ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದರ್ಶನ್ ಪತ್ನಿ ವಿಜಯ ಲಕ್ಷ್ನಿ ವಿರುದ್ಧ ಅತ್ತಿಗೆ ಶ್ರೀಲಕ್ಷ್ಮಿ ದೂರು (Darshan Arrested for Assaulting Wife | Challenging Star Darshan | Kannada Actor Darshan | Vijayalaxmi | Shrilakshmi)
ದರ್ಶನ್ ಪತ್ನಿ ವಿಜಯ ಲಕ್ಷ್ನಿ ವಿರುದ್ಧ ಅತ್ತಿಗೆ ಶ್ರೀಲಕ್ಷ್ಮಿ ದೂರು
PR
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಇದೀಗ ಆಸ್ಪತ್ರೆಯಲ್ಲಿರುವ ಅವರ ಪತ್ನಿ ವಿಜಯಲಕ್ಷ್ಮಿ ವಿರುದ್ಧ ದೂರು ಸಲ್ಲಿಸಲು ಅವರ ಅತ್ತಿಗೆ ಶ್ರೀಲಕ್ಷ್ಮಿ ಮುಂದಾಗಿದ್ದಾರೆ. ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿಯ ಅಣ್ಣ ವಾಸುದೇವ್ ಅವರ ಪತ್ನಿ ಶ್ರೀಲಕ್ಷ್ಮಿ ಈ ನಿರ್ಧಾರಕ್ಕೆ ಬಂದಿದ್ದು, ತನಗೂ ವರದಕ್ಷಿಣೆ ಕಿರುಕುಳ ಆದಾಗ ದೂರು ನೀಡದಂತೆ ಒತ್ತಡ ಹೇರಿದ್ದರು ಎಂದು ಅವರು ಆರೋಪಿಸಿದ್ದಾರೆ.
ಶ್ರೀಲಕ್ಷ್ಮಿ ಅವರ ಪತಿ, ಅಂದ್ರೆ ದರ್ಶನ್ ಪತ್ನಿಯ ಅಣ್ಣನಿಗೆ ಮದುವೆಯ ಮುಂಚಿತವಾಗಿಯೇ ಅಕ್ರಮ ಸಂಬಂಧವಿತ್ತು. ಮದುವೆಯಾದ್ರೂ ಅವರ ಚಾಳಿ ಬಿಟ್ಟಿರಲಿಲ್ಲ. ಮನೆಯಲ್ಲಿ ಪತ್ನಿಯಿದ್ದರೂ ತನ್ನ ಹಳೆಯ ಪ್ರಿಯತಮೆಯನ್ನು ಕರೆತರುತ್ತಿದ್ದರು.
ಇದರಿಂದ ಶ್ರೀಲಕ್ಷಿ ಮನೆಯಲ್ಲೇ ಪ್ರತಿಭಟಿಸಿದರೆ, ವಿಜಯಲಕ್ಷ್ಮಿ ಅವರ ಅಮ್ಮ ಕಿರುಕುಳ ನೀಡುತ್ತಿದ್ದರು. ಪತಿ ವಾಸುದೇವ್ ಕೂಡ ಥಳಿಸುತ್ತಿದ್ದರು, ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಈ ಕುರಿತು ತ್ಯಾಗರಾಜ ನಗರ ಮತ್ತು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ ಆದರೆ ಎಫ್‌ಐಆರ್ ದಾಖಲಾಗಿರುವುದಿಲ್ಲ. ಪೊಲೀಸ್ ಪ್ರಕರಣಗಳು ದಾಖಲಾಗದಂತೆ ತಮಗಿರುವ ಸಂಪರ್ಕ ಸಾಧಿಸಿ ನನಗೆ ಅಡ್ಡಗಾಲಾಕಿದ್ದರು.
ಪ್ರಕರಣಗಳು ಗಂಭೀರ ಸ್ವರೂಪ ಪಡೆಯಲು ಸಾಧ್ಯವಾಗದಂತೆ ಒಂದಲ್ಲಾ ಒಂದು ರೀತಿಯಲ್ಲಿ ವಿಜಯಲಕ್ಷ್ಮಿ ಕುತಂತ್ರ ನಡೆಸುತ್ತಿದ್ದರು. ಅಂದು ನನಗಾಗಿದ್ದ ಕಿರುಕುಳಗಳಿಗೆ ಹೋಲಿಸಿದರೆ ಇದೀಗ ಆಕೆಯ ಮೇಲಾಗಿರುವ ಹಲ್ಲೆ ಲೆಕ್ಕಕ್ಕೇ ನಿಲುಕದ್ದು ಎಂದಿದ್ದಾರೆ ಶ್ರೀಲಕ್ಷ್ಮಿ.
ಇಂದು ನನಗೂ ಕಾಲ ಕೂಡಿಬಂದಿದೆ, ಅದನ್ನವರು ಅರ್ಥಮಾಡಿಕೊಳ್ಳಬೇಕು. ನನ್ನ ಮೇಲೆ ಅತ್ತೆ ಸೊಸೆ ಸೇರಿಕೊಂಡು ವರದಕ್ಷಿಣೆ ಕಿರುಕುಳ ನೀಡುತ್ತಿದ್ದುದರ ವಿರುದ್ದ ನಾನೂ ಮಹಿಳಾ ಸಂಘಟನೆಗಳ ಬೆಂಬಲ ಪಡೆದು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಿದ್ದೇನೆ ಎಂದವರು ಹೇಳಿಕೊಂಡಿದ್ದಾರೆ. ಅವರಿಗೂ ಶಿಕ್ಷೆಯಾಗಲಿ. ಸೆಲೆಬ್ರಿಟಿಗಳಿಗೊಂದು ಕಾನೂನೂ ಬೇರೆಯವರಿಗೊಂದು ಕಾನೂನಾ ಎಂದೂ ಪ್ರಶ್ನಿಸಿದ್ದಾರೆ.