ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಸಿಂಗಂ' ಚಿತ್ರದಲ್ಲಿ ಕನ್ನಡಿಗರಿಗೆ ಅವಮಾನ ವಿರೋಧಿಸಿ ಪ್ರತಿಭಟನೆ (Singam | Ajay Devagan | Kannada | Kempegowda)
PR
ದಕ್ಷ ಪೊಲೀಸ್ ಅಧಿಕಾರಿಯಾಗಿ ಬಾಲಿವುಡ್ ನಟ ಅಜಯ ದೇವಗನ್ ನಟಿಸಿರುವ 'ಸಿಂಗಂ' ಬಿಡುಗಡೆ ಆರಂಭದಲ್ಲೇ ಹೊಸ ವಿವಾದವನ್ನು ಸೃಷ್ಠಿಸಿದೆ. ಈ ಚಿತ್ರದಲ್ಲಿ ಕನ್ನಡಿಗರಿಗೆ ಅವಹೇಳನ ಮಾಡಲಾಗಿದೆ ಎಂದು ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರಿನಾದ್ಯಂತ ಕನ್ನಡ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಚಿತ್ರವನ್ನು ಕರ್ನಾಟಕದಾದ್ಯಂತ ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸುತ್ತಿರುವ ಪ್ರತಿಭಟನಾಕಾರರು ಹುಬ್ಬಳ್ಳಿಯ ಅಪ್ಸರ ಚಿತ್ರಮಂದಿರವನ್ನು ದ್ವಂಸ ಮಾಡಿದ್ದು, ಪ್ರದರ್ಶನ ನಿಲ್ಲಿಸಲಾಗಿದೆ. ಪ್ರತಿಭಟನಾ ನಿರತ 20 ಮಂದಿಯನ್ನು ಬಂಧಿಸಲಾಗಿದೆ.

ಕನ್ನಡಿಗರು ನಾಯಿಗಳಾ...?
ಚಿತ್ರದ ಸಂಭಾಷಣೆಯೊಂದರಲ್ಲಿ ಜಯಕಾಂತ್ ಶಿಕ್ರೆ (ಪ್ರಕಾಶ್ ರೈ) ಯನ್ನು ಮಟ್ಟಹಾಕಲು ಬಂದ ದಕ್ಷ ಪೊಲೀಸ್ ಅಧಿಕಾರಿ ಬಾಜಿರಾವ್ ಸಿಂಗಂ (ಅಜಯ್ ದೇವಗನ್) ಖಡಕ್ ಶಬ್ಧಗಳಿಂದ ಬೆದರಿಸುತ್ತಾನೆ. ಇದಕ್ಕೆ ಸವಾಲು ಹಾಕುವ ಕರ್ನಾಟಕದ ಗಡಿಭಾಗದ ರೌಡಿ ಜಯಕಾಂತ್ ಶಿಕ್ರೆ ಸಾವಿರ ಜನ ಬೆಂಬಲಿಗರನ್ನು ಕರೆದುಕೊಂಡು ಬರುತ್ತೇನೆ ಎನ್ನುತ್ತಾನೆ.

ಇದಕ್ಕೆ ಪ್ರತ್ಯುತ್ತರ ನೀಡುವ ಬಾಜಿರಾವ್ ಸಿಂಗಂ, ನನ್ನ ಬೆಂಬಲಕ್ಕೆ ಒಂದು ಜಿಲ್ಲೆಯೇ ಇದೆ. ನಾನು ಮರಾಠ, ನಿನ್ನಂಥ ಸಾವಿರ ನಾಯಿಗಳನ್ನು ಮಟ್ಟಹಾಕಲು ಒಬ್ಬ ಸಿಂಹ ಸಾಕು ಎಂಬ ಹೇಳಿಕೆ ನೀಡುತ್ತಾನೆ. ಇದು ಕನ್ನಡಿಗರ ಮನಸ್ಸನ್ನು ಕೆರಳಿಸಿದ ಸಂಭಾಷಣೆಯಾಗಿದೆ.

ಪ್ರಕಾಶ್ ರೈ ಪ್ರತಿಕ್ರಿಯೆ....
ಸಿಂಗಂ ಚಿತ್ರದಲ್ಲಿ ರೌಡಿ ಜಯಕಾಂತ್ ಶಿಕ್ರೆ ಪಾತ್ರದಲ್ಲಿ ನಟಿಸಿರುವ ಕನ್ನಡಿಗ ಪ್ರಕಾಶ್ ರೈ, ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದು, ಇದೊಂದು ಕೇವಲ ಮನರಂಜನಾತ್ಮಕ ಸಿನಿಮಾ. ನಾನೂ ಕನ್ನಡಿಗ. ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ ಕೂಡ ಕನ್ನಡಿಗರೆ.

ಇಲ್ಲಿ ಕನ್ನಡಿಗರಿಗೆ ಅವಹೇಳನ ಮಾಡುವ ಯಾವುದೇ ಉದ್ದೇಶ ಇಲ್ಲ. ಅಲ್ಲದೆ ಈ ಚಿತ್ರದಲ್ಲಿ ನನ್ನ ಪಾತ್ರ ಕೂಡ ಕನ್ನಡಿಗನೇದನಲ್ಲ. ನಾನೊಬ್ಬ ಜಯಕಾಂತ್ ಶಿಕ್ರೆ ಹೆಸರಿನ ಮರಾಠಿ ರೌಡಿಯ ಪಾತ್ರದಲ್ಲಿ ನಟಿಸಿದ್ದೇನೆ. ಇಲ್ಲಿ ಕನ್ನಡಿಗರಿಗೆ ಅವಹೇಳನ ಮಾಡುವ ಯಾವುದೇ ಉದ್ದೇಶ ಇಲ್ಲ ಎಂದಿದ್ದಾರೆ.

ಸಂಭಾಷಣೆಯಲ್ಲಿ ತಪ್ಪು ಇದ್ದಿದ್ದರೆ ತಿದ್ಕೋಬಹುದಿತ್ತು, ಇಲ್ಲಿ ಕನ್ನಡಿಗರನ್ನು ಗುರುತಿಸಿ ಯಾವುದೇ ಅವಹೇಳನಕಾರಿಯಾದ ಸಂಭಾಷಣೆಗಳಿಲ್ಲ. ಅಲ್ಲದೆ, ಇದೊಂದು ಅಪ್ಪಟ ಮನರಂಜನಾ ಆಧಾರಿತ ಸಿನಿಮಾ. ಕೆಲವು ಕಿಡಿಗೇಡಿಗಳು ಅನವಶ್ಯಕವಾಗಿ ಈ ರೀತಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರದಿಂದ ಸಂಬಾಷಣೆಗೆ ಕತ್ತರಿ.....
ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಲಯನ್ಸ್ ಬಿಗ್ ಪಿಕ್ಚರ್ಸ್‌ನ ಪಿಆರ್ಒ ಪ್ರಶಾಂತ್ ಸಿಂಬರಗಿ, ಶನಿವಾರದಿಂದ ಚಿತ್ರದ ಪ್ರದರ್ಶನದಲ್ಲಿ ವಿವಾದಿತ ಸಂಭಾಷಣೆಯನ್ನು ಮ್ಯೂಟ್ ಮಾಡಲಾಗುವುದು ಎಂದಿದ್ದಾರೆ.

ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ 'ಸಿಂಗಂ' ಚಿತ್ರವನ್ನು ಕನ್ನಡದಲ್ಲಿ 'ಕೆಂಪೇಗೌಡ' ಹೆಸರಿನಲ್ಲಿ ಸುದೀಪ್ ರಿಮೇಕ್ ಮಾಡಿದ್ದರು. ಕರ್ನಾಟಕದಾದ್ಯಂತ 'ಸೂಪರ್ ಹಿಟ್' ಆಗಿ ಚಿತ್ರ ಇಂದಿಗೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

ತಮಿಳು, ಕನ್ನಡದಲ್ಲಿ ಈಗಾಗಲೇ ಚಿತ್ರ ಬಂದಿರುವುದರಿಂದ ಸಾಹಸಕ್ಕೆ ಹೆಚ್ಚು ಮಹತ್ವ ಕೊಟ್ಟು ಹಿಂದಿಯಲ್ಲಿ 'ಸಿಂಗಂ' ಹೆಸರಿನಲ್ಲಿ ಸ್ವಲ್ಪ ವಿಭಿನ್ನವಾಗಿ ತೆಗೆಯಲಾಗಿದೆ.

ಗೋವಾ ಮಹಾರಾಷ್ಟ್ರ ಗಡಿಯ 'ಶಿವಘಡ' ಪ್ರದೇಶದಲ್ಲಿ ಮುಗ್ದ ಜನರನ್ನು ವಂಚಿಸುತ್ತಿರುವ ಕುಖ್ಯಾತ ರೌಡಿಯೊಬ್ಬನನ್ನು ನಿಷ್ಠಾವಂತ ಪೊಲೀಸ್ ಅಧಿಕಾರಿಯೊಬ್ಬ ಸದೆಬಡಿದು, ಆ ಊರಿನಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತಾನೆ. ಇದು ಹಿಂದಿ 'ಸಿಂಗಂ' ಚಿತ್ರದ ಸಂಕ್ಷಿಪ್ತ ವಿಮರ್ಶೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ