ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡದ ಬಾಡಿಗಾರ್ಡ್‌ಗೆ ಭೀತಿಯಿಲ್ಲ: ಜಗ್ಗೇಶ್ (Bodyguard | Jaggesh | Salman Khan | Kannada film | Kannada film | Latest Movies in Kannada | Latest Kannada Movie News | Kannada Film News | Kannada)
PR
ಹಿಂದಿಯ ಬಾಡಿಗಾರ್ಡ್ ಭಾರೀ ಸೌಂಡ್ ಮಾಡುತ್ತಿರುವ ಹೊರತಾಗಿಯೂ, ಕನ್ನಡದ ಬಾಡಿಗಾರ್ಡ್‌ಗೆ ಯಾವುದೇ ಸಮಸ್ಯೆಯಿಲ್ಲ. ನಮ್ಮ ಚಿತ್ರದ ಥೀಮ್ ಅಷ್ಟು ಗಟ್ಟಿಯಾಗಿದೆ ಅಂತ ನವರಸ ನಾಯಕ ಜಗ್ಗೇಶ್ ಭರವಸೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆನಂದ್ ನಿರ್ದೇಶಿಸಿರುವ ಶ್ರೀಮತಿ ಪರಿಮಳಾ ಜಗ್ಗೇಶ್ ಮತ್ತು ನರಸಿಂಹನ್ ನಿರ್ಮಾಣದ ಬಾಡಿಗಾರ್ಡ್ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಅದಕ್ಕೂ ಮೊದಲು ಸಲ್ಮಾನ್ ಖಾನ್ ನಾಯಕರಾಗಿರುವ ಬಾಡಿಗಾರ್ಡ್ ಬಂದಿರುವುದು ಸಹಜವಾಗಿಯೇ ಆತಂಕ ಸೃಷ್ಟಿಸಿದೆ. ಆದರೆ ಅದೊಂದು ಸಮಸ್ಯೆಯೇ ಅಲ್ಲ ಅನ್ನೋ ರೀತಿಯಲ್ಲಿ ಜಗ್ಗೇಶ್ ಮಾತನಾಡಿದ್ದಾರೆ.

ದಿಲೀಪ್ ಮತ್ತು ನಯನತಾರಾ ನಟಿಸಿದ್ದ ಬಾಡಿಗಾರ್ಡ್ ಮಲಯಾಳಂನ ಸೂಪರ್ ಹಿಟ್ ಚಿತ್ರ. ಇತ್ತೀಚಿನ ವರ್ಷಗಳಲ್ಲಿ ಕೇರಳದಲ್ಲಿ ಭಾರೀ ಅಲೆಯೆಬ್ಬಿಸಿದ ಸಿನಿಮಾ. ಬರೋಬ್ಬರಿ ಆರು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿರುವುದು ಇನ್ನೊಂದು ಹೆಗ್ಗಳಿಕೆ.

ಬಾಡಿಗಾರ್ಡ್ ರಿಮೇಕ್ ತಮಿಳಿನಲ್ಲಿ ವಿಜಯ್ ನಾಯಕತ್ವದಲ್ಲಿ 'ಕಾವಲನ್' ಆಗಿತ್ತು. ವೆಂಕಟೇಶ್ ಮತ್ತು ತ್ರಿಶಾ ನಟಿಸಿರುವ 'ಗಂಗಾ - ದ ಬಾಡಿಗಾರ್ಡ' ಇನ್ನೇನು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ಅತ್ತ ಬೆಂಗಾಲಿಯಲ್ಲೂ ಚಿತ್ರ ರಿಮೇಕ್ ಆಗುತ್ತಿದೆ.

ಅದೇನೇ ಆಗಿದ್ದರೂ ಜಗ್ಗೇಶ್ ಅಂತೂ ತನ್ನ ಚಿತ್ರದ ಮೇಲೆ ಭಾರೀ ಭರವಸೆ ಇಟ್ಟುಕೊಂಡಿದ್ದಾರೆ. ಡೈಸಿ ಶಾ ನಾಯಕಿಯಾಗಿರುವ ಚಿತ್ರದ ಶೂಟಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಸಾಗುತ್ತಿದೆ. ಇನ್ನೇನು ಒಂದೂವರೆ ತಿಂಗಳೊಳಗೆ ತೆರೆಗೆ ಬರಲಿದೆ. ನಾವು ಮೂಲ ಚಿತ್ರಕ್ಕೆ ಹೆಚ್ಚು ಬದ್ಧರಾಗಿದ್ದೇವೆ. ಸೆಂಟಿಮೆಂಟ್‌ಗೆ ಪ್ರಾಧಾನ್ಯತೆ ಕೊಟ್ಟಿದ್ದೇವೆ. ಅದೇ ನಮ್ಮ ಯಶಸ್ಸಿಗೆ ಕಾರಣವಾಗಲಿದೆ ಅಂತ ಜಗ್ಗೇಶ್ ತಿಳಿಸಿದ್ದಾರೆ.

ಸಲ್ಮಾನ್ ಖಾನ್ ಸಿಕ್ಸ್ ಪ್ಯಾಕ್ ಹೇರಿಕೊಂಡು ಸಿಕ್ಕಾಪಟ್ಟೆ ಆಕ್ಷನ್‌ನೊಂದಿಗೆ ಪ್ರೇಕ್ಷಕರನ್ನು ಕುಣಿಸುತ್ತಿರುವ ನಡುವೆ, ಜಗ್ಗೇಶ್ ಅದೇನು ಮ್ಯಾಜಿಕ್ ಮಾಡುತ್ತಾರೋ?

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ