ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತೀವ್ರ ಜ್ವರದಿಂದ ಮುಂಬಯಿನ ಖಾಸಗಿ ಆಸ್ಪತ್ರೆಗೆ ಸೇರಿದ ನಿಖಿತಾ (Darshan Arrested for Assaulting Wife | Challenging Star Darshan | Kannada Actor Darshan | Vijayalaxmi | Nikitha)
ತೀವ್ರ ಜ್ವರದಿಂದ ಮುಂಬಯಿನ ಖಾಸಗಿ ಆಸ್ಪತ್ರೆಗೆ ಸೇರಿದ ನಿಖಿತಾ
PR
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ನಿಖಿತಾ ತೀವ್ರ ಜ್ವರದಿಂದ ಮುಂಬಯಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ.
ನಟ ದರ್ಶನ್ ಮತ್ತು ನಟಿ ನಿಕಿತಾ ಅವರ ನಡುವೆ ಕಳೆದ ಒಂದು ವರ್ಷದಿಂದ ಗಾಢ ಸಂಬಂಧವಿತ್ತು. ಈ ಸಂಬಂಧದಿಂದಲೇ ಸಂಸಾರದಲ್ಲಿ ಆಗಾಗ ಕಲಹ ಏರ್ಪಡುತ್ತಿತ್ತು ಎಂದು ವಿಜಯಲಕ್ಷ್ಮಿ ಅವರು ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇಂತಹಾ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಭಾನುವಾರ ಸಭೆ ನಡೆಸಿದ ನಿರ್ಮಾಪಕರ ಸಂಘ, ನಟಿ ನಿಖಿತಾ ಅವರಿಗೆ ಕನ್ನಡ ಚಿತ್ರಗಳಲ್ಲಿ 3 ವರ್ಷ ನಟಿಸದಂತೆ ನಿರ್ಬಂಧ ಹೇರಿದೆ. ಕೆಲವೇ ನಿರ್ಮಾಪಕರ ಸಮ್ಮುಖದಲ್ಲಿ ಸಭೆ ನಡೆಸಿ ದರ್ಶನ್ ಕುಟುಂಬದ ಈ ಸ್ಥಿತಿಗೆ ನಟಿ ನಿಖಿತಾ ಅವರೇ ಕಾರಣ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ.