ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಖಡಕ್ ಡಿಜಿಪಿ ಪಾತ್ರದಲ್ಲಿ ಅಬಕಾರಿ ಸಚಿವ ರೇಣುಕಾಚಾರ್ಯ (Renukacharya | Bheema theerada Hanthakaru | Latest Kannada Movie News | Kannada Film News | Kannada Actress)
PR
ಕಳ್ಳಬಟ್ಟಿ ದಂಧೆ ನಡೆಯುತ್ತಿದ್ದ ಪ್ರದೇಶಕ್ಕೆ ಡೈರೆಕ್ಟ್ ಎಂಟ್ರಿ ಕೊಟ್ಟು ರೇಡ್ ಮಾಡಿದ್ದ ಅಬಕಾರಿ ಸಚಿವ ರೇಣುಕಾಚಾರ್ಯ, ಇನ್ಮುಂದೆ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದುನಿಯಾ ವಿಜಯ್ ಅಭಿನಯದ 'ಭೀಮಾ ತೀರದ ಹಂತಕರು' ಚಿತ್ರದಲ್ಲಿ ಖಡಕ್ ಆಗಿ ಡಿಜಿಪಿ ಸಮವಸ್ತ್ರ ಧರಿಸಿ ಸಮಾಜ ವಿರೋಧಿ ಚಟುವವಟಿಕೆಗಳ ವಿರುದ್ಧ ವೀರಾವೇಶದಿಂದ ಡೈಲಾಗ್ ಹೊಡೆಯಲಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಚಲನ ಚಿತ್ರಗಳಲ್ಲಿ ನಟಿಸುವ ಆಸೆ ಮೊದಲಿನಿಂದಲೇ ಇತ್ತಾದರೂ ಯಾವುದೇ ಅವಕಾಶಗಳು ಲಭಿಸಿರಲಿಲ್ಲ. ನಿರ್ದೇಶಕ ರವಿ ಶ್ರೀವತ್ಸ ಅವರು ಡಿಜಿಪಿ ಪಾತ್ರದಲ್ಲಿ ಅಭಿನಯಿಸುವಂತೆ ತಮಗೆ ಆಹ್ವಾನ ನೀಡಿರುವುದು ತುಂಬಾ ಸಂತಸ ತಂದಿದೆ ಎಂದಿದ್ದಾರೆ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ.

ಡಿಜಿಪಿ ಪಾತ್ರದಲ್ಲಿರುವ ರೇಣುಕಾಚಾರ್ಯ ಭೀಮಾ ತೀರದ ಹಂತಕರು ಚಿತ್ರದಲ್ಲಿ ಭೀಮಾ ತೀರದ ಹಂತಕರಿಗೆ ಎನ್‌ಕೌಂಟರ್ ಮಾಡಿ ಎಂದು ಹೇಳುತ್ತಾರೆ. ಖ್ಯಾತ ಬರಹಗಾರ ರವಿಬೆಳಗೆರೆ ಅವರು ಬರೆದಿರುವ ನೈಜ ಘಟನೆಯನ್ನಾಧರಿಸಿದ 'ಭೀಮಾ ತೀರದ ಹಂತಕರು' ಕಾದಂಬರಿಯನ್ನು ರವಿಶ್ರೀವತ್ಸ ನಿರ್ದೇಶಿಸುತ್ತಿದ್ದು, ಅಣಜಿ ನಾಗರಾಜ್ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಜ್ವಲ್ ಪೂವಯ್ಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಕುರಿತು ಚಿತ್ರ ನಿರ್ಮಿಸಲು ಉದ್ದೇಶಿಸಿದ್ದ ರೇಣುಕಾಚಾರ್ಯ ಇದಕ್ಕಾಗಿ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರೊಂದಿಗೂ ಮಾತುಕತೆ ನಡೆದಿದ್ದರು. ಚಿತ್ರ ನಟರು ರಾಜಕಾರಣಕ್ಕೆ ಬರುವುದು ಸಹಜ ಆದರೆ ರಾಜಕಾರಣಿಯೊಬ್ಬರು ಚಿತ್ರರಂಗದ ಬಗ್ಗೆ ಆಸಕ್ತಿ ಹೊಂದಿರುವುದು ಅಚ್ಚರಿಯ ಸಂಗತಿಯಾಗಿದೆ.

ಈ ಮೊದಲು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು 'ಮರಣ ಮೃದಂಗ' ಚಿತ್ರದಲ್ಲಿ ನಟಿಸಿದ್ದರು. ವಿಧಾನಸಭಾಧ್ಯಕ್ಷರಾಗಿದ್ದ ರಮೇಶ್‌ಕುಮಾರ್ ಅವರು ಟಿ.ಎನ್‌. ಸೀತಾರಾಮ್‌ ಅವರ ಮುಕ್ತ ಮತ್ತು ಮುಕ್ತ ಮುಕ್ತ ಧಾರಾವಾಹಿಯಲ್ಲೂ ನಟಿಸಿದ್ದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ