ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಮ್‌ ದೇವರ ಸತ್ಯ ನಮಗ್ಗೊತ್ತಿಲ್ವೇ...?!! (Jogayya | Prem | Gossip | Shivaraj kumar)
EVENT
ಫುಟ್‌ಪಾತಲ್ಲಿ ಚಿತ್ರಾನ್ನ ತಿನ್ನಲು ಹವಣಿಸುತ್ತಿದ್ದ ತಿಪ್ಪೇಶಿಗೆ ದೂರದಲ್ಲಿ ಕಲ್ಲೇಶಿ ಬರುತ್ತಿರುವುದು ಕಾಣಿಸಿತು. ಏನಾಶ್ಚರ್ಯ?!! ವರ್ಷಪೂರ್ತಿ ಗೋಣಿಚೀಲದಂಥ ಬಟ್ಟೆಯಲ್ಲಿ ಕಂಗೊಳಿಸುತ್ತಿದ್ದ ಕಲ್ಲೇಶಿಯು ಅವತ್ತು ಕಾರ್ಡ್‌ರಾಯ್‌ ಪ್ಯಾಂಟು ಮತ್ತು ಕಲರ್‌ಪ್ಲಸ್‌ ಟೀಷರ್ಟು ಧರಿಸಿದ್ದ. ಕಣ್ಣಿಗೆ ತಂಪು ಕನ್ನಡಕ, ಕೈಯಲ್ಲಿ 555 ಸಿಗರೇಟು ತಾಂಡವವಾಡುತ್ತಿದ್ದವು. ಒಂದು ರೀತಿಯಲ್ಲಿ ಕಲಾಸಿಪಾಳ್ಯದ ಶಾರುಖ್‌ಖಾನ್‌ ರೀತಿಯಲ್ಲಿ ಅವನು ಕಂಗೊಳಿಸುತ್ತಿದ್ದ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅವನ ಬಳಿ ಸಾಗಿಬಂದ ತಿಪ್ಪೇಶಿ, 'ಏನ್‌ ಮಚ್ಚೀ...? ನನ್ನ ಕಣ್ಣನ್ನೇ ನಂಬಕ್ಕಾಗ್ತಾ ಇಲ್ವಲ್ಲ ಮಗಾ? ಕಂಬಳೀಹುಳದ ಥರಾ ಇದ್ದ ನೀನು ಚಿಟ್ಟೆ ಥರಾ ಆಗಿದ್ದು ಹೆಂಗಲಾ? ಯಾವ್ದಾರಾ ಪಾಳುಬಿದ್ದಿರೋ ದೇವಸ್ಥಾನದ ಬಳಿ ನಿಧಿ ಅಗಿಯಕ್ಕೆ ಹೋಗಿದ್ಯಾ? ಹಿಂಗೆ ಮಿಂಚಕ್ಕೆ ಎಲ್ಲಿತ್ತಲಾ ದುಡ್ಡು ಬಡ್ಡೆತ್ತದೇ?' ಎಂದು ಒಂದೇ ಸಮನೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ.

ಕಲ್ಲೇಶಿಯು ಅವನನ್ನು ಸಮಾಧಾನಪಡಿಸುತ್ತಾ, 'ಲೇಯ್‌, ನಿಧಿಯೂ ಇಲ್ಲ, ಲಾಟರೀನೂ ಇಲ್ಲ; ಬೆಟ್ಟಿಂಗ್‌ ಕಟ್ಟಿದ್ದೆ ಮಗಾ, ಒಂದೇ ಏಟಿಗೆ ಐದು ಸಾವಿರ ಗೆದ್ದೆ. ಅದಕ್ಕೇ ಈ ವೇಷ' ಎಂದು ಅಯೋಮಯವಾಗಿ ನುಡಿದ.
ಅವನ ಒಗಟಿನಂಥ ಮಾತುಕೇಳಿ ಕೆರಳಿದ ತಿಪ್ಪೇಶಿಯು ಅವನ ಕೊರಳಪಟ್ಟಿ ಹಿಡಿದುಕೊಂಡು, 'ಮಗನೇ, ಕಿವೀ ಮೇಲೆ ತಾವರೆ ಹೂವು ಇಟ್ರೆ ತಡ್ಕೋಬಹುದು, ಹೂಕೋಸು ಇಟ್ಟರೂ ತಡ್ಕೋಬಹುದು. ಸಾಕ್ಷಾತ್‌ ಲಾಲ್‌ಬಾಗನ್ನೇ ನನ್ನ ಕಿವೀಲಿ ಇಡಕ್ಕೆ ಬರ್ತೀಯಾ? ಬೆಟ್ಟಿಂಗ್‌ ಕಟ್ಟಾಕೆ ಈಗೇನು ವಿಧಾನಸಭೆ ಚುನಾವಣೆ ಇತ್ತೇನ್ಲಾ, ಅಥವಾ ವರ್ಲ್ಡ್‌ಕಪ್‌ ಕ್ರಿಕೆಟ್‌ ಇತ್ತೇನ್ಲಾ? ನಿಜ ಹೇಳಿದ್ರೆ ಬದುಕ್ಕತೀಯಾ' ಎಂದು ಟಗರಿನಂತೆ ಉಸಿರುಬಿಟ್ಟ.

ಅವನ ಹಿಡಿತವನ್ನು ನಯವಾಗಿ ಬಿಡಿಸಿಕೊಂಡ ಕಲ್ಲೇಶಿ, 'ಅಯ್‌ ನಿನ್ನಾ...! ಬೆಟ್ಟಿಂಗ್‌ ಕಟ್ಟಾಕೆ ಅವಿಷ್ಟೇನೇ ಅವಕಾಶ ಇರಾದೂ? ಹೇಳ್ತೀನಿ ಕೇಳು: ಆಗಸ್ಟ್‌ 1ನೇ ತಾರೀಕು ಮಂಡ್ಯಕ್ಕೆ ಹೋಗಿದ್ನಾ? ನಿರ್ದೇಶಕ ಪ್ರೇಮ್‌ ಅಭಿಮಾನಿ ಒಬ್ಬನ ಪರಿಚಯವಾಯ್ತು. ಅವನು 'ಜೋಗಯ್ಯ' ಸಿನಿಮಾದ ಬಿಡುಗಡೆ ಬಗ್ಗೆ ಹುರುಪಿನಿಂದ ಮಾತಾಡ್ತಾ, 'ನಮ್‌ ಗುರು ಪ್ರೇಮ್‌ ಹೇಳವ್ರೆ, 'ಜೋಗಯ್ಯ' ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಜ್‌ ಆಯ್ತದಂತೆ, ನಾಳೆಯಿಂದ್ಲೇ ಟಿಕೀಟು ಕೊಡ್ತಾರಂತೆ' ಅಂದ. ನಿರ್ದೇಶಕ ಪ್ರೇಮ್‌ ಹೆಂಗೆ ಬೂಸಿ ಬಿಡ್ತಾರೆ ಅಂತ ಗೊತ್ತಿದ್ದ ನಾನು ಅದು ಅವತ್ತು ರಿಲೀಸಾಗಲ್ಲ ಅಂದೆ' ಎಂದು ಹೇಳಿ ಒಮ್ಮೆ ಹೊಗೆ ಬಿಟ್ಟ.

'ಆಮೇಲೇನಾಯ್ತು?' ಕುತೂಹಲ ತಾಳಲಾರದೆ ತಿಪ್ಪೇಶಿ ಮಧ್ಯೆ ಬಾಯಿಹಾಕಿದ.

ಕಲ್ಲೇಶಿಯು ತನ್ನ ಮಾತು ಮುಂದುವರಿಸುತ್ತಾ, 'ಆ ಅಭಿಮಾನಿ, 'ಆಗೇ ಆಯ್ತದೆ; ಬೇಕಿದ್ರೆ ಬೆಟ್‌ ಕಟ್ತೀರಾ 5000 ರೂಪಾಯೀ?' ಅಂದ. ಸರಿ ಕಣಪ್ಪಾ ಅಂದೆ. ಆದರೆ ನಮ್‌ ದೇವರ ಸತ್ಯ ನಮಗೆ ಗೊತ್ತಿಲ್ವೇ? ಚಿತ್ರದ ಬಿಡುಗಡೆ ಒಂದು ವಾರ ಮುಂದಕ್ಕೆ ಹೋಯ್ತಲ್ಲಾ? ಆತ ಮಾತೇ ಆಡದೆ 5000 ರೂಪಾಯಿ ಕೊಟ್ಟು ಹೋದ. ಆ ದುಡ್ಡಿನಾಗೇ ಇವೆಲ್ಲಾ ತಕ್ಕಂಡೆ. ಇನ್ನೂ ದುಡ್ಡು ಉಳಿದೈತೆ. ಫುಟ್‌ಪಾತಲ್ಲಿ ಯಾಕೆ ಚಿತ್ರಾನ್ನ ತಿಂತೀಯ? ಬಾ, ಸುಖಸಾಗರ್‌ನಲ್ಲಿ ನಾರ್ತ್‌ ಇಂಡಿಯನ್‌ ಊಟ, ಐಸ್‌ಕ್ರೀಮು ಕೊಡಿಸ್ತೀನಿ' ಅಂದ.

ಗಾಂಧಿನಗರದ ಲೈಟುಕಂಬದ ಅಡಿಯಲ್ಲೇ ಬದುಕುವ ದಾರಿಯನ್ನು ಸಾಕ್ಷಾತ್ಕರಿಸಿಕೊಟ್ಟ ಕಲ್ಲೇಶಿಯೆಂಬ ಗುರುವಿಗೆ ತಿಪ್ಪೇಶಿ ರಸ್ತೆಯಲ್ಲೇ ಅಡ್ಡಬಿದ್ದ...!!

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ