೆ. ರಕ್ಷಿತಾ ನಿರ್ಮಾಪಕಿಯಾಗಿರುವ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದು ಹಾಡುಗಳೆಲ್ಲಾ ಸೂಪರ್‌ಹಿಟ್‌ ಆಗಿವೆ. ನರೇಂದ್ರಬಾಬು ಸಂಭಾಷಣೆ, ನಂದ ಛಾಯಾಗ್ರಹಣ ಚಿತ್ರಕ್ಕಿದೆ. 'ಜೋಗಯ್ಯ'ನನ್ನು ನೋಡಲು ನೀವು ವರಮಹಾಲಕ್ಷ್ಮಿ ಹಬ್ಬದವರೆಗೂ ಕಾಯಬೇಕು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ