ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹಿಟ್ ಚಿತ್ರಗಳ ಸರದಾರನಿಗೆ ಬೇಕಿದೆ ನವಚೈತನ್ಯ (Sai prakash | Muddina Mava | Director | Kannada Movies)
EVENT
ಒಂದರ ನಂತರ ಒಂದರಂತೆ ಹಿಟ್ ಚಿತ್ರಗಳನ್ನು ನೀಡಿದ ಹಾಗೂ ತನ್ಮೂಲಕ ಹಲವರ ಹಣದ ಥೈಲಿಗಳು ತುಂಬುವಂತೆ ಮಾಡಿದ ಸಾಯಿಪ್ರಕಾಶ್ ಈಗ ಉದ್ಯಮದವರ ಉಪೇಕ್ಷೆಗೆ ಒಳಗಾಗಿದ್ದಾರೆಯೇ? ಗೊತ್ತಿಲ್ಲ. ಆದರೆ ಅವರನ್ನೀಗ ಬೆನ್ನುತಟ್ಟಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂಬುದಂತೂ ಸತ್ಯ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸ್ವತಃ ಸೃಜನಶೀಲ ನಿರ್ದೇಶಕರಾಗಿದ್ದರೂ ತಮ್ಮನ್ನು ಓರ್ವ ಕಾರ್ಮಿಕ ಎಂದೇ ಕರೆದುಕೊಳ್ಳುತ್ತಿದ್ದ ಸಾಯಿಪ್ರಕಾಶ್ ಸೆಟ್‌ನಲ್ಲಿ ಇರುವಷ್ಟು ಹೊತ್ತೂ ಕಾಕಿ ಬಟ್ಟೆಯನ್ನೇ ಧರಿಸುತ್ತಿದ್ದರು. ತಿಂಗಳಾನುಗಟ್ಟಲೆ ಅವಧಿಯನ್ನು ಬಳಸಿಕೊಂಡು ಚಿತ್ರಗಳನ್ನು ತೆಗೆಯುತ್ತಿದ್ದವರ ಮಧ್ಯದಲ್ಲಿ, ತೆಲುಗಿನಿಂದ ಚಿತ್ರಗಳ ಹಕ್ಕುಗಳನ್ನು ಪಡೆದು ಕೇವಲ 15 ದಿನಗಳಲ್ಲಿ ಅದರ ಕನ್ನಡ ಅವತರಣಿಕೆಯನ್ನು ಮುಗಿಸಿಕೊಡುತ್ತಿದ್ದ ಸಾಯಿಪ್ರಕಾಶ್ ಒಂದು ಅಚ್ಚರಿ ಎನಿಸಿಕೊಂಡಿದ್ದರು.

ಇಂಥದೊಂದು ಶೈಲಿಯು ನಿಜವಾದ ಅರ್ಥದಲ್ಲಿ ನಿರ್ಮಾಪಕನನ್ನು ಉಳಿಸುತ್ತಿದ್ದುದೇ ಅಲ್ಲದೇ, ಹಲವಾರು ಕಲಾವಿದರು ಮತ್ತು ತಂತ್ರಜ್ಞರಿಗೆ ಕೈತುಂಬ ಕೆಲಸವನ್ನು ನೀಡಿತ್ತು. 'ಗೋಲ್ಮಾಲ್ ರಾಧಾಕೃಷ್ಣ', 'ರೋಲ್ಕಾಲ್ ರಾಮಕೃಷ್ಣ', 'ಮುದ್ದಿನ ಮಾವ', 'ಸಮಯಕ್ಕೊಂದು ಸುಳ್ಳು', 'ಆತಂಕ', 'ಗಡಿಬಿಡಿ ಅಳಿಯ' ಮೊದಲಾದ ಚಿತ್ರಗಳನ್ನು ಒಂದರ ಹಿಂದೆ ಒಂದರಂತೆ ಅವರು ನಿರ್ದೇಶಿಸಿದ್ದು ಈ ಮಾತಿಗೆ ಪುಷ್ಟಿ ನೀಡುತ್ತದೆ.

ಆದರೆ ಶಿವಣ್ಣ ನಾಯಕತ್ವದಲ್ಲಿ ಅವರು ನಿರ್ಮಿಸಿ ನಿರ್ದೇಶಿಸಿದ 'ದೇವರು ಕೊಟ್ಟ ತಂಗಿ' ಚಿತ್ರವು ಹಣಗಳಿಕೆಯಲ್ಲಿ ವಿಫಲವಾಗಿ ಸಾಲಗಾರರ ಕಾಟ ಹೆಚ್ಚಾದಾಗ ಸಾಯಿಪ್ರಕಾಶ್ ಅವರ ಆತ್ಮಹತ್ಯೆಯಂಥ ಪ್ರಯತ್ನಕ್ಕೂ ಕೈಹಾಕಿದರು. ಆದರೆ ದೇವರ ದಯೆಯಿಂದ ಬಚಾವಾದರೆನ್ನಬೇಕು. ಕೈನಡೆಯುತ್ತಿದ್ದ ಸಮಯದಲ್ಲಿ ಮಾಡಿಟ್ಟುಕೊಂಡಿದ್ದ ಆರೇಳು ನಿವೇಶನಗಳು ಮತ್ತು ಮನೆಯೊಂದನ್ನು ಸಾಯಿಪ್ರಕಾಶ್ ಸಾಲದ ತೀರುವಳಿಗಾಗಿ ಮಾರಬೇಕಾಗಿ ಬಂತು. ಇಷ್ಟಾಗಿಯೂ ಇನ್ನೂ ಇಪ್ಪತ್ತೈದು ಲಕ್ಷಗಳಷ್ಟು ಸಾಲವನ್ನು ತೀರಿಸುವುದಿದೆಯೆಂತೆ.

ಸಾಯಿಪ್ರಕಾಶ್‌ ರಿಂದ ಚಿತ್ರ ಮಾಡಿಸಿಕೊಂಡು ದುಡ್ಡು ಮಾಡಿದವರು, ಅವರಿಂದ ಅವಕಾಶಗಳನ್ನು ಪಡೆದು ಮೇಲೆ ಬಂದವರು ಈ ನಿಟ್ಟಿನಲ್ಲಿ ಕೊಂಚ ಗಮನಹರಿಸಿ ಅವರಿಗೆ ನೆರವಾಗುವಂತಾದರೆ ಅಥವಾ ಚಿತ್ರ ನಿರ್ದೇಶನಕ್ಕೆ ಅನುವು ಮಾಡಿಕೊಡುವುದಾದರೆ ಅದು ನಿಜಕ್ಕೂ ಸ್ವಾಗತಾರ್ಹ ಮತ್ತು ಶ್ಲಾಘನೀಯ. ಸಂಬಂಧಪಟ್ಟವರು ಈ ಕುರಿತು ಗಮನ ಹರಿಸುವಂತಾಗಲಿ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ