ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಜಯ್ ಮನದಾಳದ ಬಯಕೆಯನ್ನು ಅವರದೇ ಮಾತಲ್ಲಿ ಓದಿ (Jarasanda | Vijay | Remake | Praneetha)
EVENT
'ಜರಾಸಂಧ' ಚಿತ್ರದ ವಿವರಗಳನ್ನು ಮಾಧ್ಯಮದ ಮಿತ್ರರೊಂದಿಗೆ ಹಂಚಿಕೊಳ್ಳಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಒಂದು ಹಂತದಲ್ಲಿ ನಾಯಕನಟ ವಿಜಯ್‌ ಸಂಪೂರ್ಣವಾಗಿ ಆವರಿಸಿಕೊಂಡರು. ಇಂಥ ಸಂದರ್ಭಗಳಲ್ಲಿ ಕಲಾವಿದರು ಚಿತ್ರದ ಕುರಿತಾಗಿ ಹೇಳಿಕೊಳ್ಳುವುದು ಸಹಜ, ಅದರಲ್ಲೇನು ವಿಶೇಷ ಎನ್ನಬೇಡಿ. ಈ ಸಂದರ್ಭದಲ್ಲಿ ಅವರು ಒಂದಷ್ಟು ಕಹಿಸತ್ಯಗಳನ್ನು ಹೊರಗೆಡವಿದರು ಮತ್ತು ಇವನ್ನು ಉದ್ಯಮದವರು ಗಂಭೀರವಾಗಿ ಪರಿಗಣಿಸಬೇಕು ಎಂಬುದೇ ಇಲ್ಲಿನ ಉದ್ದೇಶ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವಿಜಯ್‌ರವರ ಅಭಿಪ್ರಾಯಗಳನ್ನು ಅವರದೇ ಮಾತುಗಳಲ್ಲಿ ನೀಡಲಾಗಿದೆ:

''ಶಶಾಂಕ್‌ರವರನ್ನೂ ಒಳಗೊಂಡಂತೆ ಕನ್ನಡದಲ್ಲಿ ಅನೇಕ ಸಮರ್ಥ ನಿರ್ದೇಶಕರಿದ್ದು ಇವರು ಬೇರಾವ ಭಾರತೀಯ ಭಾಷೆಗೂ ಸವಾಲೊಡ್ಡಬಲ್ಲಂಥ ಚಿತ್ರಗಳನ್ನು ನಿರ್ದೇಶಿಸಬಲ್ಲ ಪರಿಣತಿಯನ್ನು ಹೊಂದಿದ್ದಾರೆ; ಆದರೆ ಕೊರತೆಯಿರುವುದು ಸಮರ್ಥ ನಿರ್ಮಾಪಕರದ್ದು. ಚಿತ್ರದ ಕಥೆ ಕೇಳುತ್ತಿದ್ದಂತೆ ನಿರ್ಮಾಪಕರು ಬಂಡವಾಳದ ಲೆಕ್ಕಾಚಾರ ಹಾಕುತ್ತಾ ಕೂತರೆ ಕನ್ನಡದ ಚಿತ್ರಗಳು ಪರಭಾಷಾ ಚಿತ್ರಗಳೊಂದಿಗೆ ಸ್ಪರ್ಧಿಸುವುದು ಸಾಧ್ಯವಾ?....

"ನಮ್ಮ ನಿರ್ಮಾಪಕರಿಗೆ ಕನ್ನಡದ ಕಥೆಗಳನ್ನು ನಿರ್ಮಿಸುವ ಆಸಕ್ತಿಯೇ ಇಲ್ಲ, ಅವರದೇನಿದ್ದರೂ ರಿಮೇಕ್‌ ಚಿತ್ರಗಳ ಕಡೆಗೇ ಒಲವು. ಇದರ ಜೊತೆಗೆ ಅದ್ದೂರಿತನ ಬಯಸುವ ದೃಶ್ಯಗಳಲ್ಲೂ ನಿರ್ಮಾಪಕರು ಜಿಪುಣತನ ತೋರುತ್ತಾರೆ. ಹೀಗಾಗಿ ಚಿತ್ರನಿರ್ಮಾಣಕ್ಕೆ ನಾನು ಇಳಿಯಬೇಕೆಂದಿರುವೆ. ಆದರೆ ನಮ್ಮ ಸಂಸ್ಥೆಯಿಂದ ರಿಮೇಕ್‌ ಚಿತ್ರಗಳು ಬರುವುದಿಲ್ಲ ಎಂಬುದಂತೂ ಸತ್ಯ"....

"ಕಾಲ್‌ಶೀಟ್‌ ನೀಡಿ ವಿಜಯ್‌ ಕೈಕೊಡುತ್ತಾನೆ ಎಂದು ನನ್ನ ಮೇಲೆ ಆರೋಪ ಹೊರಿಸುವವರಿದ್ದಾರೆ. ನಾಯಕ ನಟರಿಗೆ ಬೇಕಾಗುವ ರೂಪ-ಬಣ್ಣ ಮೊದಲಾದ ಲಕ್ಷಣಗಳಿಲ್ಲದ ನನ್ನನ್ನು ಚಿತ್ರರಂಗ ಬೆಳೆಸಿದೆ. ನಾನು ಹಾಗೆ ಮಾಡುತ್ತೇನೆಯೇ?"....

ಯಾವುದನ್ನೂ ಎದೆಗೂಡಿನಲ್ಲಿ ಬಚ್ಚಿಟ್ಟುಕೊಳ್ಳದೆ ನೇರಾನೇರವಾಗಿ ವಿಜಯ್‌ ಮಾತಾಡಿಬಿಡುತ್ತಾರೆ ಎಂಬುದು ಅವರನ್ನು ಬಲ್ಲ ಕೆಲವರ ಅಭಿಪ್ರಾಯ. ವಿಜಯ್‌ರವರ ಈ ಮಾತುಗಳು ಒಂದಷ್ಟು ಆತ್ಮಾವಲೋಕನಕ್ಕೆ ಎಡೆಮಾಡಿಕೊಡುವುದೇ ಆದಲ್ಲಿ ಅದು ಸ್ವಾಗತಾರ್ಹವಲ್ಲವೇ?

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ