ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಂಗೂ ದರ್ಶನ್ ನಡುವೇ ಯಾವುದೇ ಸಂಬಂಧವಿಲ್ಲ: ನಿಖಿತಾ (Darshan | Vijaylakshmi | Nikita Thukral | Darshan Nikita Affair)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೌಟುಂಬಿಕ ಕಲಹದಲ್ಲಿ ಕೇಂದ್ರ ಬಿಂದುವಾಗಿರುವ ಮುಂಬೈ ಮೂಲದ ನಟಿ ನಿಖಿತಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ನಂಗೂ ದರ್ಶನ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

Nikita
PR
ದರ್ಶನ್ ಜತೆ ಎಲ್ಲ ನಟ-ನಟಿಯರ ಹಾಗೆ ಕೇವಲ ಗೆಳೆತನ ಮಾತ್ರವಿದೆ. ಆದರೆ ಯಾತಕ್ಕಾಗಿ ಗಂಡ-ಹೆಂಡಿರ ಜಗಳ ವಿಷಯದಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸಲಾಗುತ್ತಿದೆ ಎಂಬುದಂತೂ ಅರ್ಥವಾಗುತ್ತಿಲ್ಲ ಎಂದು ಕೊರಗಿದ್ದಾರೆ.

ದರ್ಶನ್ ಸಂಸಾರಿಕ ಜೀವನದಲ್ಲಿ ಬಿರುಕು ಸೃಷ್ಟಿಸಿದ್ದಾರೆ ಎಂಬ ಆರೋಪವನ್ನು ಹೊತ್ತುಕೊಂಡಿರುವ ನಿಖಿತಾ ಮೇಲೆ ಮೂರು ವರ್ಷಗಳ ಕಾಲ ನಿಷೇಧ ಹೇರುವಲ್ಲಿ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ನಿರ್ಧರಿಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಖಿತಾ, ನಂಗೆ ತುಂಬಾ ಶಾಕ್ ಆಯ್ತು. ಯಾವ ಕಾರಣಕ್ಕಾಗಿ ನನ್ನನ್ನು ಬ್ಯಾನ್ ಮಾಡಲಾಗಿದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ನಿರ್ಮಾಪಕರ ಬಳಿ ಪ್ರಶ್ನಿಸಲಿದ್ದೇನೆ ಎಂದಿದ್ದಾರೆ.

ನಾನು ಮುಂಬೈನಲ್ಲಿದ್ದೇನೆ. ನನ್ನ ಹಾಗೂ ದರ್ಶನ್ ವಿರುದ್ಧ ಹರಡುತ್ತಿರುವ ಗಾಸಿಪ್‌ಗಳ ಬಗ್ಗೆ ಏನು ಗೊತ್ತಿಲ್ಲ. ಆದರೆ ಯಾವುದೇ ಮಾಹಿತಿ ನೀಡದೇ ಕ್ರಮ ಕೈಗೊಳ್ಳಲಾಗಿದೆ. ನನಗೆ ತುಂಬಾ ಆಘಾತವಾಗಿದೆ ಎಂದಿದ್ದಾರೆ.

ಎಲ್ಲ ನಟರ ಹಾಗೆಯೇ ದರ್ಶನ್ ಬಗ್ಗೆಯೂ ನನಗೆ ಗೌರವವಿದೆ. ಕೆಲ ಚಿತ್ರಗಳಲ್ಲಿ ನಟಿಸಿದಾಗ ಮಾತ್ರ ಪರಿಚಯವಿದೆ. ಆದರೆ ಅವರ ಕುಟುಂಬ ಕಲಹಕ್ಕೆ ನಾನು ಹೊಣೆಯಲ್ಲ. ಗಂಡ ಹೆಂಡಿರ ಜಗಳಕ್ಕೆ ನನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂದಿದ್ದಾರೆ.

ಒಂದು ವೇಳೆ ನನ್ನ ಮೇಲಿನ ಆರೋಪ ಸಾಬೀತಾದ್ದಲ್ಲಿ ಸ್ವತ: ನಾನೇ ಕನ್ನಡ ಇಂಡಸ್ಟ್ರೀಸ್ ಬಿಟ್ಟು ಹೋಗುತ್ತೇನೆ. ಆದರೆ ಯಾವ ಆಧಾರದಲ್ಲಿ ನನ್ನನ್ನು ನಿಷೇಧಿಸಲಾಗಿದೆ. ನಾನು ಇನ್ನೂ ಅವಿವಾಹಿತಳಾಗಿದ್ದು ಭವಿಷ್ಯದಲ್ಲಿ ಮದುವೆಯಾಗಬೇಕಿದೆ. ಹೀಗಾಗಿ ಇಂತಹ ಇಲ್ಲ ಸಲ್ಲದ ಆರೋಪ ಹೋರಿಸಿದ್ದಲ್ಲಿ ನನ್ನ ಭವಿಷ್ಯದ ಗತಿಯೇನು ಎಂದು ಪ್ರಶ್ನಿಸಿದರು.

ನನಗೆ ತಿಳಿದಂತೆ ವಿಜಯಲಕ್ಷ್ಮಿ ಬಾತ್‌ರೂಮ್‌ನಲ್ಲಿ ಕಾಲು ಜಾರಿ ಗಾಯವಾಗಿದೆ. ನಂಗೆ ದರ್ಶನ್ ಅವರಿಗಿಂತಲೂ ಉತ್ತಮ ಬಾಂಧವ್ಯ ವಿಜಯಲಕ್ಷ್ಮೀ ಅವರ ಜತೆಗಿತ್ತು. ನನ್ನ ತಾಯಿಯ ಜತೆಯೂ ವಿಜಯಲಕ್ಷ್ಮಿ ಉತ್ತಮ ಬಾಂಧವ್ಯ ಹೊಂದಿದ್ದರು. ಹೀಗಾಗಿ ಏಕೆ ಇಂತಹ ಆರೋಪ ಮಾಡಲಾಗಿದೆ ಎಂಬುದನ್ನು ಕೇಳಬಯಸುತ್ತೇನೆ ಎಂದಿದ್ದಾರೆ.

ಹೆಂಡತಿಗೆ ಹೊಡೆದ ಸ್ಟಾರ್‌ಗೆ ಶಿಕ್ಷೆಯೇ ಇಲ್ಲ..?
ಈ ನಡುವೆ ಕೌಟುಂಬಿಕ ಕಲಹದ ವಿಚಾರದಲ್ಲಿ ನಟಿಯೊಬ್ಬರ ಮೇಲೆ ನಿಷೇಧ ಹೇರಿರುವುದು ಭಾರಿ ಟೀಕೆಗೆ ಕಾರಣವಾಗಿದೆ. ಆದರೆ ತನ್ನ ಹೆಂಡತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಸ್ಟಾರ್ ನಟರೊಬ್ಬರನ್ನು ಸುಮ್ಮನೆ ಬಿಡಲಾಗಿದೆ ಎಂಬ ಅಪವಾದವೂ ಕೇಳಿ ಬರುತ್ತಿವೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ