ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರತಿಭಾವಂತ ನಿರ್ದೇಶಕರನ್ನು ಪರಿಚಯಿಸುವ 'ಕಾನ್ಫಿಡಾ' (Kanfida | Puttanna kanagal | M.S.Ramesh | Kannada Movies)
EVENT
ಖ್ಯಾತ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲರು ಮಹತ್ವಾಕಾಂಕ್ಷೆಯೊಂದಿಗೆ ಸ್ಥಾಪಿಸಿದ ಸಂಸ್ಥೆಯೇ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ (ಕಾನ್ಫಿಡಾ). ಇದು ಸ್ಥಾಪನೆಯಾಗಿ 27 ವರ್ಷಗಳು ಸಂದವು ಎಂದರೆ ಅಚ್ಚರಿಯಾಗುತ್ತದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ರಜತ ಮಹೋತ್ಸವದ ಸಂಭ್ರಮದಲ್ಲಿರುವ ಈ ಸಂಸ್ಥೆ ಚಲನಚಿತ್ರರಂಗವನ್ನು ಸುಧಾರಿಸಿ, ಗುಣಾತ್ಮಕತೆಯನ್ನು ತಂದುಕೊಟ್ಟು, ಚಿತ್ರರಂಗಕ್ಕೆ ಪ್ರತಿಭಾವಂತ ನಿರ್ದೇಶಕರನ್ನು ಪರಿಚಯಿಸುವ ಗುರಿಗಳನ್ನು ಹೊಂದಿದ್ದು ಪ್ರತಿ ವರ್ಷವೂ 50 ಮಂದಿ ಪ್ರತಿಭಾವಂತರನ್ನು ಬಣ್ಣದ ಲೋಕಕ್ಕೆ ನೀಡುತ್ತಿದೆ. ಹೆಸರಾಂತ ನಿರ್ದೇಶಕರು ಇಲ್ಲಿ ಬೋಧನೆಯ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದೂ ಸಹ ಈ ಸಂಸ್ಥೆಯ ಹೆಗ್ಗಳಿಕೆ.

ಸಂಘದ ಆಶ್ರಯದಲ್ಲಿರುವ ಕಾನ್ಫಿಡಾ ಫಿಲ್ಮ್‌ ಇನ್‌‌ಸ್ಟಿಟ್ಯೂಟ್‌ನ 23ನೇ ತಂಡದ ನಿರ್ದೇಶನ ತರಗತಿಗಳು ಈಗಾಗಲೇ ಆರಂಭವಾಗಿದ್ದು, ಚಿತ್ರಕಥೆಯ ರಚನೆಯಿಂದ ಮೊದಲ್ಗೊಂಡು ಬೆಳ್ಳಿತೆರೆಗೆ ಚಿತ್ರವನ್ನು ತರುವವರೆಗಿನ ಹಲವು ಹಂತಗಳನ್ನು ಹೇಳಿಕೊಡಲಾಗುತ್ತದೆ ಎಂದು ತಿಳಿದುಬಂದಿದೆ.

ಕಥೆ-ಚಿತ್ರಕಥೆ-ಸಂಭಾಷಣೆ-ಛಾಯಾಗ್ರಹಣ-ಸಂಕಲನ-ಡಬ್ಬಿಂಗ್‌-ರೀರೆಕಾರ್ಡಿಂಗ್‌ ಇವೇ ಮೊದಲಾದ ಕ್ಷೇತ್ರಗಳಲ್ಲಿನ ಪರಿಣತಿಯನ್ನು ಒಂದೇ ಸೂರಿನಡಿ ಕಲಿಯಲು ಬಯಸುವವರಿಗೆ 'ಕಾನ್ಫಿಡಾ' ಒಂದು ಭರವಸೆಯ ತಾಣವೆಂದರೆ ತಪ್ಪಾಗಲಾರದು. ಪ್ರಸ್ತುತ ನಿರ್ದೇಶಕ ಎಂ.ಎಸ್‌.ರಮೇಶ್‌ ಇದರ ಅಧ್ಯಕ್ಷರಾಗಿದ್ದು ಸಂಸ್ಥೆಯ ಅಭಿವೃದ್ಧಿಗೆ ಹಲವು ಹನ್ನೊಂದು ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ.

ಪುಟ್ಟಣ್ಣ ಕಣಗಾಲರ ಮಹತ್ವಾಕಾಂಕ್ಷೆಗಳು ಎಂ.ಎಸ್‌.ರಮೇಶ್‌ರವರ ಮ‌ೂಲಕ ಈಡೇರಲಿ ಎಂದು ಹಾರೈಸೋಣ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ