ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪತ್ನಿಗೆ ಮಾರಣಾಂತಿಕ ಹಲ್ಲೆ; ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ (Darshan Arrested for Assaulting Wife | Challenging Star Darshan | Kannada Actor Darshan | Vijayalaxmi)
ಹಿಂದಿನದು|ಮುಂದಿನದು
Darshan
PR


ದರ್ಶನ್ ಮೇಲಿರುವ ಪ್ರಕರಣಗಳು:
ಐಪಿಸಿ ಸೆಕ್ಷನ್ 307: ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ
ಶಸ್ತ್ರಾಸ್ತ್ರ ಕೇಸು: ರಿವಾಲ್ವರ್ ತೋರಿಸಿ ಕೊಲೆ ಬೆದರಿಕೆ
ಐಪಿಸಿ ಸೆಕ್ಷನ್ 498ಎ: ವರದಕ್ಷಿಣೆ ಕಿರುಕುಳ ಆರೋ

ಮಗುವಿನ ವಿಚಾರದಲ್ಲಿ ಗಲಾಟೆ...
ಈ ನಡುವೆ ದರ್ಶನ್ ಸ್ಟೇಟ್‌ಮೆಂಟ್ ಲಭ್ಯವಾಗಿದ್ದು, ವಿಚಾರಣೆ ವೇಳೆ ಪೊಲೀಸರಿಗೆ ನೀಡಿರುವ ಮಾಹಿತಿಯಂತೆ ಮಗು ವಿಚಾರದಲ್ಲಿ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.

ಗುರುವಾರ ಶೂಟಿಂಗ್ ಮುಗಿಸಿ ಬೆಂಗಳೂರಿನಲ್ಲಿರುವ ಮನೆಗೆ ಬಂದಿದ್ದ ಸಂದರ್ಭದಲ್ಲಿ ಪತ್ನಿ ಹಾಗೂ ಮಗ ಮನೆಯಲ್ಲಿರಲಿಲ್ಲ. ಈ ವೇಳೆ ಫೋನಾಯಿಸಿದಾಗ ಪತ್ನಿ ಸ್ನೇಹಿತೆ ವಿದ್ಯಾ ಮನೆಯಲ್ಲಿರುವುದು ತಿಳಿದು ಬಂದಿತ್ತು.

ಆಮೇಲೆ ಕುಡಿತ ಮತ್ತಿನಲ್ಲಿದ್ದ ದರ್ಶನ್, ಪತ್ನಿ ವಿಜಯಲಕ್ಷ್ಮೀ ಅವರನ್ನು ಇನ್ನೋವಾ ಕಾರಿನಲ್ಲಿ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದ ಮೇಲೆ ಗೆಳತಿ ವಿದ್ಯಾ ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ಆಮೇಲೆ ಗಂಭೀರ ಹಲ್ಲೆಗೊಳಗಾದ ವಿಜಯಲಕ್ಷ್ಮೀ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇನ್ನೊಂದು ವರದಿಯಂತೆ ವಿಜಯಲಕ್ಷ್ಮೀ ಅವರಲ್ಲಿ ಪುತ್ರನನ್ನು ಬಿಟ್ಟುಕೊಡುವಂತೆ ದರ್ಶನ್ ಕೇಳಿಕೊಂಡಿದ್ದರು. ಆದರೆ ಇದಕ್ಕೆ ಪತ್ನಿ ಓಗೊಡಲಿಲ್ಲ. ದರ್ಶನ್ ಹೇಳುವಂತೆಯೇ ನನ್ನ ಮಗ ಇನ್ನೋವಾ ಕಾರ್‌ನಲ್ಲಿ ಓಡಾಡುವುದನ್ನು ಇಷ್ಟಪಡುತ್ತಾನೆ. ಹೀಗಾಗಿ ಒಂದು ರೌಡ್ ಹಾಕಿ ಬರಲು ವಿನಂತಿ ಮಾಡಿದ್ದೆ. ಆದರೆ ಇದಕ್ಕೆ ಪತ್ನಿ ಸಮ್ಮತಿಸಿರಲಿಲ್ಲ.

ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ಇಬ್ಬರ ನಡುವೆ ಗಲಾಟೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಮದ್ಯದ ಅಮಲಿನಲ್ಲಿ ಪತ್ನೆಗೆ ಹಲ್ಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಬರಿಗೈಯಲ್ಲಿ ಹಲ್ಲೆ ನಡೆಸಲಾಗಿದ್ದು, ರಿವಾಲ್ವರ್‌ನಿಂದ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬುದನ್ನು ನಿರಾಕರಿಸಿದ್ದಾರೆ.
ಹಿಂದಿನದು|ಮುಂದಿನದು
ಇವನ್ನೂ ಓದಿ