ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಜಯಲಕ್ಷ್ಮಿಗೆ ನರಕ 'ದರ್ಶನ'ವಾಗಲು 'ಅವಳು' ಕಾರಣವೇ? (Darshan Arrested for Assaulting Wife | Challenging Star Darshan | Kannada Actor Darshan | Vijayalaxmi | Nikitha)
PR
ನಟ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಸಂಸಾರ ಜಗಳ ಬೀದಿಗೆ ಬಂದು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮದುವೆಯಾದ ಆರಂಭದ ಏಳು ವರ್ಷ ಸಂತೋಷವಾಗಿದ್ದ ಸಂಸಾರದಲ್ಲಿ ಒಂದು ವರ್ಷದಿಂದೀಚೆಗೆ ಈ ರೀತಿಯ ಕಲಹ ಆರಂಭವಾಗಿರುವುದಾಗಿ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಅವರು ತಿಳಿಸಿದ್ದಾರೆ. ಇನ್ನು ಮುಂದೆಯೂ ಸರಿ ಇರೋದಾದ್ರೆ ರಾಜಿ ಮಾಡ್ಕೋತೀವಿ ಎಂದು ಪತ್ನಿ ವಿಜಯಲಕ್ಷ್ನಿ ಅಲವತ್ತುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ ಈ ಕಲಹಕ್ಕೆ ದರ್ಶನ್ ಅವರೊಂದಿಗೆ ಹೆಸರು ಕೇಳಿಬರುತ್ತಿರುವ 'ಅವಳು' ಕಾರಣವೇ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಹಿನ್ನೆಲೆಯಲ್ಲಿ ನಟ ದರ್ಶನ್ ಅವರ ಒಂದು ವರ್ಷದ ಹಿಂದಿನ ಇತಿಹಾಸವನ್ನು ನೋಡಿದ್ರೆ, 'ಪ್ರಿನ್ಸ್' ಸೇರಿದಂತೆ ದರ್ಶನ್‌ನ ಕೆಲವು ಚಿತ್ರಗಳಲ್ಲಿ ನಟಿಸಿದ್ದ ಬಹುಭಾಷಾ ನಟಿ ನಿಖಿತಾ, ಎಲ್ಲಾ ಚಿತ್ರಗಳಲ್ಲೂ ಬಿಸಿ ಬಿಸಿಯಾಗಿ ಕಾಣಿಸಿಕೊಂಡಿದ್ದೂ ಅಲ್ಲದೆ ಇವರಿಬ್ಬರೂ ಹೊರಗಡೆ ತುಂಬಾ ಹತ್ತಿರವಾಗಿರುತ್ತಿದ್ದರು ಎಂಬೆಲ್ಲಾ ಸುದ್ದಿಗಳು ಹಿಂದೆಯೇ ಹರಡಿದ್ದವು.

ಅದಕ್ಕೆ ಪ್ರತಿಕ್ರಿಯಿಸಿದ್ದ ನಿಖಿತಾ, ಚಲನ ಚಿತ್ರದಲ್ಲಿ ಮದುವೆ ಆಗುವ ಸನ್ನಿವೇಶವನ್ನೇ ಯಾರೋ ನಿಜ ಎಂದು ಭಾವಿಸಿದ್ದಾರೆ. ನಮ್ಮಿಬ್ಬರ ನಡುವೆ ಅಂಥಾ ಸಂಬಂಧವೇನಿಲ್ಲ. ಸುಮ್ ಸುಮ್ನೆ ಹೇಳಿದ್ರೆ ಗುದ್ದಿಬಿಡ್ತೇನೆ ಎಂದೆಲ್ಲ ಗದರಿಸಿದ್ದರು.

ಅಲ್ಲದೆ, ಚಿತ್ರೀಕರಣದ ಸೆಟ್‌ನಲ್ಲೂ ನಿಖಿತಾ ಮತ್ತು ದರ್ಶನ್ ಅವರ ನಿಕಟ ಸಂಪರ್ಕ ಅತಿರೇಕವನ್ನೂ ಮೀರಿಸುವಂತಿತ್ತು ಎನ್ನುತ್ತಿದ್ದರು ಪ್ರತ್ಯಕ್ಷದರ್ಶಿಗಳು ಎಂದೆಲ್ಲಾ ಹಿಂದೆಯೇ ಸುದ್ದಿಯಾಗಿತ್ತು.

ಇವರಿಬ್ಬರ ಸಂಬಂಧದ ಕುರಿತು ವಿಚಿತ್ರ ಸುದ್ದಿ ಹರಡುತ್ತಿದ್ದಂತೆ ಇತ್ತ ಸಂಸಾರದಲ್ಲಿ ಕಲಹ ಆರಂಭವಾಗತೊಡಗಿದೆ. ದರ್ಶನ್ ಕುಡಿತವೂ ಅತಿರೇಕಕ್ಕೆ ಹೋಗಿದೆ. ಹಾಗಾಗಿ ಇಬ್ಬರ ನಡುವೆ ಯಾವುದೂ ಸರಿಹೊಂದದೆ ಕಲಹ ಬೀದಿರಂಪವಾಗಿ ಹೋಗಿದೆ ಎನ್ನುತ್ತಿದೆ ಚಿತ್ರರಂಗದ ಆಪ್ತಮೂಲಗಳು

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ