ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಟಿ ರಮ್ಯಾ ಕನಸನ್ನು ಈಡೇರಿಸುವವರಾರು? (Hot Ramy | Ramya | Divya Spandana | Kannada film | Krantiveera Sangolli Rayanna | Rayanna | Latest Movies in Kannada | Latest Kannada Movie News | Kan)
PR
ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾಗಳಲ್ಲಿ ನಟಿಸಬೇಕೆನ್ನುವುದು ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ ಕನಸು. ಆದರೆ ಇದನ್ನು ಈಡೇರಿಸುವವರು ಯಾರು? ಇದೇ ಚಿಂತೆ ಅವರನ್ನೀಗ ಕಾಡುತ್ತಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇತ್ತೀಚಿನ ದಿನಗಳಲ್ಲಿ ಪೌರಾಣಿಕ ಅಥವಾ ಐತಿಹಾಸಿಕ ಚಿತ್ರಗಳು ಕನ್ನಡದಲ್ಲಿ ನಿರ್ಮಾಣವಾಗುತ್ತಿಲ್ಲ. ಮುಂದೆ ಆಗುವ ಸಾಧ್ಯತೆಗಳೂ ಕಾಣಿಸುತ್ತಿಲ್ಲ. ಸದ್ಯಕ್ಕೆ ನಿರ್ಮಾಣದಲ್ಲಿರುವ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಮಾತ್ರ ಇದಕ್ಕೆ ಅಪವಾದ. ಆದರೆ ದರ್ಶನ್ ನಾಯಕರಾಗಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಏನು ಮಾಡಿದರೂ ಇನ್ನು ಈ ಚಿತ್ರದಲ್ಲಿ ನಟಿಸುವುದು ಅಸಾಧ್ಯದ ಮಾತು. ಆದರೆ ನನಗೆ ಮಾತ್ರ ನಟಿಸುವ ಆಸೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ ಅಂತ ರಮ್ಯಾ ತಿಳಿಸಿದ್ದಾರೆ.

ಐತಿಹಾಸಿಕ ಚಿತ್ರದಲ್ಲಿ ನಟಿಸುವ ಯಾವುದೇ ಆಹ್ವಾನ ಇದುವರೆಗೆ ಬಂದಿಲ್ಲ ಅನ್ನುವ ರಮ್ಯಾ, ಇದು ತನ್ನ ಇದುವರೆಗಿನ ಈಡೇರದ ಕನಸು ಅಂತ ಹೇಳಿಕೊಂಡಿದ್ದಾರೆ.

ಹೇಗಿದ್ದರೂ ಬಹುಭಾಷಾ ನಟಿಯಲ್ಲವೇ ಅಂತ ತಮಿಳಿನತ್ತ ನೋಡಿದರೆ, ಅಲ್ಲೂ ಐತಿಹಾಸಿಕ ಚಿತ್ರಗಳು ನಿರ್ಮಾಣವಾಗುತ್ತಿಲ್ಲ. ಹಾಗಿದ್ದರೆ ನನ್ನ ಕನಸನ್ನು ಈಡೇರಿಸುವವರು ಯಾರು?

ರಮ್ಯಾ ಅವರ ಈ ಪ್ರಶ್ನೆ ನಿರ್ಮಾಪಕರಿಗೆ ಕೇಳಿಸುತ್ತಿದೆಯೇ?

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ