ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದರ್ಶನ್‌ಗಾಗಿ 2 ದಿನ ಊಟಬಿಟ್ಟು ಆಸ್ಪತ್ರೆಗೆ ಬಂದ 8 ವರ್ಷದ ಪೋರಿ (Darshan Arrested for Assaulting Wife | Challenging Star Darshan | Kannada Actor Darshan | Vijayalaxmi)
ದರ್ಶನ್‌ಗಾಗಿ 2 ದಿನ ಊಟಬಿಟ್ಟು ಆಸ್ಪತ್ರೆಗೆ ಬಂದ 8 ವರ್ಷದ ಪೋರಿ
PR
ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಕ್ಕೆ ಒಳಗಾಗಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅನಾರೋಗ್ಯ ನಿಮಿತ್ತ ಇದೀಗ ಬೆಂಗಳೂರಿನ ಜಯನಗರದಲ್ಲಿರುವ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರಿಂದ ಬಹಳ ನೊಂದುಕೊಂಡಿರುವ ಎಂಟು ವರ್ಷದ ಅಭಿಮಾನಿ ಅಲಿಷಾ, ದರ್ಶನ್ ಭೇಟಿಗಾಗಿ ಆಸ್ಪತ್ರೆಗೆ ಆಗಮಿಸಿದ್ದಾರೆ.
ಎಂಟು ವರ್ಷದ ಅಭಿಮಾನಿ ಬಾಲಕಿ ಅಲಿಷಾ ಎರಡು ದಿನದಿಂದ ಊಟ ಮಾಡದೆ, ಪರೀಕ್ಷೆಗೂ ಹೋಗದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿ ಮಾಡಲೇಬೇಕು ಎಂದು ಹಠ ಹಿಡಿದ್ದಿದ್ದರಿಂದ ನೇರವಾಗಿ ಆಕೆಯನ್ನು ಆಸ್ಪತ್ರೆಗೆ ಕರೆತಂದಿರುವುದಾಗಿ ಪೋಷಕರು ತಿಳಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ಎಂದರೆ ಅಲಿಷಾಗೆ ತುಂಬಾ ಪ್ರೀತಿ, ಅವರು ಆಸ್ಪತ್ರೆಗೆ ಸೇರಿರುವುದರಿಂದ ಎರಡೂ ದಿನದಿಂದ ಊಟ ಮಾಡಿರಲಿಲ್ಲ, ಕೇವಲ ಹಾಲು ಮತ್ತು ಹಣ್ಣಿನ ರಸ ಮಾತ್ರ ಸೇವಿಸುತ್ತಿದ್ದಾರೆ. ಹಠ ಹಿಡಿಯುತ್ತಿರುವ ಮಗುವಿಗೆ ಏನಾದರೂ ಆದರೆ ಏನು ಪರಿಸ್ಥಿತಿ ಎಂಬ ಭೀತಿಯಿಂದ ದರ್ಶನ್ ಅವರನ್ನು ಭೇಟಿ ಮಾಡಲು ಬಿಜಾಪುರದಿಂದ ಬಂದಿರುವುದಾಗಿ ಪೋಷಕರಾದ ಜಯಮಾಲಾ, ಪ್ರಸಾದ್ ದಂಪತಿ ತಿಳಿಸಿದ್ದಾರೆ.