ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಾನು ಬರೀ ರಾಧಿಕಾ ಅಲ್ಲ, ರಾಧಿಕಾ ಕುಮಾರಸ್ವಾಮಿ..! (Radhika Kumaraswamy | Lucky | Ramya | Yesh | Kannada film | Latest Movies in Kannada | Latest Kannada Movie News | Kannada Film News | Kannada Cinem)
ನಾನು ಬರೀ ರಾಧಿಕಾ ಅಲ್ಲ, ರಾಧಿಕಾ ಕುಮಾರಸ್ವಾಮಿ..!
EVENT
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಎರಡನೇ ಹೆಂಡತಿಯಾಗಿರುವ ನಟಿ ರಾಧಿಕಾ ಪ್ರತಿ ಹಂತದಲ್ಲೂ ತನ್ನ ಸಂಬಂಧಕ್ಕೆ ಅಧಿಕೃತ ಮಾನ್ಯತೆ ದಕ್ಕಿಸಿಕೊಳ್ಳಲು ಯತ್ನಿಸುತ್ತಿರುವುದು ಚಿತ್ರರಂಗದಲ್ಲೂ ಮುಂದುವರಿದಿದೆ. ಅದೀಗ ಎದ್ದು ಕಂಡಿರುವುದು ಅವರು ನಿರ್ಮಿಸುತ್ತಿರುವ ಚಿತ್ರದ ಮೂಲಕ.
ಒಂದಾನೊಂದು ಕಾಲದಲ್ಲಿ ನಂಬರ್ ವನ್ ನಟಿ ಪಟ್ಟಕ್ಕಾಗಿ ಮೂವರು Rಗಳು (ರಮ್ಯಾ, ರಕ್ಷಿತಾ, ರಾಧಿಕಾ) ಪೈಪೋಟಿ ನಡೆಸುತ್ತಿದ್ದುದು ಎಲ್ಲರಿಗೂ ಗೊತ್ತೇ ಇದೆ. ತದ ನಂತರ ಪ್ರೇಮ್‌ರನ್ನು ಮದುವೆಯಾಗಿ ರಕ್ಷಿತಾ ನಾಯಕಿ ಪಟ್ಟಕ್ಕೆ ತಿಲಾಂಜಲಿ ಇತ್ತಿದ್ದರು. ಈ ನಡುವೆ ರಾಧಿಕಾ ಇದ್ದಕ್ಕಿದ್ದಂತೆ ಮಾಯವಾಗಿದ್ದರು. ಕೆಲವು ವರ್ಷಗಳ ಕಾಲ ಅವರದ್ದು ಅಜ್ಞಾತವಾಸವಾಗಿತ್ತು. ಮಾರಿಷಸ್‌ಗೆ ಹೋದರಂತೆ, ಲಂಡನ್‌ನಲ್ಲಿ ಮಗುವಿಗೆ ಜನ್ಮ ನೀಡಿದರಂತೆ, ಕುಮಾರಸ್ವಾಮಿ ಅಪ್ಪನಂತೆ ಮುಂತಾದ ಸುದ್ದಿಗಳು ರೆಕ್ಕೆಪುಕ್ಕ ಪಡೆದುಕೊಂಡಿದ್ದವು.
ಆ ಸುದ್ದಿಗಳು ಸುಳ್ಳಲ್ಲ, ಅದು ಬರೀ ಸಂಬಂಧವಲ್ಲ, ನಾನು ಎಚ್.ಡಿ. ಕುಮಾರಸ್ವಾಮಿಯವರ ಮಗುವಿನ ತಾಯಿ ಅಂತ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಜತೆ ರಾಧಿಕಾ ಹೇಳಿಕೊಂಡದ್ದೂ ಆಯ್ತು. ಸಂಬಂಧಪಟ್ಟ ಫೋಟೋಗಳು ಪತ್ರಿಕೆಗಳಲ್ಲಿ ಪ್ರಕಟವಾಗುವಂತೆಯೂ ನೋಡಿಕೊಳ್ಳಲಾಯ್ತು. ಈಗ ಅದರ ಮುಂದಿನ ಹಂತ.
ವಿಷಯ ಏನಪ್ಪಾ ಅಂದ್ರೆ, ರಾಧಿಕಾ ಈಗ "ರಾಧಿಕಾ ಕುಮಾರಸ್ವಾಮಿ" ಅಂತ ಪತ್ರಿಕೆಗಳಲ್ಲಿ ಹಾಕಿಸಿಕೊಂಡಿದ್ದಾರೆ. ಲಕ್ಕಿ ಸ್ಟಾರ್ ರಮ್ಯಾ ನಾಯಕಿಯಾಗಿರುವ, ಮೊಗ್ಗಿನ ಮನಸು ಖ್ಯಾತಿಯ ಮುದ್ದಿನ ಹುಡುಗ ಯಶ್ ನಾಯಕನಾಗಿರೋ 'ಲಕ್ಕಿ' ಚಿತ್ರದ ಮೂಲಕ ಇಂತಹದ್ದೊಂದು ಬೆಳವಣಿಗೆ ದಾಖಲಾಗಿದೆ.
ಡಾ. ಸೂರಿ ನಿರ್ದೇಶಿಸುತ್ತಿರುವ (ದುನಿಯಾ ಸೂರಿ ಅಲ್ಲ) ಈ ಚಿತ್ರದ ಜಾಹೀರಾತುಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದು, ಅದರಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಾಪಕಿ ಅಂತ ನಮೂದಿಸಲಾಗಿದೆ.
ಮಿಲನ ಚಿತ್ರದಲ್ಲಿ ಪ್ರಕಾಶ್ ಅವರಿಗೆ ಸಹಾಯಕರಾಗಿದ್ದ ಸೂರಿ ನಿರ್ದೇಶನದ 'ಲಕ್ಕಿ' ಚಿತ್ರೀಕರಣ ಭರದಿಂದ ಸಾಗುತ್ತಿದೆ. ಜುಲೈ ಅಂತ್ಯದಲ್ಲೇ ಆರಂಭವಾಗಿರುವ ಶೂಟಿಂಗ್, ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆಯಂತೆ.