ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮೂವರು ಹುಡುಗಿಯರ ಮುದ್ದಿನ ಹುಡುಗನಾಗಿ ಪ್ರಜ್ವಲ್ (Sagar | Prajwal | Radhika Pandith | Dev Gill | Latest Kannada Movie News | Kannada Film News | Kannada Actress)
PR
ರಾಧಿಕಾ ಪಂಡಿತ್, ಸಂಜನಾ, ಹರಿಪ್ರಿಯಾ -- ವಾಹ್! ಮೂವರೂ ಸುರ ಸುಂದರಿಯರು. ಇವರಿಗೆ ಒಬ್ಬನೇ ಹೀರೋ. ಅದು ಪ್ರಜ್ವಲ್ ದೇವರಾಜ್. ಚಿತ್ರ 'ಸಾಗರ್'. ಇನ್ನೂ ಒಂದು ವಿಶೇಷ ಅಂದ್ರೆ, ಮಗಧೀರ ಖ್ಯಾತಿಯ ದೇವ್ ಗಿಲ್ ಇದರಲ್ಲಿ ನಟಿಸಿರುವುದು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಎಂ.ಡಿ. ಶ್ರೀಧರ್ ನಿರ್ದೇಶನದ, ಕೋಟಿ ರಾಮು ನಿರ್ಮಾಣದ ಈ ಚಿತ್ರ ಸ್ವಮೇಕ್. ವಿಶಿಷ್ಟ ಕತೆಯನ್ನು ಹೊಂದಿದೆ ಎನ್ನುವುದು ಚಿತ್ರತಂಡದ ಭರವಸೆ. ಚಿತ್ರಕ್ಕೆ ಕಥೆ ಬರೆದವರು ಹೈದರಾಬಾದಿನ ಕುಮಾರ್.

ವಾಸ್ತವದಲ್ಲಿ 'ಸಾಗರ್' ಚಿತ್ರವನ್ನು ರಾಮು ತೆಲುಗಿನಲ್ಲಿ ಮೊದಲು ನಿರ್ಮಿಸಬೇಕು ಅಂತ ನಿರ್ಧರಿಸಿದ್ದರು. ಆದರೆ ಶ್ರೀಧರ್ ಒತ್ತಾಯದ ಮೇರೆಗೆ ಮೊದಲು ಕನ್ನಡದಲ್ಲಿ ನಿರ್ಮಿಸಲಾಗುತ್ತಿದೆಯಂತೆ. ನಂತರ ತೆಲುಗಿಗೆ ರಿಮೇಕ್ ಮಾಡಲಾಗುತ್ತದೆ ಎಂದು ರಾಮು ತಿಳಿಸಿದರು.

ರಾಧಿಕಾ ಪಂಡಿತ್ ತನ್ನ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇವ್ ಗಿಲ್ ಅವರ ಸಹಕಾರವನ್ನು ಪ್ರಶಂಸಿಸಿದರು. ಅಲ್ಲದೆ, ಚಿತ್ರ ಭಿನ್ನ ಕತೆಯನ್ನು ಹೊಂದಿದೆ ಅಂದರು. ಪ್ರಜ್ವಲ್ ಕುಟುಂಬದಿಂದ ಮದುವೆಗಾಗಿ ಆಯ್ಕೆಯಾದ ಹುಡುಗಿಯ ಪಾತ್ರ ಹರಿಪ್ರಿಯಾ ಅವರದ್ದು. ಆದರೆ ಅವರಿಗೆ ಈ ಮದುವೆಯಲ್ಲಿ ಆಸಕ್ತಿ ಇರುವುದಿಲ್ಲ. ಸಂಜನಾ ಪ್ರಜ್ವಲ್ ಗೆಳತಿ, ಫಾರಿನ್ ರಿಟರ್ನ್ಡ್. ಪ್ರಜ್ವಲ್ ಪರಿಸ್ಥಿತಿಗೆ ಕಟ್ಟು ಬಿದ್ದು ಸುಳ್ಳು ಹೇಳುತ್ತಾ ಹೋಗುತ್ತಾರಂತೆ.

ಮಗಧೀರದಲ್ಲಿ ಖಳನಟನಾಗಿ ಜನಪ್ರಿಯತೆಯ ಉತ್ತುಂಗಕ್ಕೇರಿದ ದೇವ್ ಗಿಲ್ ಇಡೀ ಚಿತ್ರತಂಡವನ್ನು ಹೊಗಳಿದರು. ಪ್ರತಿಯೊಬ್ಬರೂ ನನಗೆ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು. ಅಲ್ಲದೆ, ಮಗಧೀರ ನಂತರ ನನಗೆ ಮೊದಲು ಬಂದ ಆಫರ್ ಕನ್ನಡದಿಂದ ಅಂತ ಹೆಮ್ಮೆಯಿಂದ ಹೇಳಿಕೊಂಡರು.

ದೇವ್ ಗಿಲ್ ಜತೆ ಇನ್ನೊಬ್ಬ ಖಳನಾಗಿ ಆದಿ ಲೋಕೇಶ್ ಕಾಣಿಸಿಕೊಂಡಿದ್ದಾರೆ. ಸ್ವಯಂವರ ಚಂದ್ರು ಅವರದ್ದು ಕಾಮಿಡಿ ರೋಲ್. ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರದ ಹಾಡುಗಳಷ್ಟೇ ಬಾಕಿಯಿದೆ. ನವೆಂಬರ್ ಹೊತ್ತಿಗೆ ಬಿಡುಗಡೆ ಮಾಡುವ ಹುಮ್ಮಸ್ಸು ರಾಮು ಅವರದ್ದು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ