ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡ ಚಿತ್ರರಂಗದಿಂದ ನಟಿ ನಿಖಿತಾಗೆ 3 ವರ್ಷಗಳ ನಿಷೇಧ (Darshan | Vijaylakshmi | Nikita Thukral | Latest Movies in Kannada)
ದರ್ಶನ್ ಕುಟುಂಬದಲ್ಲಿ ಬಿರುಗಾಳಿ ಸೃಷ್ಟಿಸಿದ್ದ ನಟಿ ನಿಖಿತಾ ಮೇಲೆ ಮೂರು ವರ್ಷಗಳ ಕಾಲ ನಿಷೇಧ ಹೇರಲು ಕರ್ನಾಟಕ ಚಲನಚಿತ್ರರಂಗ ನಿರ್ಮಾಪಕರ ಸಂಘ ನಿರ್ಧರಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

Darshan-Nikita
PR


ಭಾನುವಾರ ಸೇರಲಾದ ಮಹತ್ವದ ಸಭೆಯ ನಂತರ ನಿರ್ಮಾಪಕರ ಸಂಘ ಈ ತೀರ್ಮಾನಕ್ಕೆ ಬಂದಿದೆ. ಕಳೆದೊಂದು ವರ್ಷದಿಂದ ನಟ ದರ್ಶನ್ ಜತೆ ನಿಖಿತಾ ಅಫೇರ್ ಹೊಂದಿದ್ದು, ಇದರಿಂದಾಗಿ ಚಾಲೆಂಜಿಂಗ್ ಸ್ಟಾರ್ ಕುಟುಂಬದಲ್ಲಿ ಬಿರುಕು ಸೃಷ್ಟಿಯಾಗಿತ್ತು.

ಈ ನಡುವೆ ಪತ್ನಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಸೇರಿದ್ದ ದರ್ಶನ್ ಆರೋಗ್ಯದಲ್ಲಿ ಏರುಪೇರಾಗಿದ್ದ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ನಟ ದರ್ಶನ್ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ದರ್ಶನ್ ಅವರಿಂದ ತೀವ್ರ ಹಲ್ಲೆಗೊಳಗಾಗಿದ್ದ ಪತ್ನಿ ವಿಜಯಲಕ್ಷ್ಮಿ ಸಹ ತಮ್ಮ ದೂರಿನಲ್ಲಿ ನಟಿ ನಿಖಿತಾ ಹೆಸರನ್ನು ಪ್ರಸ್ತಾಪಿಸಿದ್ದರು. ಕಳೆದೊಂದು ವರ್ಷದಿಂದ ತಮ್ಮ ಸಂಸಾರದಲ್ಲಿ ಬಿರುಕು ಸೃಷ್ಟಿಸಿರುವುದಾಗಿ ದೂರು ನೀಡಿದ್ದರು. ನಿಖಿತಾ ವಿಚಾರದಲ್ಲಿ ದರ್ಶನ್ ಕುಟುಂಬದಲ್ಲಿ ಒಡಕು ಸೃಷ್ಟಿಯಾಗುನಂತಾಗಿತ್ತು.

ಇದೀಗ ದರ್ಶನ್ ಕೌಟುಂಬಿಕ ಕಲಹಕ್ಕೆ ಇತಿಶ್ರೀ ಹಾಡಲು ಮುಂದಾಗಿರುವ ನಿರ್ಮಾಪಕರ ಸಂಘ, ನಿಖಿತಾ ಅವರನ್ನು ಮೂರು ವರ್ಷಗಳ ಕಾಲ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲು ನಿರ್ಧರಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಿರ್ಮಾಪಕ ಮುನಿರತ್ನ, ಯಾವುದೇ ನಟಿಯಾದರೂ ಸಹ ಇತರರ ಸಂಸಾರದೊಳಗೆ ಬರಬಾರದು. ಹೊರಗಡೆಯಿಂದ ಬಂದವರು ತಮ್ಮ ಕೆಲಸ ಮಾಡಿ ಹೋಗಬೇಕು. ಆದರೆ ನಿಖಿತಾ ವಿರುದ್ಧ ಹಲವು ವಿಭಾಗಗಳಿಂದ ಸ್ಪಷ್ಟ ಮಾಹಿತಿ ಬಂದಿದ್ದರ ಹಿನ್ನಲೆಯಲ್ಲಿ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ದೂರಿನ ಹಿನ್ನಲೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದೇವೆ ಎಂದಿದ್ದಾರೆ.

ಇನ್ನು ಮುಂದೆ ಯಾರು ಸಹ ಈ ತರಹ ಸಂಸಾರದಲ್ಲಿ ಒಡಕು ಸೃಷ್ಟಿಸಬಾರದು ಎಂಬ ಕಾರಣಕ್ಕೂ ಈ ರೀತಿಯ ತೀರ್ಮಾನಕ್ಕೆ ಬರಲಾಗಿದೆ. ಆದರೆ ಯಾವ ಸಾಕ್ಷ್ಮಧಾರಗಳ ಆಧಾರಗಳ ಮೇಲೆ ನಟಿ ನಿಖಿತಾ ಮೇಲೆ ಕ್ರಮ ಕೈಗೊಳ್ಳಲಿದೆ ಎಂಬುದು ಅಚ್ಚರಿಗೆ ಕಾರಣವಾಗಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ