ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಿಡುಗಡೆಗೆ ಸಾಲುಗಟ್ಟಿ ನಿಂತಿವೆ ಹೊಸ ಚಿತ್ರಗಳು (Paramathma | Raja Vishnuvardhana | Sarathy | Jarasanda)
EVENT
ಕನ್ನಡ ಚಿತ್ರಗಳಿಗೆ ಮಾರುಕಟ್ಟೆಯೇ ಇಲ್ಲ ಎಂದು ಗೊಣಗುತ್ತಲೇ ನಮ್ಮ ಚಿತ್ರೋದ್ಯಮಿಗಳು ಹೊಸ ಚಿತ್ರಗಳನ್ನು ಸೆಟ್ಟೇರಿಸುತ್ತಿರುವುದು ಮತ್ತು ಬಿಡುಗಡೆಗೆ ಸಜ್ಜುಗೊಳಿಸುತ್ತಿರುವುದು ನಡೆದೇ ಇದೆ. ಲಾಭ ಬರಲಿ ಅಥವಾ ನಷ್ಟವೇ ಆಗಲಿ, 'ದಿ ಷೋ ಮಸ್ಟ್‌ ಗೋ ಆನ್‌' ಎಂಬ ಅಭಿಪ್ರಾಯ ಇದಕ್ಕೆ ಕಾರಣವೋ ಅಥವಾ ಇದರ ಹಿಂದೆ ಬೇರಾವುದಾದರೂ ಹಿತಾಸಕ್ತಿಗಳು ಅಡಗಿವೆಯೋ ಎಂಬುದನ್ನು ಸಂಬಂಧಪಟ್ಟವರೇ ಹೇಳಬೇಕು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸೀಮಿತ ಮಾರುಕಟ್ಟೆ ಎಂದು ಹೇಳಿಕೊಳ್ಳುವ ಕನ್ನಡ ಚಿತ್ರರಂಗದಲ್ಲಿ ಹಿಂಡುಗಟ್ಟಲೆ ಚಿತ್ರಗಳು ಒಂದೇ ದಿನದಂದು ಅಥವಾ ಒಂದು ವಾರದ ಅಂತರದಲ್ಲಿ ಬಿಡುಗಡೆಯಾದರೆ ಆಗುವ ಅನಾಹುತಗಳೇನು ಎಂಬುದನ್ನು ಈ ಅಂಕಣದಲ್ಲಿ ಹಿಂದೊಮ್ಮೆ ಸೂಚ್ಯವಾಗಿ ಹೇಳಲಾಗಿತ್ತು. ಆದರೂ ಮತ್ತಷ್ಟು ಚಿತ್ರಗಳು ಬಿಡುಗಡೆಗೆ ಈಗಾಗಲೇ ಸಿದ್ಧವಾಗಿದ್ದು, ಪ್ರೇಕ್ಷಕ ಯಾವ ಚಿತ್ರಕ್ಕೆ ಮಣೆ ಹಾಕುತ್ತಾನೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಪುನೀತ್‌ ಅಭಿನಯದ 'ಪರಮಾತ್ಮ', ಸುದೀಪ್‌ ಅಭಿನಯದ 'ರಾಜಾ ವಿಷ್ಣುವರ್ಧನ', ದರ್ಶನ್‌ ಅಭಿನಯದ 'ಸಾರಥಿ', ವಿಜಯ್‌ ಅಭಿನಯದ 'ಜರಾಸಂಧ', ಗಣೇಶ್‌ ಅಭಿನಯದ 'ಮದುವೆ ಮನೆ' ಚಿತ್ರಗಳು ಮುಂದೆ ಬಿಡುಗಡೆಯಾಗಬೇಕಿರುವ ಚಿತ್ರಗಳಾಗಿವೆ. ನೀವು ಒಂದು ಅಂಶವನ್ನು ಗಮನಿಸಿದರೆ ಈ ಎಲ್ಲಾ ಚಿತ್ರಗಳೂ ಘಟಾನುಘಟಿಗಳ ಚಿತ್ರಗಳೇ ಎಂಬುದು ಅರಿವಿಗೆ ಬರುತ್ತದೆ.

ಎಲ್ಲಾ ಚಿತ್ರಸಂಸ್ಥೆಗಳೂ ಚಿತ್ರ ನಿರ್ಮಾಣಕ್ಕೆ ಸ್ವಂತ ಹಣಕಾಸು ಸಾಮರ್ಥ್ಯವನ್ನು ನೆಚ್ಚಿಕೊಂಡಿರುವುದಿಲ್ಲ. ಮೀಟರ್‌ಬಡ್ಡಿಗೆ ದುಡ್ಡುತಂದು ಚಿತ್ರ ನಿರ್ಮಿಸುವವರೂ ಇಲ್ಲಿದ್ದಾರೆ. ಒಂದು ವೇಳೆ ಅಂದುಕೊಂಡ ಸಮಯಕ್ಕೆ ಚಿತ್ರ ಬಿಡುಗಡೆಯಾಗದಿದ್ದಲ್ಲಿ ಮೀಟರ್‌ಬಡ್ಡಿಯು ದಿನದ ಲೆಕ್ಕದಲ್ಲಿ ಏರುತ್ತಲೇ ಹೋಗುವುದರಿಂದ, ಮುಂದೊಂದು ದಿನ ಚಿತ್ರವು ಒಂದು ವೇಳೆ ಯಶಸ್ಸು ಕಂಡರೂ ಅದರ ಲಾಭವನ್ನು ದಕ್ಕಿಸಿಕೊಳ್ಳಲಾರದಂಥ ಸ್ಥಿತಿಯನ್ನು ನಿರ್ಮಾಪಕ ಮುಟ್ಟಿರುತ್ತಾನೆ. ಹೀಗಾಗಿ ಎಲ್ಲರಲ್ಲೂ ಒಂದು ರೀತಿಯ ಹಪಾಹಪಿ ಕಾಡುತ್ತಿರುತ್ತದೆ.

ಒಟ್ಟಿನಲ್ಲಿ ಜನರನ್ನು ರಂಜಿಸಲು ಹೆಣಗಾಡುವ ಉದ್ಯಮಿಗಳು ಎಷ್ಟೊಂದು ಸಮಸ್ಯೆಗಳನ್ನು ದಾಟಿಕೊಂಡು ಬರಬೇಕಾಗುತ್ತದೆ ಅಲ್ಲವೇ?

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ