ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸುದೀಪ್‌ಗಿಂದು ಜನುಮ ದಿನ ನೀವೂ ಶುಭ ಹಾರೈಸಿ (Sudeep | Kannada Movies | Veera Vishnuvardhana | Kempegowda | Latest Movies in Kannada | Latest Kannada Movie News | Kannada Film News)
EVENT
ಕನ್ನಡ ಚಿತ್ರರಂಗದಲ್ಲಿ ಏನೋ ಒಂಥರಾ ಬದಲಾವಣೆಯ ಗಾಳಿಬೀಸತೋಡಗಿದೆ. ಚಿತ್ರಗಳ ಶೈಲಿಯಲ್ಲೇ ಆಗಲಿ, ತಾರೆಯರ ನಟನೆ, ವ್ಯಕ್ತಿತ್ವಗಳಲ್ಲೇ ಆಗಲಿ. ಅಂತಹ ಬದಲಾವಣೆಗಳಲ್ಲಿ ಇದೀಗ ಹೊಸ ಸೇರ್ಪಡೆ ಹುಟ್ಟು ಹಬ್ಬವನ್ನು ಒಂದು ದಿನ ಮುಂಚಿತವಾಗಿಯೇ ಆಚರಿಸಿಕೊಳ್ಳುವುದು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆ ಸಾಲಿಗೆ ಕಿಚ್ಚ ಸುದೀಪ್ ಕೂಡ ಸೇರಿದ್ದಾರೆ. ಸೆಪ್ಪೆಂಬರ್ 2 ಶುಕ್ರವಾರದಂದು ಮೂವತ್ತೆಂಟರ ವಸಂತಕ್ಕೆ ಕಾಲಿಡುತ್ತಿರುವ ಸುದೀಪ್, ಗುರುವಾರ ಗೌರಿಗಣೇಶ ಹಬ್ಬದಂದೇ ಅಭಿಮಾನಿಗಳೊಂದಿಗೆ ಸಿಹಿ ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬ ಆಚರಿಸಿದರು. ಜತೆಗೆ ತುಮಕೂರಿನ ಅಂದರ ಕುಟುಂಬಕ್ಕೆ ಮನೆಕಟ್ಟಿಕೊಳ್ಳಲು 25 ಸಾವಿರ ನೆರವು ನೀಡಿದರು.

ಜನುಮದಿನದ ಉಡುಗೊರೆಯೆಂಬಂತೆ ಸುದೀಪ್ ಅಭಿನಯಿಸಲಿರುವ ಜೈಜಗದೀಶ್ ನಿರ್ಮಾಣದ ಇಪ್ಪತ್ತೈದನೇ ಚಿತ್ರಕ್ಕೆ ಪ್ರಸಿದ್ಧ ನಿರ್ದೇಶಕ ಪಿ.ವಾಸು ಅವರೂ ಒಪ್ಪಿಗೆ ಸೂಚಿಸಿದ್ದಾರೆ. ಹೀಗೆ ಒಂದರ ಹಿಂದೆ ಒಂದರಂತೆ ಯಶಸ್ವಿ ನಿರ್ದೇಶಕ, ನಿರ್ಮಾಪಕರ ಚಿತ್ರಗಳು ಸುದೀಪ್ ಅಭಿನಯದಲ್ಲಿ ತೆರೆಗೆ ಬರಲಿದೆ.

ಈಗಾಗಲೇ ಬಂದಿರುವ ಹಲವಾರು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸುದೀಪ್ ಬದಲಾವಣೆಗೆ ಮೈಯೊಡ್ಡುವ ವ್ಯಕ್ತಿತ್ವದವರು. ಎಂತಹ ಪಾತ್ರವೇ ಆಗಲಿ, ಅದಕ್ಕೆ ಜೀವತುಂಬುವುದರಲ್ಲಿ ಸುದೀಪ್ ಅಪ್ರತಿಮ ಕಲಾವಿದ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹಾಗೂ ಯಾರಿಗೂ ಅಂಜದೆ ತನ್ನ ಸ್ವಂತ ಶ್ರಮದಿಂದ ಯಶಸ್ಸು ಸಾಧಿಸುತ್ತಾ, ಹಲವಾರು ಯುವ ಕಲಾವಿದರಿಗೂ ಅವಕಾಶ ಕಲ್ಪಿಸುತ್ತಿರುವ ಸುದೀಪ್ ಹೀಗೇ ಉತ್ತಮ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಲೆಂದು ವೆಬ್ ದುನಿಯಾ ಹಾರೈಸುತ್ತಿದೆ. ಅವರ ಜನುಮದಿನಕ್ಕೆ ನೀವೂ ಶುಭ ಕೋರಿ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ