ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಮಸ್ಯೆಗಳನ್ನು ನಿವಾರಿಸಿ ಹೀರೋ ಆದ ಮುನಿರತ್ನ (Munirathna | Producer | Director | Producers Association)
EVENT
ನಿರ್ಮಾಪಕರ ಸಂಘಕ್ಕೆ ಅಧ್ಯಕ್ಷರಾಗಲು ನಿರ್ಮಾಪಕ ಮುನಿರತ್ನ ಆಶಿಸಿದ್ದಾರೆ ಎಂಬ ಸುದ್ದಿ ಕೆಲದಿನಗಳ ಹಿಂದೆ ಕೇಳಿಬರುತ್ತಿದ್ದಾಗ, ನಿರ್ಮಾಪಕರ ವಲಯದಲ್ಲಿ ತಲೆದೋರಿರುವ ಸಮಸ್ಯೆಯನ್ನು ಇವರು ಬಗೆಹರಿಸಬಲ್ಲರೇ ಎಂಬ ಸಂದೇಹ ಅವರಿವರಲ್ಲಿ ಮೂಡಿದ್ದು ನಿಜ. ಆದರೆ ಮ್ಯಾಜಿಕ್‌ ಮಾಡುವ ರೀತಿಯಲ್ಲಿ ಅವರು ಒಂದಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದು ಅದೀಗ ಉದ್ಯಮದವರ ಮೆಚ್ಚುಗೆಗೆ ಕಾರಣವಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬೆಳ್ಳಿತೆರೆಯಲ್ಲಿ ಮಿಂಚುವ ತಾರೆಗಳ ಕುರಿತು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಚಲನಚಿತ್ರಗಳ ನಿರ್ಮಾಣದಲ್ಲಿ ಎಲೆಮರೆಯ ಕಾಯಿಗಳಂತೆ ತೊಡಗಿಸಿಕೊಳ್ಳುವ ಒಕ್ಕೂಟದ ಕಾರ್ಮಿಕರ ಸಮಸ್ಯೆಗಳು ಹೊರಗಿನ ಪ್ರಪಂಚಕ್ಕೆ ತಿಳಿಯುವುದೇ ಇಲ್ಲ. ಕಾರ್ಮಿಕರ ವೇತನದ ವಿಚಾರ ಇಂಥದೊಂದು ಸಮಸ್ಯೆಯಾಗಿತ್ತು.

ತಾರೆಯರಿಗೆ ಕೋಟಿಗಟ್ಟಲೆ ಹಣ ಸುರಿಯುವ ಮತ್ತು ಕೇಳಿದ ಸವಲತ್ತುಗಳನ್ನೆಲ್ಲಾ ನೀಡುವ ನಿರ್ಮಾಪಕರು ಚಿತ್ರವೊಂದಕ್ಕೆ ಬೆವರು ಮತ್ತು ರಕ್ತವನ್ನು ಬಸಿಯುವ ಕಾರ್ಮಿಕರನ್ನು ಉಪೇಕ್ಷಿಸುತ್ತಿದ್ದಾರೆ ಎಂಬ ಅಸಮಾಧಾನ ಬಹಳ ದಿನಗಳಿಂದಲೂ ಈ ವಲಯದಲ್ಲಿ ಹೊಗೆಯಾಡುತ್ತಿತ್ತು. ಕಾರ್ಮಿಕರನ್ನು ಮತ್ತು ನಿರ್ಮಾಪಕರನ್ನು ಒಂದೆಡೆ ಸೇರಿಸಿ ಮಾತುಕತೆಯ ವಾತಾವರಣವನ್ನು ಸೃಷ್ಟಿಸಿದ ಮುನಿರತ್ನ ಆ ಸಮಸ್ಯೆಯನ್ನು ಹೂ ಎತ್ತಿದಂತೆ ನಿವಾರಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆಯಂತೆ.

ಇದೇ ಬಗೆಯಲ್ಲಿ ನೃತ್ಯ ನಿರ್ದೇಶಕರ ಸಂಘದಲ್ಲಿ ಕಳೆದ ಕೆಲವು ದಿನಗಳಿಂದ ತಲೆದೋರಿದ್ದ ಸಮಸ್ಯೆಯನ್ನೂ ಮುನಿರತ್ನ ಬಗೆಹರಿಸಿದ್ದಾರಂತೆ. ಇದು ಒಂದರ್ಥದಲ್ಲಿ ಚಿತ್ರೀಕರಣದ ಚಟುವಟಿಕೆಗಳಿಗೆ ನವಚೈತನ್ಯವನ್ನು ತುಂಬಿದೆ ಎಂದೇ ಹೇಳಬೇಕು. ಏಕೆಂದರೆ ನೃತ್ಯ ಕಲಾವಿದರ ಹರತಾಳದ ಕಾರಣದಿಂದಾಗಿ 'ಪರಮಾತ್ಮ' ಚಿತ್ರವೂ ಸೇರಿದಂತೆ ಹಲವು ಚಿತ್ರಗಳ ಹಾಡುಗಳ ಚಿತ್ರೀಕರಣವು ಬಾಕಿ ಉಳಿದಿತ್ತು. ಅದೀಗ ಸುಸೂತ್ರಗೊಂಡಿರುವುದರಿಂದ ಸಂಬಂಧಪಟ್ಟವರು ಮುನಿರತ್ನರಿಗೆ ಇದ್ದ ಕಡೆಯಿಂದಲೇ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದಾರಂತೆ.

ಇದೇ ರೀತಿಯಲ್ಲಿ ಕನ್ನಡ ಚಿತ್ರೋದ್ಯಮದ ಉಳಿದ ವಲಯಗಳು ತಮ್ಮ ತಮ್ಮಲ್ಲಿ ಬೀಡುಬಿಟ್ಟಿರುವ ಸಮಸ್ಯೆಗಳನ್ನು ಸರಳ ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳುವಂತಾದರೆ ಒಳ್ಳೆಯದಲ್ಲವೇ?

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ