ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಜನಿ ಕಾಂತ್ ಹೆಸರಲ್ಲಿ ದುನಿಯಾ ವಿಜಯ್ ನಟಿಸಿದ್ರೆ ಹೇಗಿರುತ್ತೆ? (Rajanikanth | Vijay | Kannada Movies | K.Manju | Pradeep Raj | Kirathaka | God Father | Latest Movies in Kannada | Latest Kannada Movie News | Kanna)
PR
ರಜನಿ ಕಾಂತ್ ಎಂದರೆ ಸ್ವಲ್ಪ ಸ್ಟೈಲು, ಸ್ವಲ್ಪ ತಮಾಷೆ ಮತ್ತು ಅಗತ್ಯಕ್ಕಿಂತ ಹೆಚ್ಚು ಎನ್ನುವಷ್ಟು ಅತಿರೇಕದ ಸಾಹಸಗಳೇ ಕಣ್ಣ ಮುಂದೆ ಬರುತ್ತದೆ. ಆದರೆ ಅಂತದ್ದೇ ಚಿತ್ರಗಳನ್ನು ನಮ್ಮ ದುನಿಯಾ ವಿಜಯ್‌ಗೆ ಕೊಟ್ಟರೆ ಹೇಗಿರಬಹುದು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಿರ್ಮಾಪಕ ಕೆ.ಮಂಜು ಅಂತಹದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಆದರೆ ಚಿತ್ರದ ಹೆಸರು ಮಾತ್ರ 'ರಜನಿ ಕಾಂತ್' ಆಗಿದ್ದು, ಉಳಿದಿದ್ದೆಲ್ಲ ವಿಭಿನ್ನ. ಅದೇನಿದ್ದರೂ ನೈಜತೆಯ ಪಡಿಯಚ್ಚಿನಂತಿರುವ ಸಾಹಸ, ವಾಸ್ತವತೆಯನ್ನು ಹಾಗೆಯೇ ಬಿಂಬಿಸುವ ವಿಜಯ್ ನಟನೆ, ಎಲ್ಲವೂ ನೀವಂದುಕೊಂಡಂತೆಯೇ ಇರುತ್ತದೆ. ಒಟ್ಟಾರೆಯಾಗಿ ಸಾಹಸ ಹೊರತುಪಡಿಸಿ ರಜನಿಕಾಂತ್ ನಿಜ ಜೀವನದಲ್ಲಿ ಹೇಗಿರುತ್ತಾರೋ ಹಾಗೆ ಅಂದುಕೊಂಡರೂ ಅಡ್ಡಿಯಿಲ್ಲ.

ಇಲ್ಲಿ ರಜನಿಕಾಂತ್ ಕುರಿತಾದ ಯಾವುದೇ ವಿಷಯಗಳೂ ಇರುವುದಿಲ್ಲ, ಇಲ್ಲೇನಿದ್ದರೂ ನಮ್ಮದೆ ಕಥೆ, ಚಿತ್ರಕಥೆಯೊಂದಿಗೆ ವಿಭಿನ್ನ ಚಿತ್ರ ತಯಾರಿಸುವ ಉದ್ದೇಶವಿರುವುದಾಗಿ ಚಿತ್ರತಂಡ ತಿಳಿಸಿದೆ.

ಈಗಾಗಲೇ ಹಲವಾರು ಚಿತ್ರಗಳ ಜವಾಬ್ದಾರಿ ತಲೆ ಮೇಲಿದ್ದರೂ ನಿರ್ಮಾಪಕ ಕೆ. ಮಂಜು ಸೋಲು ಗೆಲುವಿಗೆ ಚಿಂತಿಸದೆ ಎಂತಹ ಚಿತ್ರಗಳ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಅಂದಹಾಗೆ, ಕಿರಾತಕ ಚಿತ್ರದ ನಿರ್ದೇಶಕ ಪ್ರದೀಪ್ ರಾಜ್ ಈ ಚಿತ್ರವನ್ನು ನಿರ್ದೇಶಿಸಲಿದ್ದು, ಇನ್ನುಳಿದ ನಟರ ಆಯ್ಕೆ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ