ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಮ್ಯಾ ಕೆಲ್ಸ ಬಿಟ್ಟು ರಾಜಕೀಯ ಮಾಡಲ್ವಂತೆ! (Ramya | Congress | KPYC | Latest Kannada Movie News | Kannada Film News | Kannada Actress)
PR
ರಾಹುಲ್ ಗಾಂಧಿ ನಾಯಕತ್ವದ ಯುವ ಕಾಂಗ್ರೆಸ್‌ಗೆ ಎದ್ದು ಬಿದ್ದು ಸೇರಿಕೊಂಡಿದ್ದ ಚಿತ್ರನಟಿ ರಮ್ಯಾ, ತನ್ನ ಕೆಲಸ ಬಿಟ್ಟು ರಾಜಕೀಯದಲ್ಲಿ ಪಾಲ್ಗೊಳ್ಳುವುದಿಲ್ಲವಂತೆ. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ ಎಂಬ ವದಂತಿಗಳನ್ನು ತಳ್ಳಿ ಹಾಕುತ್ತಾ ಹೀಗೆಂದಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಇನ್ನೇನು ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗೆ ರಮ್ಯಾ ಸ್ಪರ್ಧಿಸುತ್ತಾರೆ ಅಂತ ಹೇಳಲಾಗಿತ್ತು. ಈ ಸುದ್ದಿ ಭಾರೀ ಪ್ರಚಾರವನ್ನೂ ಪಡೆದಿತ್ತು. ಆದರೆ ಅದನ್ನೀಗ ಸ್ವತಃ ರಮ್ಯಾ ನಿರಾಕರಿಸಿದ್ದಾರೆ.

ನನಗೆ ಕೆಲಸದ ಒತ್ತಡ ಇರುವುದರಿಂದ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಸಾಧ್ಯವಿಲ್ಲ ಅಂತ ನಾನು ಯೂತ್ ಕಾಂಗ್ರೆಸ್ ಸೇರುವಾಗಲೇ ಹೇಳಿದ್ದೆ. ನನಗೆ ನನ್ನದೇ ಆದ ಜವಾಬ್ದಾರಿಗಳಿವೆ. ಹಾಗಾಗಿ ಚುನಾವಣೆಗೆ ಸ್ಪರ್ಧಿಸುವುದು ದೂರದ ಮಾತು. ಪಕ್ಷದಿಂದ ಆಹ್ವಾನ ಬಂದಿರುವುದು ಹೌದು. ಅವರಿಗೂ ಇದನ್ನೇ ಹೇಳಿದ್ದೇನೆ. ಅಧ್ಯಕ್ಷ ಸ್ಥಾನವೆಂದರೆ ಅದೊಂದು ದೊಡ್ಡ ಜವಾಬ್ದಾರಿ. ಅದನ್ನು ಹೊರಲು ನಾನೀಗ ಸಿದ್ಧಳಾಗಿಲ್ಲ ಅಂತ ರಮ್ಯಾ ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ತನ್ನ ಪೋರ್ಚುಗಲ್ ಪ್ರೇಮಿ ರಾಫೆಲ್ ಅವರನ್ನು ಶೀಘ್ರದಲ್ಲೇ ಮದುವೆಯಾಗುತ್ತಿದ್ದೇನೆ ಎಂಬ ಸುದ್ದಿಗಳಿಗೂ ರಮ್ಯಾ ತಣ್ಣೀರೆರೆದಿದ್ದಾರೆ. ಅಂತಹ ಯಾವುದೇ ಯೋಚನೆ ಸದ್ಯಕ್ಕಿಲ್ಲ, ಇದೆಲ್ಲ ಗಾಳಿ ಸುದ್ದಿ. ಸಾಕಷ್ಟು ಕಮಿಟ್‌ಮೆಂಟ್‌ಗಳು ನನಗಿವೆ ಅಂತ ತಿಳಿಸಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ