ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಾನಿನ್ನೂ ಸಿಂಗಲ್, ಲವ್ ಮ್ಯಾರೇಜ್ ಓಕೆ: ಅಮೂಲ್ಯ (Amulya | Kannada actress | Cheluvina Chittara | Karnataka | Latest Kannada Movie News | Kannada Film News | Kannada Actress)
ನಾನಿನ್ನೂ ಸಿಂಗಲ್, ಲವ್ ಮ್ಯಾರೇಜ್ ಓಕೆ: ಅಮೂಲ್ಯ
PR
ಸಾಕಷ್ಟು ಹುಡುಗರು ಪ್ರಪೋಸ್ ಮಾಡಿದ್ರೂ, ಯಾರನ್ನೂ ಒಪ್ಪಿಕೊಂಡಿಲ್ಲ. ಇದುವರೆಗೆ ಯಾರನ್ನೂ ಲವ್ ಮಾಡುತ್ತಿಲ್ಲ. ಒಂದು ವೇಳೆ ಲವ್ ಮ್ಯಾರೇಜ್ ಆಗುವುದಿದ್ದರೂ, ನನ್ನ ಅಭ್ಯಂತರವಿಲ್ಲ ಎಂದು ಗುಬ್ಬಚ್ಚಿಯಂತಹ ಹುಡುಗಿ ಅಮೂಲ್ಯಾ ಹೇಳಿಕೊಂಡಿದ್ದಾರೆ.
ನಾನಿನ್ನೂ ಸಿಂಗಲ್. ಇದುವರೆಗೆ ಯಾರನ್ನೂ ಲವ್ ಮಾಡಿಲ್ಲ. ಮುಂದಿನದ್ದು ಗೊತ್ತಿಲ್ಲ ಅನ್ನೋ ಅಮೂಲ್ಯಾಗೆ ಪ್ರೀತಿಯಿಂದ ನೋಡಿಕೊಳ್ಳುವ ಹುಡುಗ ಸಿಕ್ಕಿದ್ರೆ ಸಾಕಂತೆ. ಸದ್ಯಕ್ಕೆ ಅವರ ಗುರಿ ಇರುವುದು ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು, ಅಭಿಮಾನಿಗಳಿಗೆ ಮುದಗೊಳಿಸುವ ಚಿತ್ರಗಳಲ್ಲಿ ನಟಿಸಬೇಕೆನ್ನುವುದು ಮಾತ್ರ.
ಶಾಲೆಗೆ ಹೋಗಿದ್ದು ಗರ್ಲ್ಸ್ ಸ್ಕೂಲಿನಲ್ಲಿ. ಈಗ ಕಾಲೇಜಿಗೆ ಹೋಗುತ್ತಿರುವುದು ಕೂಡ ಗರ್ಲ್ ಕಾಲೇಜಿಗೆ. ಹಾಗಾಗಿ ಹುಡುಗರು ಅಷ್ಟು ಸುಲಭವಾಗಿ ಸಿಗಲ್ಲ. ಸೋಷಿಯಲ್ ನೆಟ್‌ವರ್ಕ್‌ನಲ್ಲಿ ಕೆಲವರು ಪ್ರಪೋಸ್ ಮಾಡಿದ್ದಾರೆ. ಇದು ಬಿಟ್ಟರೆ ಹೊರಗಡೆ ಒಂದಿಬ್ಬರು ಪ್ರೀತಿ ಮಾಡಿ ಅಂತ ದುಂಬಾಲು ಬಿದ್ದಿರೋರಿದ್ದಾರೆ. ಇದುವರೆಗೆ ಯಾರಿಗೂ ನಾನು ಮನಸ್ಸು ಕೊಟ್ಟಿಲ್ಲ ಅಂತ ಪ್ರೀತಿಯ ಕುರಿತ ಪ್ರಶ್ನೆಗಳಿಗೆ ಅಮೂಲ್ಯಾ ಉತ್ತರ ನೀಡಿದರು.
ಮದುವೆಯಾಗುವ ಹುಡುಗ ಹೀಗೇ ಇರಬೇಕು ಅನ್ನೋ ಕನಸುಗಳು 'ಚೆಲುವಿನ ಚಿತ್ತಾರ'ದ ಹುಡುಗಿಗಿಲ್ಲ. ಆ ಬಗ್ಗೆ ಇದುವರೆಗೂ ಯೋಚನೆ ಮಾಡಿಲ್ವಂತೆ. ಆದ್ರೂ ಒಟ್ಟಾರೆ ಒಳ್ಳೇ ಮನಸ್ಸಿದ್ರೆ ಸಾಕು. ಮದುವೆ ವಿಚಾರ ಬಂದಾಗ ಅದು ಆರೆಂಜ್ಡ್ ಅಥವಾ ಲವ್ -- ಯಾವುದಾದ್ರೂ ಓಕೆ ಅಂತ ಹೇಳಿಕೊಂಡರು.
ಜೀವನದಲ್ಲಿ ನಿರ್ದಿಷ್ಟ ಆಸೆಗಳನ್ನೇ ಹೊಂದಿಲ್ಲವೆಂದಿರುವ ಅಮೂಲ್ಯಾ, ಯಾವತ್ತೂ ಹೀರೋಯಿನ್ ಆಗುವ ಕನಸು ಕಂಡವರಲ್ಲ. ಹಾಗಾಗಿ ಮುಂದೇನು ಅನ್ನುವುದು ಇನ್ನೂ ಗೊತ್ತಿಲ್ಲ. ಆ ಸಮಯದಲ್ಲಿ ಯಾವ ಪರಿಸ್ಥಿತಿ ಎದುರಾಗುತ್ತದೆ ಅನ್ನುವುದನ್ನು ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇನೆ. ಖಂಡಿತಾ ಕನ್ನಡ ಚಿತ್ರಪ್ರೇಮಿಗಳಿಗೆ ನಿರಾಸೆ ಮಾಡುವುದಿಲ್ಲ ಅಂತ ತಿಳಿಸಿದರು.