ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಿರಾತಕ ಯಶ್‌ರಿಂದ 'ಮೊದಲಾ ಸಲ' ಶತದಿನ ಸಂಭ್ರಮ (Modala sala | Yash | Thara | Rangayana Raghu)
PR
PR
ನಾಯಕನಟ ಯಶ್‌ರವರ ಅದೃಷ್ಟ ದಿನೇದಿನೇ ನಿಧಾನವಾಗಿ ಕುದುರುತ್ತಿದೆ ಎನಿಸುತ್ತಿದೆ. ಅವರ ಅಭಿನಯದ 'ರಾಜಧಾನಿ' ಮತ್ತು 'ಕಿರಾತಕ' ಚಿತ್ರಗಳು ಯಶಸ್ಸನ್ನು ದಾಖಲಿಸಿದ ಬೆನ್ನಿಗೇ ಅವರ ಅಭಿನಯದ 'ಮೊದಲಾ ಸಲ' ಚಿತ್ರವು ದಾವಣಗೆರೆಯ ತ್ರಿನೇತ್ರ ಚಿತ್ರಮಂದಿರದಲ್ಲಿ ಶತದಿನೋತ್ಸವವನ್ನು ಆಚರಿಸಿಕೊಂಡಿರುವುದು ಯಶ್‌ರವರ ಉತ್ಸಾಹಕ್ಕೆ ಮತ್ತಷ್ಟು ಬಲವನ್ನು ತುಂಬಿದೆ ಎನ್ನಬಹುದು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅತಿದೊಡ್ಡ ಚಿತ್ರಮಂದಿರವೆಂಬ ಖ್ಯಾತಿಯನ್ನು ಹೊಂದಿರುವ ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ಈ ಚಿತ್ರವು ಬಿಡುಗಡೆಯಾದ ಸಂದರ್ಭದಲ್ಲಿ 50 ದಿನಗಳ ಓಟವನ್ನು ಪೂರೈಸಿತ್ತು. ಜೊತೆಗೆ ಮಂಡ್ಯ ಮತ್ತು ಮೈಸೂರು ಪ್ರಾಂತ್ಯಗಳ ಜನರೂ ಚಿತ್ರವನ್ನು ಮೆಚ್ಚಿಕೊಂಡಿದ್ದರು. ಈಗ ದಾವಣಗೆರೆಯಲ್ಲಿಯ‌ೂ ಚಿತ್ರವು ನೂರುದಿನಗಳ ಓಟವನ್ನು ಕಂಡಿರುವುದರಿಂದ ಕನ್ನಡ ಚಿತ್ರಗಳ ಮಾರುಕಟ್ಟೆ ಅಥವಾ ಶತದಿನೋತ್ಸವದ ಸಂಭ್ರಮವು ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ ಎಂಬುದು ಸಾಬೀತಾದಂತಾಗಿದೆ.

ವೇಣು ಛಾಯಾಗ್ರಹಣ, ಹರಿಕೃಷ್ಣ ಸಂಗೀತವಿದ್ದ ಈ ಚಿತ್ರವನ್ನು ಕಥೆ-ಚಿತ್ರಕಥೆ-ಸಂಭಾಷಣೆ ಬರೆಯುವುದರೊಂದಿಗೆ ಪುರುಷೋತ್ತಮ್‌ ನಿರ್ದೇಶಿಸಿದ್ದರು. ಯಶ್‌, ತಾರಾ, ರಂಗಾಯಣ ರಘು ಮೊದಲಾದ ತಾರೆಯರ ಅಭಿನಯವಿರುವ ಈ ಚಿತ್ರ ಯಶಸ್ವೀ ಚಿತ್ರಗಳ ಪಟ್ಟಿಗೆ ಸೇರಿಕೊಂಡಿರುವುದರಿಂದ ಕನ್ನಡ ಚಿತ್ರಗಳ ಹೊಸಹೊಸ ಸಾಧ್ಯತೆಗಳ ಬಗ್ಗೆ ಮತ್ತು ಮಾರುಕಟ್ಟೆಯ ವಿಸ್ತರಣೆಯ ಬಗ್ಗೆ ಚಿತ್ರೋದ್ಯಮಿಗಳು ಆಲೋಚಿಸುವಂತೆ ಮಾಡಿದೆ.

ಎಲ್ಲಕ್ಕಿಂತ ಮುಖ್ಯವಾಗಿ, 'ಕಳ್ಳರ ಸಂತೆ' ಚಿತ್ರದ ದಿನಗಳಿಂದಲೂ ಅಸ್ತಿತ್ವವನ್ನು ಕಂಡುಕೊಳ್ಳಲು ಹೆಣಗಾಡುತ್ತಿದ್ದ, 'ರಾಜಧಾನಿ' ಹಾಗೂ 'ಕಿರಾತಕ' ಚಿತ್ರಗಳ ಯಶಸ್ಸಿನಿಂದ ಸಂಭ್ರಮಿಸುತ್ತಿರುವ ನಾಯಕನಟ ಯಶ್‌ಗೆ ಅವರು ಪಟ್ಟ ಕಷ್ಟಗಳು ಉತ್ತಮ ಪ್ರತಿಫಲವನ್ನು ನೀಡುತ್ತಿವೆ. 'ಮೊದಲಾ ಸಲ' ಚಿತ್ರದ ನೂರುದಿನದ ಓಟದ ಪರಂಪರೆಯನ್ನು ಅವರ ಉಳಿದ ಚಿತ್ರಗಳೂ ಅನುಸರಿಸಲಿ ಎಂದು ನಾವೂ-ನೀವೂ ಅವರಿಗೆ ಹಾರೈಸೋಣ.


ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ