ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಿಮೇಕ್‌ಗೆ ನೋ ಅನ್ನಿ: ಹೀರೋಗಳಿಗೆ ಸಾಧು ಕೋಕಿಲಾ (Sadhu Kokila | 90 kannada film | Upendra | Ramya | Latest Movies in Kannada | Latest Kannada Movie News | Kannada Film News | Kannada Cinema | Kannada)
PR
ಸ್ವತಃ ಹಲವು ರಿಮೇಕ್ ಚಿತ್ರಗಳನ್ನು ನಿರ್ದೇಶಿಸಿರುವ, ಅಷ್ಟೇ ಯಾಕೆ, ರಿಮೇಕ್ ಚಿತ್ರಗಳಿಂದಲೇ ಹೆಸರು ಮಾಡಿರುವ ಬಹುಮುಖ ಪ್ರತಿಭೆ ಸಾಧು ಕೋಕಿಲಾ ಹೇಳಿರುವ ಮಾತಿದು. ಕನ್ನಡದ ಎಲ್ಲಾ ಅಗ್ರ ನಟರಿಗೆ ಬೇಕಾದ ಸಬ್ಜೆಕ್ಟ್‌ಗಳು ನನ್ನಲ್ಲಿವೆ, ಅವರು ರಿಮೇಕ್ ಚಿತ್ರಗಳಲ್ಲಿ ನಟಿಸುವುದನ್ನು ಬಿಡಲು ಸಿದ್ಧರಿದ್ದಾರೆಯೇ ಅಂತ ಸಾಧು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇತ್ತೀಚೆಗಷ್ಟೇ 90 ಚಿತ್ರದ ಕುರಿತು ಮಾಧ್ಯಮಗಳೊಂದಿಗೆ ಮಾತಿಗೆ ಕುಳಿತ ಹಾಸ್ಯನಟ, ಸಂಗೀತ ನಿರ್ದೇಶಕ, ನಿರ್ದೇಶಕ ಸಾಧು ಕೋಕಿಲಾ, ತಾನು ಸ್ವಮೇಕ್ ಚಿತ್ರಗಳಿಗೆ ಬದ್ಧನಾಗಿರಲು ಸಿದ್ಧ ಅಂತ ತಿಳಿಸಿದರು.

ನಾನು ರಿಮೇಕ್ ಚಿತ್ರಗಳನ್ನೇ ನಿರ್ದೇಶಿಸುತ್ತೇನೆ ಅಂತ ತಿಳಿದುಕೊಳ್ಳಬೇಕಾಗಿಲ್ಲ. ನನ್ನಲ್ಲಿ ಸಾಕಷ್ಟು ಸ್ವಮೇಕ್ ಕಥೆಗಳಿವೆ. ಅವು ನಮ್ಮ ಕನ್ನಡದ ದೊಡ್ಡ ದೊಡ್ಡ ಸ್ಟಾರ್‌ಗಳಿಗೆ ಹೊಂದಾಣಿಕೆಯಾಗುವಂತದ್ದು. ಆದರೆ ಅವರು ರಿಮೇಕ್ ಚಿತ್ರಗಳನ್ನು ಒಪ್ಪಿಕೊಳ್ಳುವುದನ್ನು ಬಿಡಬೇಕು, ಅಷ್ಟೇ ಅಂತ ಕೊಂಚ ಅಸಮಾಧಾನದಿಂದಲೇ ತನ್ನ ನೋವನ್ನು ಸಾಧು ಹೊರ ಹಾಕಿದರು.

ಸಾಧು ಕೇವಲ ನಾಯಕ ನಟರು ಅಥವಾ ನಿರ್ದೇಶಕರನ್ನು ದೂರುತ್ತಿಲ್ಲ. ನಿರ್ಮಾಪಕರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

"ಇದು ನಿರ್ಮಾಪಕರ ಸಮಸ್ಯೆ. ಅವರು ತಮ್ಮ ಕಿಸೆಯಲ್ಲಿ ಪರಭಾಷಾ ಚಿತ್ರಗಳ ಸಿಡಿಗಳನ್ನು ಇಟ್ಟುಕೊಂಡು ನಾಯಕರ ಬಳಿ ಹೋಗುವುದನ್ನು ನಿಲ್ಲಿಸಬೇಕು. ಹಲವು ನಿರ್ಮಾಪಕರಿಗೆ ಬೇಕಾಗಿರುವುದು, ಸಿಡಿಯಲ್ಲಿರುವಂತೆ ನಿರ್ದೇಶಿಸುವುದು. ಆಗ ನಮಗೆ ಬೇರೆ ಆಯ್ಕೆಗಳಿರುವುದಿಲ್ಲ" ಅಂತ ಆರೋಪಿಸಿದ್ದಾರೆ.

ಸಾಧು ಕೋಕಿಲಾ ಮುಂದೆ ಪ್ರಸಕ್ತ ಇರುವ ಸ್ವಮೇಕ್ ಚಿತ್ರಗಳು ಶ್ರೀನಗರ ಕಿಟ್ಟಿ ನಾಯಕರಾಗಿರುವ ಅನಾರ್ಕಲಿ, ಉಪೇಂದ್ರ ಮತ್ತು ರಮ್ಯಾ ಅವರಿಗಾಗಿ ಸಿದ್ಧಪಡಿಸಿರೋ ಜಿಲೇಬಿ ಮತ್ತು ದಶಾವತಾರ. ಇದನ್ನು ಹೊರತುಪಡಿಸಿ ಹಲವು ಕಥೆಗಳು ನನ್ನ ಮೂಸೆಯಲ್ಲಿವೆ ಅಂತ ಅವರು ಹೇಳಿಕೊಂಡಿದ್ದಾರೆ.

ಸ್ವಮೇಕ್ ಸಿನಿಮಾ ಮಾಡಬೇಕೆಂಬ ನಿರ್ಮಾಪಕರಿಗೆ ಸಾಧು ಮಾತು ಕೇಳಿಸುತ್ತಿದೆಯೇ?

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ