ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗೋಲ್ಡನ್ ಸ್ಟಾರ್ ಚಿತ್ರಕ್ಕೆ ಪವರ್‌ಸ್ಟಾರ್ ಹಾಡು (Puneeth Rajkumar | Shylu | Ganesh | Bhamaa | Puneeth Rajkumar | Shylu | Ganesh | Bhamaa | Kannada films | Latest Movies in Kannada | Latest Kannada)
ಗೋಲ್ಡನ್ ಸ್ಟಾರ್ ಚಿತ್ರಕ್ಕೆ ಪವರ್‌ಸ್ಟಾರ್ ಹಾಡು
PR
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಎಂತಹ ಗಾಯಕ ಅನ್ನುವುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಈಗ ಇದರ ಸದ್ಬಳಕೆ ಮಾಡಿಕೊಳ್ಳಲು ಹೊರಟಿರುವುದು ಗೋಲ್ಡನ್ ಸ್ಟಾರ್ ಗಣೇಶ್. ಅವರು ಪುನೀತ್ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ.
ತಮಿಳಿನ 'ಮೈನಾ' ಚಿತ್ರದ ರಿಮೇಕ್ 'ಶೈಲು'ವಿಗೆ ಪುನೀತ್ ಹಾಡಿರುವುದು. 'ಪದ ಪದ ಕನ್ನಡ ಪದಾನೇ, ನಾನು ರತ್ನನ ಪದ ಕೇಳ್ಕೊಂಡು ಬೆಳೆದವನೆ' ಅನ್ನುವ ಸೋಲೋ ಸಾಂಗ್‌ಗೆ ಪುನೀತ್ ದನಿಯಾಗಿದ್ದಾರೆ. ಈ ಹಾಡು ನಾಲ್ಕು ನಿಮಿಷಗಳ ಅವಧಿಯದ್ದಂತೆ.
ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಈ ಹಾಡು ಜನಪ್ರಿಯವಾಗಲಿದೆ ಅನ್ನುವ ಭರವಸೆ ಗಣೇಶ್ ಅವರದ್ದು. ಬಸ್ ಪ್ರಯಾಣ ಸಂದರ್ಭದಲ್ಲಿ ಈ ಹಾಡು ಬರುತ್ತದೆ. ಅದನ್ನು ಈಗಾಗಲೇ ಚಿತ್ರೀಕರಿಸಲಾಗಿದೆ ಅಂತ ಗೋಲ್ಡನ್ ಸ್ಟಾರ್ ಹೇಳಿದ್ದಾರೆ.
ಪುನೀತ್ ಮೊದಲು ಹಾಡಿದ್ದು ತನ್ನ ಚೊಚ್ಚಲ ಚಿತ್ರ 'ಅಪ್ಪು'ವಿಗೆ. ಉಪೇಂದ್ರ ಸಾಹಿತ್ಯವಿದ್ದ 'ತಾಲಿಬಾನ್ ಅಲ್ಲ ಅಲ್ಲ' ಅನ್ನುವ ಈ ಹಾಡು ಸೂಪರ್ ಹಿಟ್ ಆಗಿತ್ತು. ನಂತರ ತನ್ನ ಸಹೋದರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿದ್ದ ಲವಕುಶ, ರಿಷಿ, ಮೈಲಾರಿ ಮುಂತಾದ ಚಿತ್ರಗಳಿಗೂ ಪುನೀತ್ ಹಾಡಿದ್ದರು. ಅವರ ಬಹುತೇಕ ಹಾಡುಗಳು ಹಿಟ್ ಆಗಿರುವುದು ಗಮನಾರ್ಹ.
ಭಾಮಾ ನಾಯಕಿಯಾಗಿರುವ ಶೈಲು ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತವಿದೆ.