ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದರ್ಶನ್-ವಿಜಯಲಕ್ಷ್ಮಿ ರಾಜಿ ಆಗಿದ್ದಾರೆ: ಅಂಬರೀಷ್ ಘೋಷಣೆ
(Ambarish| Darshan Arrested for Assaulting Wife | Challenging Star Darshan | Kannada Actor Darshan | Vijayalaxmi)
ದರ್ಶನ್-ವಿಜಯಲಕ್ಷ್ಮಿ ರಾಜಿ ಆಗಿದ್ದಾರೆ: ಅಂಬರೀಷ್ ಘೋಷಣೆ
ಬೆಂಗಳೂರು, ಶುಕ್ರವಾರ, 9 ಸೆಪ್ಟೆಂಬರ್ 2011( 15:09 IST )
WD
ಚಿತ್ರನಟ ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ ಪ್ರಕರಣವು ಹಿರಿಯ ನಟ ಅಂಬರೀಷ್ ಅವರ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯ ಕಂಡಿದೆ.
ಚಿತ್ರನಟ ದರ್ಶನ್ ಅವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಹಿನ್ನೆಲೆಯಲ್ಲಿ ಅವರ ಪತ್ನಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ವಿಜಯನಗರ ಠಾಣೆ ಪೊಲೀಸರು, ದರ್ಶನ್‌ರನ್ನು ಬಂಧಿಸಿದ್ದರು.
ವಿಜಯಲಕ್ಷ್ಮಿ ಅವರು ಚಿಕಿತ್ಸೆ ಪಡೆಯುತ್ತಿದ್ದ ಗಾಯತ್ರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಹಿರಿಯ ನಟ ಅಂಬರೀಷ್, ಮುಂದೆ ಈ ರೀತಿ ತಪ್ಪು ಮಾಡದಂತೆ ದರ್ಶನ್‌ಗೆ ಬುದ್ಧಿ ಹೇಳುತ್ತೇವೆ ಎಂದು ವಿಜಯಲಕ್ಷ್ಮಿ ಹಾಗೂ ಅವರ ತಾಯಿಗೆ ಭರವಸೆ ನೀಡಿದ್ದರಿಂದ ವಿಜಯಲಕ್ಷ್ಮಿ ಮತ್ತೆ ಪತಿಯೊಂದಿಗೆ ಒಂದಾಗಲು ಒಪ್ಪಿಗೆ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ಅಂಬರೀಷ್ ಅವರೇ ಮಾಧ್ಯಮಗಳೆದುರು ಘೋಷಿಸಿದ್ದಾರೆ.
ಮಂಡ್ಯದಿಂದ ಬಂದರು ದರ್ಶನ್ ಮಹಿಳಾ ಅಭಿಮಾನಿಗಳು ಪತ್ನಿಯ ಮೇಲೆ ಹಲ್ಲೆ ನಡೆಸಿದ ಆಪಾದನೆಯ ಮೇರೆಗೆ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಬಂಧಿತರಾಗಿರುವ ಚಿತ್ರನಟ ದರ್ಶನ್ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಮಂಡ್ಯದಿಂದ ಆಗಮಿಸಿದ ಅವರ ಮಹಿಳಾ ಅಭಿಮಾನಿಗಳು ಠಾಣೆಯ ಮುಂದೆ ಜಮಾಯಿಸಿದ್ದಾರೆ.
ದರ್ಶನ್ ಬಂಧನದ ಸುದ್ದಿಯಿಂದ ತೀವ್ರವಾಗಿ ಆಘಾತಗೊಂಡ ಮಂಡ್ಯ ಮಹಿಳಾ ಅಭಿಮಾನಿಗಳು, ದರ್ಶನ್ ಹೆಸರಿಗೆ ಮಸಿ ಬಳಿಯಲು ಅವರ ಪತ್ನಿ ವಿಜಯಲಕ್ಷ್ಮಿ ಅವರೇ ಕಾರಣ ಎಂದು ಆಪಾದಿಸಿದರು ಎನ್ನಲಾಗಿದೆ.
ದರ್ಶನ್ ಮಹಿಳಾ ಅಭಿಮಾನಿಗಳು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಮಹಿಳೆಯರ ಮೇಲೆ ಲಾಠಿ ಎತ್ತುವಂತಿಲ್ಲವಾದ್ದರಿಂದ ಪೊಲೀಸರು ಇವರನ್ನು ಚದುರಿಸಲು ಹರ ಸಾಹಸ ಮಾಡುತ್ತಿದ್ದಾರೆ.
ಬಿಎಂಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ಚಿತ್ರನಟ ದರ್ಶನ್ ಅವರನ್ನು ಕೂಡಲೇ ಬಿಡುಗಡೆ ನಡೆಸುವಂತೆ ಆಗ್ರಹಿಸಿದ ಅವರ ಅಭಿಮಾನಿಗಳು ವಿಜಯ ನಗರದಲ್ಲಿ ಬಿಎಂಟಿಸಿ ಬಸ್‌ಗಳ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ.
ದೀಪಾಂಜಲಿ ನಗರದಿಂದ ಹೌಸಿಂಗ್ ಬೋರ್ಡ್ ಕಡೆ ಹೋಗುತ್ತಿದ್ದ ಎರಡು ಬಿಎಂಟಿಸಿ ಬಸ್‌ಗಳ ಮೇಲೆ ಕಲ್ಲು ತೂರಿ ಪರಾರಿಯಾಗಿದ್ದಾರೆ. ಮಧ್ಯಾಹ್ನದ ವೇಳೆಯಾಗಿದ್ದರಿಂದ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿದ್ದು ಯಾರೂ ಗಾಯಗೊಂಡಿಲ್ಲ ಎನ್ನಲಾಗಿದೆ.