ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಉಸಿರಾಟದ ತೊಂದರೆ; ನಟ ದರ್ಶನ್ ಆಸ್ಪತ್ರೆಗೆ ದಾಖಲು (assaulting wife | Darshan arrested | Kannada Actor Darshan | Vijayalakshmi)
ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಪ್ಪನ ಅಗ್ರಹಾರ ಸೇರಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಇದೀಗ ತೀವ್ರ ಉಸಿರಾಟದ ತೊಂದರೆಯ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

Darshan
PR
ಪತ್ನಿ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ ಆರೋಪ ಹೊತ್ತಿದ್ದ ದರ್ಶನ್ ಅವರಿಗೆ ನಗರದ ಒಂದನೇ ಎಸಿಎಂಎಂ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು. ಆದರೆ ಕಳೆದೊಂದು ದಿನದಿಂದ ಆಹಾರ ಸೇವಿಸದ ಹಿನ್ನಲೆಯಲ್ಲಿ ದರ್ಶನ್ ಅವರ ಆರೋಗ್ಯ ಏರುಪೇರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಒಟ್ಟು ಮೂರು ಆಸ್ಪತ್ರೆಗಳಿಗೆ ದರ್ಶನ್ ಅವರನ್ನು ಕರೆದೊಯ್ಯಲಾಗಿತ್ತು. ಆರಂಭದಲ್ಲಿ ನಿಮ್ಹಾನ್ಸ್‌ಗೆ ದಾಖಲಿಸಲಾಗಿದ್ದ ದರ್ಶನ್ ತೂಗದೀಪ ಅವರನ್ನು ಆನಂತರ ವಿಕ್ಟೋರಿಯಾ ಅಲ್ಲಿಂದ ನಂತರ ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.

ತುರ್ತು ವಿಭಾಗದಲ್ಲಿ ದಾಖಲಿಸಲಾದ ದರ್ಶನ್ ಅವರನ್ನು ಆನಂತರ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ಚಿಕ್ಕವನಿಂದಲೇ ದರ್ಶನ್ ಅವರಿಗೆ ಅಸ್ತಾಮಾ ಖಾಯಿಲೆಯಿದ್ದು ತೀವ್ರ ಬಳಲಿಕೆ ಹಿನ್ನಲೆಯಲ್ಲಿ ಮತ್ತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

ಪೊಲೀಸ್ ಬಿಗು ಭದ್ರತೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಜೈಲಿನಲ್ಲೇ ಆರಂಭದಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದರೂ ಅದು ಫಲಕಾರಿಯಾಗಲಿಲ್ಲ. ಇದರಿಂದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಮುಂಜಾನೆ 3.15ರ ಹೊತ್ತಿಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದ ದರ್ಶನ್ ಅವರಿಗೆ ಇದೀಗ ಎರಡು ಗ್ಲೂಕೋಸ್ ನೀಡಲಾಗಿದ್ದು, ಸ್ಥಿತಿ ನಾರ್ಮಲ್ ಸ್ಟೇಜ್‌ಗೆ ಮರಳುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನಟ ದುನಿಯಾ ವಿಜಯ್ ಹೇಳುವಂತೆ, ದರ್ಶನ್ ನಿನ್ನೆಯಿಂದಲೇ ಊಟ ಮಾಡಿಲ್ಲ. ಇದರಿಂದಾಗಿ ತೀವ್ರ ಸುಸ್ತಾಗಿದ್ದರಲ್ಲದೆ ತೀವ್ರ ಅನಾರೋಗ್ಯ ಕಾಣಿಸಿತ್ತು. ಈ ಮಧ್ಯೆ ಒಂದು ಗ್ಲಾಸ್ ಜ್ಯೂಸ್ ಕುಡಿದಿದ್ದರೂ ಸಹ ಅದು ಕೂಡಾ ವಾಂತಿಯಾಗಿತ್ತು ಎಂದಿದ್ದಾರೆ.

ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಮೂಲಕ ಜೈಲು ಸೇರಿದ್ದ ದರ್ಶನ್ ಅವರ ಜಾಮೀನು ಅರ್ಜಿ ಬಗ್ಗೆ ಮುಂದಿನ ವಿಚಾರಣೆ ಸೋಮವಾರ ನಡೆಯಲಿದೆ.

ಎಲ್ಲವೂ ನಾಟಕ...
ಮತ್ತೊಂದು ಮೂಲಗಳ ಪ್ರಕಾರ ಜೈಲುವಾಸವನ್ನು ತಪ್ಪಿಸುವ ನಿಟ್ಟಿನಲ್ಲಿ ದರ್ಶನ್ ಈ ರೀತಿ ಮಾಡುತ್ತಿದ್ದಾರೆ ಎಂಬ ಅಪವಾದವೂ ಕೇಳಿಬರುತ್ತಿವೆ. ಒಂದು ವೇಳೆ ದರ್ಶನ್ ಅವರಿಗೆ ಅನಾರೋಗ್ಯ ಕಾಡಿದ್ದೇ ಆಗಿದ್ದರೆ ಅವರಿಗೆ ಜೈಲಿನಲ್ಲೇ ಚಿಕಿತ್ಸೆ ಕೊಡಬಹುದಾಗಿತ್ತು. ಜೈಲಿನ ವೈದ್ಯಧಿಕಾರಿಗಳು ಚಿಕಿತ್ಸೆ ನೀಡಿದರೂ ಸಹ ದರ್ಶನ್ ಅನಾರೋಗ್ಯವನ್ನು ವಾಸಿ ಮಾಡಬಹುದಿತ್ತು.

ಆದರೆ ಸೋಮವಾರ ವಿಚಾರಣೆ ನಡೆಯುವ ವರೆಗೆ ಪರಪ್ಪನ ಅಗ್ರಹಾರ ವಾಸ ತಡೆಯುವ ನಿಟ್ಟಿನಲ್ಲಿ ಇಂತಹ ಕಪಟ ನಾಟಕ ಮಾಡಲಾಗುತ್ತಿದೆ ಎಂಬ ಆರೋಪವು ಕೇಳಿಬರುತ್ತಿವೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ