ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಇನ್ನೊಂದು ಬ್ಯಾಡ್ ನ್ಯೂಸ್, ಮಮತಾಗೆ ಮದ್ವೆಯಂತೆ! (Mamta Mohandas | Gooli | Sudeep | Kannada film news | Sandalwood | Latest Movies in Kannada | Latest Kannada Movie News | Kannada Film News | Kannad)
EVENT
ಮಮತಾ ಮೋಹನ್‌ದಾಸ್ ಅಭಿಮಾನಿಗಳಿಗೆ ನಿರಾಸೆ ತರುವ ಸುದ್ದಿಯಿದು. ತಮ್ಮ ಸೌಂದರ್ಯ ಮತ್ತು ಕಂಠಸಿರಿಯಿಂದ ಮಂತ್ರಮುಗ್ಧರನ್ನಾಗಿಸುತ್ತಿದ್ದ ಮಮತಾ ಮದುವೆಯಾಗುತ್ತಿದ್ದಾರೆ. ತನ್ನ ಬಾಲ್ಯದ ಗೆಳೆಯನನ್ನು ಅವರು ವರಿಸಲಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕಿಚ್ಚ ಸುದೀಪ್ ನಾಯಕರಾಗಿದ್ದ 'ಗೂಳಿ' ಚಿತ್ರದಲ್ಲಿ ನಾಯಕಿಯಾಗಿದ್ದವರು ಮಮತಾ. ಪಿ.ಎನ್. ಸತ್ಯಾ ನಿರ್ದೇಶನದ ಈ ಚಿತ್ರವನ್ನು ಕೋಟಿ ರಾಮು ನಿರ್ಮಿಸಿದ್ದರು.

ದಕ್ಷಿಣ ಭಾರತದ ಹಾಟ್ ಸ್ಟಾರ್ ಅಂತ ಗುರುತಿಸಿಕೊಳ್ಳುತ್ತಿದ್ದ ಮಮತಾ ಹಲವು ವರ್ಷಗಳಿಂದ ತನ್ನ ಗೆಳೆಯನ ಜತೆ ಡೇಟಿಂಗ್ ಮಾಡುತ್ತಿದ್ದರು. ಇದನ್ನು ಇತ್ತೀಚಿನವರೆಗೂ ಗುಟ್ಟಾಗಿದ್ದ ಮಮತಾ, ಈಗ ಬಹಿರಂಗಪಡಿಸಿದ್ದಾರೆ. ಆತನನ್ನೇ ತಾನು ಮದುವೆಯಾಗುತ್ತಿದ್ದೇನೆ. ಇದೇ ವರ್ಷದ ನವೆಂಬರ್ 11ರಂದು ವಿವಾಹ ನಿಶ್ಚಿತಾರ್ಥ ನಡೆಯಲಿದೆ ಅಂತ ತಿಳಿಸಿದ್ದಾರೆ.

ತನ್ನ ಹುಡುಗನ ಕುರಿತ ವಿವರ ನೀಡಲು ನಿರಾಕರಿಸಿರುವ ಮಮತಾ, ಅವರು ಬಹ್ರೈನ್‌ನಲ್ಲಿದ್ದಾರೆ, ಉದ್ಯಮಿ. ನಾವು ಮೇಡ್ ಫಾರ್ ಈಚ್ ಅದರ್. ಇಬ್ಬರದ್ದೂ ಸಮಾನ ಆಸಕ್ತಿ. ಹಾಗಾಗಿ ಸಂಬಂಧವನ್ನು ಮದುವೆಯ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ನಮ್ಮ ಮನೆಯವರು ಒಪ್ಪಿಕೊಂಡಿದ್ದಾರೆ. ಮುಂದಿನ ವರ್ಷ ಮದುವೆ ಅಂತ ಮಾತ್ರ ಹೇಳಿಕೊಂಡಿದ್ದಾರೆ. ಪ್ರಶ್ನೆಗಳೇನಿದ್ದರೂ ಅದು ಎಂಗೇಜ್‌ಮೆಂಟ್ ನಂತರ ಕೇಳಿ, ಉತ್ತರಿಸುತ್ತೇನೆ ಅನ್ನುವ ಭರವಸೆಯೂ ಬಂದಿದೆ.

ಮಲಯಾಳಂ, ತಮಿಳು, ತೆಲುಗು, ಕನ್ನಡ ಚಿತ್ರಗಳಲ್ಲಿ ನಟಿಸಿರುವ ಮಮತಾ ಮೋಹನ್‌ದಾಸ್, ಜನಪ್ರಿಯ ಗಾಯಕಿ ಕೂಡ. ಎರಡೆರಡು ಫಿಲಂ ಫೇರ್ ಅವಾರ್ಡ್ ಪಡೆದಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿರುವುದರಿಂದ ಕನ್ನಡ ಭಾಷೆ ತೀರಾ ಅಪರಿಚಿತವೇನಲ್ಲ.

ಇನ್ನೊಂದು ಹೇಳಲೇಬೇಕಾದ ವಿಷಯ, ಅವರು ಕ್ಯಾನ್ಸರ್‌ನಿಂದ ಮುಕ್ತಿ ಪಡೆದವರು ಅನ್ನೋದು. ಆತ್ಮವಿಶ್ವಾಸದಿಂದಲೇ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿರುವ ಸಾಹಸಿಯೀಕೆ. ಖಾಯಿಲೆ ಗಂಭೀರ ಹಂತಕ್ಕೆ ಹೋಗಿದ್ದ ಸಂದರ್ಭದಲ್ಲಿ, ಕಿಮೋಥೆರಪಿ ಮಾಡಿಸಿದ್ದರಿಂದ ತಲೆಯಲ್ಲಿನ ಕೂದಲು ಉದುರಿತ್ತು. ಆಗ ವಿಗ್ ಧರಿಸಿ ನಟಿಸಿದ್ದರು. ಸಾವನ್ನು ಗೆದ್ದು ಈಗ ದಾಂಪತ್ಯ ಜೀವನದತ್ತ ಹೊರಟಿದ್ದಾರೆ. ಅಲ್ಲಿ ಕೂಡ ಗೆಲುವು ಸಾಧಿಸಲಿ ಅನ್ನುವುದು ಅಭಿಮಾನಿಗಳ ಹಾರೈಕೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ