ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶಿವಣ್ಣಾ......'ಜೋಗಯ್ಯ' ಆಯ್ತು. ಮುಂದ....? (Shivaraj kumar | Jogayya | Prem | Jogi)
EVENT
ಓರ್ವ ಕಲಾವಿದ ತನ್ನ ಚಲನಚಿತ್ರ ಜೀವನದಲ್ಲಿ 100 ಚಿತ್ರಗಳನ್ನು ಮುಗಿಸಿದಾಗ ಅವನನ್ನು ಆರಾಧಿಸುವವರು ಕೇಳುವ ಪ್ರಶ್ನೆ ಇದು. ನಿಜ ಹೇಳಬೇಕೆಂದರೆ ಇದು ಸ್ವತಃ ಆ ಕಲಾವಿದನು ತನಗೆ ತಾನೇ ಹಾಕಿಕೊಳ್ಳಬೇಕಾದ ಪ್ರಶ್ನೆಯೂ ಕೂಡ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಏಕೆಂದರೆ ಇಷ್ಟು ಹೊತ್ತಿಗೆ ವೃತ್ತಿಜೀವನದಲ್ಲಿ ಒಂದು ಮಟ್ಟದ ಹಣ-ಯಶಸ್ಸು-ಕೀರ್ತಿ-ನೆಲೆಯನ್ನು ಇಂಥ ಕಲಾವಿದರು ಕಂಡುಕೊಂಡಿರುತ್ತಾರಾದ್ದರಿಂದ, ತಮ್ಮ ಮುಂಬರುವ ಚಿತ್ರಗಳನ್ನು ಕೇವಲ ಹಣಕ್ಕಾಗಿ ಒಪ್ಪಿಕೊಳ್ಳದೆ ಜನರ ಮನಸ್ಸಿನಲ್ಲಿ ನಾಲ್ಕು ದಿನ ಹಚ್ಚ ಹಸಿರಾಗಿ ನಿಲ್ಲುವಂಥ ಚಿತ್ರಗಳನ್ನೇ ಒಪ್ಪಿಕೊಳ್ಳಬೇಕು ಎಂಬ ನಿರ್ಧಾರವನ್ನು ತಳೆಯುವ ಪರ್ವಕಾಲ ಇದಾಗಿರುತ್ತದೆ.

ಹಾಗಂತ ಶಿವಣ್ಣ ಸದಭಿರುಚಿಯ, ಉತ್ತಮ ಗುಣಮಟ್ಟದ ಚಿತ್ರಗಳಲ್ಲಿ ಮತ್ತು ಕಲಾತ್ಮಕ ಛಾಯೆಯ ಚಿತ್ರಗಳಲ್ಲಿ ನಟಿಸಿಯೇ ಇಲ್ಲ ಎಂದರ್ಥವಲ್ಲ. ಅವರ ಅಭಿನಯದ 'ಹಗಲುವೇಷ', 'ಜನುಮದ ಜೋಡಿ', 'ತಮಸ್ಸು', 'ನಮ್ಮೂರ ಮಂದಾರ ಹೂವೇ', 'ಚಿಗುರಿದ ಕನಸು', 'ದೊರೆ' ಮೊದಲಾದ ಚಿತ್ರಗಳು ಉತ್ತಮ ಚಿತ್ರಗಳ ಸಾಲಿನಲ್ಲಿವೆ. ಆದರೆ ಈ ಪ್ರಯತ್ನ ಇಷ್ಟಕ್ಕೇ ನಿಲ್ಲಬಾರದು ಎಂಬುದು ಅಭಿಮಾನಿಗಳ ಬಯಕೆ.

ಕೆಲ ವರ್ಷಗಳ ಹಿಂದೆ ಅವರ ಅಭಿನಯದಲ್ಲಿ 'ಹೊಡಿಮಗ' ಎಂಬ ಚಿತ್ರ ಬಂದಾಗ ಅವರ ಶ್ರೇಯಸ್ಸನ್ನು ಬಯಸುವವರೂ ಸಹ 'ಇಂಥಾ ಚಿತ್ರಗಳು ಇನ್ನೂ ಬೇಕೇ?' ಎಂಬರ್ಥದಲ್ಲಿ ಶಿವಣ್ಣನನ್ನು ಪ್ರೀತಿಪೂರ್ವಕವಾಗಿ ಆಕ್ಷೇಪಿಸಿದ್ದರು. ಅದು ತಮ್ಮ ಅಭಿಮಾನಿ ನಟ ಒಳ್ಳೆಯ ಚಿತ್ರಗಳಲ್ಲಷ್ಟೇ ನಟಿಸಲಿ ಎಂಬ ಕಾಳಜಿಯ ಮತ್ತೊಂದು ರೂಪವೇ ಆಗಿತ್ತು.

ಆದರೆ ಚಿತ್ರರಂಗದಲ್ಲಿ ಎಲ್ಲವೂ ನಾವಂದುಕೊಂಡಂತೆಯೇ ಆಗುವುದಿಲ್ಲ. ಯಾವುದೋ ದಾಕ್ಷಿಣ್ಯಕ್ಕೆ, ಯಾವುದೋ ಕಮಿಟ್‌ಮೆಂಟ್‌ಗೆ, ಯಾರದೋ ಕಣ್ಣೀರಿಗೆ ಕರಗಿ ಇಷ್ಟವಿಲ್ಲದ ಚಿತ್ರಗಳಿಗೂ ಸಹಿ ಹಾಕಬೇಕಾಗಿ ಬರುತ್ತದೆ. ಇಂಥ ಸಂದರ್ಭಗಳಲ್ಲಿ ಒಂದಷ್ಟು ಜೊಳ್ಳು ಚಿತ್ರಗಳು ಅಥವಾ ಅನಪೇಕ್ಷಿತ ಚಿತ್ರಗಳು ಹೊರಬರುವುದು ಸಹಜ. ಆದರೂ ಶಿವಣ್ಣ ಇವೆಲ್ಲ ಮಿತಿಗಳನ್ನೂ ಮೆಟ್ಟಿ ನಿಲ್ಲಬೇಕಿದೆ.

ಎಂ.ಎಸ್‌.ರಾಜಶೇಖರ್ ನಿರ್ದೇಶನದಲ್ಲಿ ತಾವು ಅಭಿನಯಿಸಿದ ಕಾದಂಬರಿ ಆಧಾರಿತ ಚಿತ್ರಗಳನ್ನು ಒಮ್ಮೆ ನೆನಪಿಸಿಕೊಂಡು ಮತ್ತೊಮ್ಮೆ ಅಂಥ ಚಿತ್ರಗಳ ಕಡೆಗೆ ಅವರು ಮುಖಮಾಡಬೇಕಿದೆ. ವರ್ಷಕ್ಕೆ ಎಂಟು-ಹತ್ತು ಚಿತ್ರಗಳು ಬರಲೇಬೇಕು ಎಂದೇನಿಲ್ಲ, ಮುತ್ತಿನಂಥ ಮೂರು ಚಿತ್ರಗಳನ್ನು ಕೊಟ್ಟರೂ ಸಾಕು, ಚಿತ್ರರಸಿಕರಿಗೆ ಅದಷ್ಟೇ ಸಾಕು. ಶಿವಣ್ಣ ಇದನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ ಎಂದು ಆಶಿಸೋಣ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ