ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪತ್ನಿಗೆ ಸಿಗರೇಟಿನಿಂದ ಸುಟ್ಟು, ಚಪ್ಪಲಿಯಲ್ಲಿ ಬಾರಿಸಿದ ದರ್ಶನ್! (Darshan Arrested for Assaulting Wife | Challenging Star Darshan | Kannada Actor Darshan | Vijayalaxmi)
PR
ನಟ ದರ್ಶನ್ ಪತ್ನಿಗೆ ತೀವ್ರವಾಗಿ ಥಳಿಸಿ ಇದೀಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಅವರು ಭೇಟಿ ನೀಡಿ ವಿಚಾರಿಸಿದಾಗ ಘಟನೆಯನ್ನು ಪೂರ್ತಿ ವಿವರಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮಗ ವಿನಿಶ್‌ನನ್ನು ಬೇಬಿ ಸಿಟ್ಟಿಂಗ್‌ನಿಂದ ಕರೆದುಕೊಂಡು ನೇರವಾಗಿ ಬಾಪೂಜಿ ನಗರದಲ್ಲಿರುವ ವಿಜಯ ಲಕ್ಷ್ಮಿ ಅವರ ಗೆಳತಿ ವಿದ್ಯಾ ಅವರ ಮನೆಗೆ ತೆರಳಿದ್ದ ದರ್ಶನ್, ಅಲ್ಲಿಂದ ಪತ್ನಿಯನ್ನು ಕರೆದು ತನ್ನ ಇನ್ನೋವಾ ಕಾರಿನಲ್ಲಿ ಕೂರಿಸಿ ಪ್ರಯಾಣ ಬೆಳೆಸಿದ್ದಾರೆ.

ಕಾರಿನ ಹಿಂಬದಿಯ ಸೀಟಿನಲ್ಲಿ ಮೂವರು ಕುಳಿತುಕೊಂಡು ಪ್ರಯಾಣಿಸುವ ವೇಳೆ ಪತ್ನಿಗೆ ತೀವ್ರವಾಗಿ ಥಳಿಸಿದ್ದರು, ಸಿಗರೇಟಿನಲ್ಲಿ ಸುಟ್ಟಿದ್ದರು ಮತ್ತು ಚಪ್ಪಲಿಯ ಹೀಲ್ಸ್‌ನಿಂದಲೂ ಹೊಡೆದರು ಎಂದು ವಿಜಯಲಕ್ಷ್ಮಿ ಮತ್ತು ಚಾಲಕ ಹೇಳಿರುವುದಾಗಿಯೂ ತಿಳಿದುಬಂದಿದೆ. ಆನಂತರ ದರ್ಶನ್ ಸುಮಾರು 6 ಗಂಟೆಯ ವೇಳೆಗೆ ಪತ್ನಿಯನ್ನು ಪುನಃ ಗೆಳತಿಯ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ.

ಇವಿಷ್ಟು ಘಟನೆ ನಡೆದದ್ದು ಗುರುವಾರ ಸಂಜೆ ನಾಲ್ಕರಿಂದ ಆರು ಗಂಟೆಯ ನಡುವಿನ ವೇಳೆಯಲ್ಲಿ ಎಂದು ವಿಜಯಲಕ್ಷ್ನಿ ತಿಳಿಸಿದ್ದಾರೆ. ಆದರೆ ಗೆಳತಿಯ ಮನೆಯಲ್ಲಿ ಬಿಟ್ಟು ಹೋದಂತೆ ಪತ್ನಿ ವಿಜಯಲಕ್ಷ್ಮಿ ಎಲ್ಲಾ ಘಟನೆಗಳನ್ನು ಗೆಳತಿ ವಿದ್ಯಾ ಅವರೊಂದಿಗೆ ಹಂಚಿಕೊಂಡಿದ್ದಾರೆ.

ಆದರೆ ಇಲ್ಲಿಗೆ ಮುಗಿಯಿತು ಎನ್ನುವಷ್ಟರಲ್ಲೇ ದರ್ಶನ್ ರಾತ್ರಿ ಹನ್ನೆರಡು ಗಂಟೆಯ ವೇಳೆಗೆ ಕಂಠಪೂರ್ತಿ ಕುಡಿದು ವಿದ್ಯಾ ಅವರ ಮನೆಗೆ ಪುನಃ ಆಗಮಿಸಿ ಪತ್ನಿ, ಮಗ ಎಂದು ನೋಡದೆ ಎರ್ರಾ ಬಿರ್ರಿ ಥಳಿಸಿದ್ದಾರೆ ಎಂದು ತಿಳಿದುಬಂದಿದೆ. ವಿಜಯಲಕ್ಷ್ಮಿ ಅವರ ತಲೆಗೆ ತೀವ್ರ ಏಟು ಬಿದ್ದಿದ್ದು, ಮೂರು ಕಡೆ ಗಾಯಗಳಾಗಿವೆ. ಒಂದು ಕಿವಿಯೂ ಬಹುತೇಕ ಹರಿದುಹೋಗಿದೆ ಎಂದು ತಿಳಿದುಬಂದಿದೆ.

ಈ ನಡುವೆ ನಟ ಅಂಬರೀಶ್, ನಿರ್ದೇಶಕ ಪ್ರೇಮ್ ಕೂಡ ವಿದ್ಯಾ ಅವರ ಮನೆಗೆ ತೆರಳಿ ರಾಜಿಗೆ ಪ್ರಯತ್ನಿಸಿದ್ದಾರೆ. ಇದೂ ಅಸಾಧ್ಯವಾದಾಗ ಪತ್ನಿ ವಿಜಯಲಕ್ಷ್ಮಿ ಪೊಲೀಸರ ಮೊರೆ ಹೋಗಿರುವುದಾಗಿ ತಿಳಿದುಬಂದಿದೆ. ಇದೀಗ ಪ್ರಮುಖ ನಟರಿಂದ ರಾಜಿಗೆ ಪ್ರಯತ್ನ ನಡೆಯುತ್ತಿದೆ. ನಟ ಜಗ್ಗೇಶ್, ದುನಿಯಾ ವಿಜಿ ಮುಂತಾದವರೆಲ್ಲರೂ ರಾಜಿ ಸಂಧಾನಕ್ಕೆ ಪ್ರಯತ್ನಿಸುತ್ತಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ