ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹುಡುಗರ ಜೊತೆ 'ವಿನಾಯಕ ಗೆಳೆಯರ ಬಳಗ' ಸಂಭ್ರಮಿಸಿಬಿಟ್ಟರಲ್ಲಾ! (Vinayaka Geleyara Balaga | Kirathaka | Hudugaru | Vijayaraghavendra)
EVENT
'ವಿನಾಯಕ ಗೆಳೆಯರ ಬಳಗ' 'ಕಿರಾತಕ' 'ಹುಡುಗರು' 'ಜಾನಿ ಮೇರಾ ನಾಮ್‌....' ಎನ್ನುತ್ತಲೇ ಸಂಭ್ರಮಿಸಿಬಿಟ್ಟರಲ್ಲಾ?!!, ಕನ್ನಡ ಚಿತ್ರಗಳ ದೆಸೆ ತಿರುಗಿದಂತಿದೆ ಎಂದು ಹಿಂದೊಮ್ಮೆ ಈ ಅಂಕಣದಲ್ಲಿ ಹೇಳಿದ್ದಕ್ಕೆ ಇಲ್ಲಿದೆ ನೋಡಿ ಮತ್ತಷ್ಟು ಪುರಾವೆಗಳು. ಯಶ್‌ ಅಭಿನಯದ 'ಕಿರಾತಕ' 50 ದಿನಗಳ ಸಂಭ್ರಮದಲ್ಲಿದ್ದರೆ, 'ವಿನಾಯಕ ಗೆಳೆಯರ ಬಳಗ' 50 ದಿನಗಳನ್ನೂ ದಾಟಿ ಮುನ್ನುಗ್ಗಿದೆ. 75 ದಿನಗಳ ಪ್ರದರ್ಶನದ ಸಂಭ್ರಮದಲ್ಲಿ 'ಜಾನಿ ಮೇರಾ ನಾಮ್‌ ಪ್ರೀತಿ ಮೇರಾ ಕಾಮ್‌' ಚಿತ್ರವಿದ್ದರೆ, 'ಹುಡುಗರು' ಶತದಿನೋತ್ಸವದ ಪುಳಕವನ್ನು ಅನುಭವಿಸುತ್ತಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಒಂದು ಸಂಗತಿಯನ್ನು ನಾವು ನೀವೆಲ್ಲರೂ ಗಮನಿಸಬೇಕು. 'ಚಿತ್ರ ಶತದಿನೋತ್ಸವವನ್ನು ಕಂಡು ಆಗಬೇಕಿರುವುದು ಅಷ್ಟರಲ್ಲೇ ಇದೆ, ಬಿಡುಗಡೆಯಾದ ಮೊದಲವಾರದಲ್ಲೇ ದುಡ್ಡು ಬಾಚಿಕೊಂಡರೆ ಆಯಿತು' ಎಂಬ ಧೋರಣೆಯಿಂದ ಒಂದೇ ಏಟಿಗೆ ನೂರೈವತ್ತು-ಇನ್ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವವರ ದೃಷ್ಟಿಕೋನವು ಅವರ ಮಟ್ಟಿಗೆ ಸರಿಯೇ ಇರಬಹುದು.

ಆದರೆ ಚಿತ್ರವೊಂದರ ನಿಜವಾದ ಸಂಭ್ರಮ ಹೊರಹೊಮ್ಮುವುದು ಅದು ನೂರು ದಿನಗಳ ಓಟದ ಸಂಭ್ರಮವನ್ನು ಕಂಡಾಗಲೇ ಎಂಬ ಮಾತು ಸತ್ಯ (ಚಿತ್ರಮಂದಿರದಲ್ಲಿ ಜನರಿಲ್ಲದಿದ್ದರೂ ಹುಸಿ ಪ್ರತಿಷ್ಠೆಗಾಗಿ 100 ದಿನಗಳ ಕಾಲ ಚಿತ್ರವನ್ನು 'ಓಡಿಸುವವರಿಗೆ' ಈ ಮಾತು ಅನ್ವಯಿಸೋಲ್ಲ ಬಿಡಿ...!!). ಅದು ಒಂದು ರೀತಿಯಲ್ಲಿ ಹಬ್ಬದ ವಾತಾವರಣದ ಮತ್ತು ಹಬ್ಬದೂಟದ ಸಂಭ್ರಮವನ್ನು ನೀಡುತ್ತದೆ ಎಂಬುದು ಹಲವರ ಅಭಿಪ್ರಾಯ.

ನೀವು ಇನ್ನೊಂದು ಅಂಶವನ್ನು ಗಮನಿಸಿರಬಹುದು. ಮೇಲಿನ ಎಲ್ಲಾ ಚಿತ್ರಗಳಲ್ಲೂ ಯಶಸ್ಸು ಕಂಡಿರುವುದು ಹುಡುಗರು ಹುಡುಗರೇ ಸೇರಿ ಕಟ್ಟಿರುವ ಚಿತ್ರಗಳು. ಬದಲಾವಣೆಯ ಗಾಳಿ ಕನ್ನಡದಲ್ಲೂ ಬೀಸುತ್ತಿದೆ ಎಂಬುದಕ್ಕೆ ಇಲ್ಲೊಂದು ಪುರಾವೆ ಸಿಕ್ಕಿರುವುದು ಸಂತಸದ ಸಂಗತಿಯಲ್ಲವೇ? ಜನರನ್ನು ಚಿತ್ರಮಂದಿರದತ್ತ ಎಳೆಯುವ ತಾಕತ್ತು ಕನ್ನಡದ ಪ್ರತಿಭೆಗಳಿಗೂ ಇದೆ ಎಂಬುದನ್ನು ಈ ನಾಲ್ಕು ಯಶಸ್ಸುಗಳು ಸಾಬೀತು ಮಾಡಿವೆ. ಇನ್ನಾದರೂ ನಮ್ಮ ಚಿತ್ರೋದ್ಯಮಿಗಳು 'ರೀಲು ಸುತ್ತುವ' ಕಾಯಕವನ್ನು ಬಿಟ್ಟು ನಿಜವಾದ ಅರ್ಥದಲ್ಲಿ ಚಿತ್ರಕೃಷಿಯನ್ನು ಮಾಡಲಿ ಎಂಬುದು ನಮ್ಮ ಬಯಕೆ.

ಮೇಲಿನ ನಾಲ್ಕೂ ಚಿತ್ರಗಳ ಚಿತ್ರತಂಡಗಳಿಗೂ ಶುಭಾಶಯಗಳು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ