ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಾನು ಕಿರಿಕ್ ಪಾರ್ಟಿ ಅಲ್ಲ: ರಾಧಿಕಾ ಪಂಡಿತ್ ಟಾಂಗ್ (Radhika Pandith | Latest Kannada Movie News | Kannada Film News | Kannada Actress)
PR
ತಾನು ಹೆಚ್ಚು ಸಂಭಾವನೆ ಕೇಳುತ್ತಿದ್ದೇನೆ ಮತ್ತು ವಿವಾದಗಳನ್ನು ಸೃಷ್ಟಿಸುತ್ತಿದ್ದೇನೆ ಎಂಬ ಗಾಳಿ ಸುದ್ದಿಗಳಿಗೆ 24 ಕ್ಯಾರೆಟ್ ಕನ್ನಡದ ಹುಡುಗಿ ರಾಧಿಕಾ ಪಂಡಿತ್ ಗರಂ ಆಗಿದ್ದಾರೆ. ಇದು ಕೆಲವು ವ್ಯಕ್ತಿಗಳು ಹರಡಿಸುತ್ತಿರುವ ಸುಳ್ಳು ಸುದ್ದಿ, ನಾನು ಅಂತಹ ಹುಡುಗಿಯಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಾನು ನನ್ನ ನಟನೆಗೆ ತೂಗುವಷ್ಟು ಸಂಭಾವನೆಯನ್ನು ಕೇಳುತ್ತಿದ್ದೇನೆಯೇ ಹೊರತು, ಅದಕ್ಕಿಂತ ಹೆಚ್ಚು ಬೇಕೆಂದು ಬೇಡಿಕೆ ಇಡುತ್ತಿಲ್ಲ. ನಿಜ ಹೇಳಬೇಕೆಂದ್ರೆ, ನಾನು ಹಲವು ನಿರ್ದೇಶಕ-ನಿರ್ಮಾಪಕರ ಮನವಿ ಮೇರೆಗೆ ಸಂಭಾವನೆ ಕಡಿಮೆ ಮಾಡಿರುವ ಉದಾಹರಣೆಗಳೂ ಇವೆ. ಕಾಲ್‌ಶೀಟ್ ಕೊಟ್ಟಿರುವುದಕ್ಕಿಂತ ಹೆಚ್ಚು ದಿನ ಉಚಿತವಾಗಿ ನಟಿಸಿದ್ದೇನೆ. ಈಗಲೂ ನನ್ನ ಸಂಭಾವನೆ ಹೆಚ್ಚು ಅಥವಾ ಅಷ್ಟು ಬೇಡಿಕೆ ಇಡಬಾರದು ಅನ್ನುವ ಭಾವನೆ ನನಗೆ ಬರುತ್ತಿಲ್ಲ ಅಂತ ರಾಧಿಕಾ ಪಂಡಿತ್ ತನ್ನ ಸಂಭಾವನೆಯ ಮೊತ್ತವನ್ನು ಸಮರ್ಥಿಸಿಕೊಂಡರು.

ಚಿತ್ರತಂಡದ ಮಾತಿಗೆ ಬೆಲೆ ಕೊಡುವ ಹುಡುಗಿ ನಾನು. ನನಗೆ ಸಾಧ್ಯವಾಗುವಷ್ಟು ಸಹಕಾರ ನೀಡುತ್ತೇನೆ. ಆದರೂ ಕೆಲವು ವ್ಯಕ್ತಿಗಳು ನನ್ನ ಬಗ್ಗೆ ಸುಖಾಸುಮ್ಮನೆ ರೂಮರ್ ಹರಡುತ್ತಿದ್ದಾರೆ. ಹಾಗೆ ಮಾಡುವವರು ಪುರಾವೆಗಳನ್ನು ಮುಂದಿಡಲಿ ಅನ್ನೋ 'ಮೊಗ್ಗಿನ ಮನಸು' ಹುಡುಗಿ ಪ್ರಕಾರ, ಇದು ಕನ್ನಡದ ಹುಡುಗಿಯರನ್ನು ಗುರಿ ಮಾಡುವ ಕಿಡಿಗೇಡಿತನದ ಕೆಲಸ.

ಕನ್ನಡದ ಹೀರೋಯಿನ್‌ಗಳು ತೆರೆಯ ಮೇಲೆ ತಾವೇನು ಎಂಬುದನ್ನು ಸಾಬೀತುಪಡಿಸಿ, ಸಂಭಾವನೆ ಹೆಚ್ಚು ಕೇಳಿದರೆ ತಪ್ಪೇ? ಇದೇ ಜನ ಪರಭಾಷಾ ನಟಿಯರಿಗೆ ಕೇಳಿದಷ್ಟು ಸಂಭಾವನೆ ಪ್ಲಸ್ ಅವರ ಕಿರಿಕ್‌ಗಳನ್ನು ಹೇಗೆ ತಡೆದುಕೊಳ್ಳುತ್ತಾರೆ? ಕನ್ನಡದ ಹುಡುಗಿಯರಿಗೆ ಯಾಕೆ ಇಂತಹ ತಾರತಮ್ಯ ಮಾಡಲಾಗುತ್ತಿದೆ ಅಂತ ಮಾಧ್ಯಮದವರ ಮುಂದೆ ಪಂಡಿತ್ ನೋವಿನಿಂದಲೇ ಹೇಳಿಕೊಂಡರು.

ರಾಧಿಕಾ ಪಂಡಿತ್ 25 ಲಕ್ಷ ರೂಪಾಯಿಗಳಿಗೂ ಹೆಚ್ಚು ಸಂಭಾವನೆ ಕೇಳುತ್ತಿದ್ದಾರೆ. ನಂಬರ್ ವನ್ ನಟಿ ರಮ್ಯಾ ಕೂಡ ಇಷ್ಟು ಬೇಡಿಕೆ ಮುಂದಿಡುತ್ತಿಲ್ಲ. ರಾಧಿಕಾ ಪಂಡಿತ್ ಯಾಕೆ ಇಷ್ಟು ಕೇಳುತ್ತಾರೆ ಅಂತ ಕೆಲವು ಮಂದಿ ತಕರಾರು ತೆಗೆದಿದ್ದರು ಅನ್ನೋ ಸುದ್ದಿ ಹರಡಿತ್ತು. ಇದನ್ನು ಅವರ ತಾಯಿ ಕೂಡ ಸಮರ್ಥಿಸಿಕೊಂಡಿದ್ದರು. ತಮಿಳು, ತೆಲುಗು ಭಾಷೆಗಳಿಂದ ಆಫರ್ ಬಂದರೂ, ಕರ್ನಾಟಕದ ಹುಡುಗಿಯಾಗಿ ಕನ್ನಡದಲ್ಲಿ ಮಾತ್ರ ಇದುವರೆಗೆ ನಟಿಸಿರುವ ಹುಡುಗಿ ಹೆಚ್ಚು ಕೇಳಿದರೆ ತಪ್ಪೇನು ಅಂತ ಹೇಳಿದ್ದರು.

ಈಗ ಹೇಳಿ, ಅಚ್ಚ ಕನ್ನಡತಿ ಪ್ರತಿಭಾವಂತ ನಟಿಗೆ ಬಣ್ಣದ ಲೋಕ ನೀಡುವ ಬಹುಮಾನ ಇದೇನಾ?

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ