ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗಂಡ ಇಲ್ಲದ ಹೆಣ್ಣು ಹೀಗೂ ಬದುಕಬಹುದು! (Manasa | Kodlu Ramakrishna | Anitha Rani | Kannada Movies)
EVENT
ನಿಮಗೆ ಅನಿತಾರಾಣಿ ನೆನಪಿದೆಯಾ? 'ಕನ್ನಡ ಕುವರ', 'ಅವತಾರ ಪುರುಷ', 'ಗಿರಿಮಲ್ಲಿಗೆ', 'ತವರಿಗೆ ಬಾ ತಂಗಿ', 'ಮಹಾರಾಜ', 'ಯುಗಾದಿ' ಸೇರಿದಂತೆ ಏನಿಲ್ಲವೆಂದರೂ ಸುಮಾರು 80 ಚಿತ್ರಗಳಲ್ಲಿ ನಟಿಸಿರುವ ಅನಿತಾರಾಣಿಯ ಕುರಿತೇ ನಾವು ಮಾತನಾಡುತ್ತಿರುವುದು. ಇವರು ಈಗ 'ಮಾನಸ' ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದು ಪ್ರಧಾನ ಪಾತ್ರದಲ್ಲಿ ಅವರೇ ಕಾಣಿಸಿಕೊಳ್ಳುತ್ತಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮನೆಮಂದಿಯ ಸೇವೆಯಲ್ಲೇ ಸಂತೋಷವನ್ನು ಕಾಣುವ ಹೆಣ್ಣೊಬ್ಬಳು ತನ್ನ ಗಂಡ ತೀರಿಕೊಂಡಾಗ ಎದುರಿಸುವ ಕಷ್ಟ-ಕೋಟಲೆಗಳು ಮತ್ತು ಅವನ್ನೆಲ್ಲಾ ಎದುರಿಸಿ ಸ್ವಂತ ಕಾಲಿನ ಮೇಲೆ ಹೇಗೆ ನಿಲ್ಲುತ್ತಾಳೆ ಎಂಬ ಕಥೆಯನ್ನು ಈ ಚಿತ್ರ ಹೊಂದಿದ್ದು, ಜೆ.ಎಂ.ಪ್ರಹ್ಲಾದ್‌ ಇದನ್ನು ಬರೆದಿದ್ದಾರೆ. ಕೋಡ್ಲು ರಾಮಕೃಷ್ಣ ಈ ಚಿತ್ರದ ನಿರ್ದೇಶಕರು.

ಹಿರಿತೆರೆ, ಕಿರುತೆರೆ, ರಂಗಭೂಮಿ ಹೀಗೆ ಅಭಿನಯದ ಎಲ್ಲ ವಲಯಗಳಲ್ಲೂ ಕಾಣಿಸಿಕೊಂಡಿರುವ ಅನಿತಾರಾಣಿ ಸಾಕಷ್ಟು ವರ್ಷಗಳಿಂದ ಬಣ್ಣದ ಲೋಕದ ನಂಟನ್ನು ಹೊಂದಿರುವವರು. ನಿರ್ಮಾಪಕಿಯಾಗಬೇಕೆಂಬ ತುಡಿತ ಮತ್ತು ಚಿತ್ರರಂಗದಲ್ಲಾದ ಅವಮಾನಗಳೇ ಅವರು ಚಿತ್ರನಿರ್ಮಾಣಕ್ಕಿಳಿಯಲು ಕಾರಣವಂತೆ.

ಮಳೆಯಿಂದ ಕೂಡಿರುವ ಮಲೆನಾಡಿನ ಸೌಂದರ್ಯ, ತೂಗುಸೇತುವೆಯ ಒಯ್ಯಾರ, ತುಂಗಾನದಿಯ ಲಹರಿ ಇವೆಲ್ಲವನ್ನೂ ಒಳಗೊಂಡಿರುವ ಈ ಚಿತ್ರಕ್ಕೆ ಅಶೋಕ್‌ ರಾಮನ್‌ ಛಾಯಾಗ್ರಾಹಕರು. ಶ್ರೀನಿವಾಸ ಮ‌ೂರ್ತಿ, ರಮೇಶ್‌ಭಟ್‌, ಶಿವಧ್ವಜ್‌‌, ಶಿವರಾಮ್‌ ಮೊದಲಾದವರು ಪ್ರಧಾನ ಪಾತ್ರಗಳಲ್ಲಿದ್ದಾರೆ.

ಒಟ್ಟಿನಲ್ಲಿ ಲೀಲಾವತಿ, ಆರತಿ, ತಾರಾ, ಜಯಮಾಲಾ, ಜಯಶ್ರೀದೇವಿ, ಸೌಂದರ್ಯ ಮೊದಲಾದವರು ಈ ಹಿಂದೆ ನಿರ್ಮಾಪಕಿಯರೆನಿಸಿಕೊಂಡಿದ್ದರು. ಅವರ ಸಾಲಿಗೆ ಸೇರುತ್ತಿರುವ ಅನಿತಾರಾಣಿಯವರಿಗೂ ಶುಭಕೋರೋಣ.

'ಮಾನಸ' ಚಿತ್ರ ಯಶಸ್ವಿಯಾಗಲಿ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ