ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಈಜಿ ದಡಸೇರಿದ ಜೂನಿಯರ್ ಶಂಕರ್‌ನಾಗ್ ದೀಪಕ್ (Kannada Actor Deepak death news | Magadi | Deepak | Junior shankarnag | Latest Kannada Movie News)
PR

ಜೂನಿಯರ್ ಶಂಕರ್‌ನಾಗ್ ಎಂದೇ ಗುರುತಿಸಿಕೊಂಡಿದ್ದ ನಟ ದೀಪಕ್ 'ಮಾಗಡಿ' ಚಿತ್ರದ ಚಿತ್ರೀಕರಣದ ವೇಳೆ ನಡೆದ ಅಫಘಾತದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಬ್ಯಾಂಕಾಕ್‍ನ ಪಟಾಯ ಎಂಬ ಪ್ರದೇಶದಲ್ಲಿ ಮೋಟರ್ ಬೋಟ್‌ ರೈಡಿಂಗ್ ವೇಳೆ ಈ ಅಪಘಾತ ಸಂಭವಿಸಿತ್ತು. ಚಿತ್ರದ ಹಾಡೊಂದರ ಚಿತ್ರೀಕರಣದ ವೇಳೆ ಈ ಅಪಘಾತ ನಡೆದಿತ್ತು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆರಂಭದಲ್ಲಿ ಅವರು ನೀರಿನಲ್ಲೇ ಮುಳುಗಿ ಸಾವನ್ನಪ್ಪಿರುವುದಾಗಿ ಎಲ್ಲರೂ ಊಹಿಸಿದ್ದರು. ಹಾಗೂ ಅವರು ಸಾವನ್ನಪ್ಪಿರುವುದಾಗಿಯೂ ಎಲ್ಲೆಡೆ ಸುದ್ದಿಯೂ ಪ್ರಸಾರವಾಗಿತ್ತು. ಕೊಂಚ ಅವಧಿಯ ನಂತರ ಎಲ್ಲರಿಗೂ ಆಶ್ಚರ್ಯವಾಗುವ ರೀತಿಯಲ್ಲಿ ಈಜಿ ದಡಸೇರಿದ್ದರು ಜೂನಿಯರ್ ಶಂಕರ್‌ನಾಗ್.

ಚಿತ್ರವನ್ನು ಬಾಮಾ ಹರೀಶ್ ನಿರ್ಮಿಸುತ್ತಿದ್ದು, ಸುರೇಶ್ ಗೋ ಸ್ವಾಮಿ ಅವರು ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದಿದ್ದಾರೆ. ನೈಜ ಘಟನೆಯನ್ನು ಆಧರಿಸಿ ತೆಗೆಯಲಾಗುತ್ತಿರುವ 'ಮಾಗಡಿ' ಚಿತ್ರಕ್ಕೆ ಹೆಚ್ಚು ನೈಜತೆಯ ಅಂಶವನ್ನೇ ಸೇರಿಸಿ ಚಿತ್ರೀಕರಿಸಲಾಗುತ್ತದೆ ಎಂದು ಮೆಜೆಸ್ಟಿಕ್ ಖ್ಯಾತಿಯ ನಿರ್ಮಾಪಕ ಬಾಮಾ ಹರೀಶ್ ಹೇಳಿಕೊಂಡಿದ್ದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ