ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಿನಿಮಾ ಆಗಲಿರುವ ದರ್ಶನ್-ನಿಖಿತಾ ಲವ್ ಸ್ಟೋರಿ! (Darshan | Nikhita | Nikhi Loves Khaidi No.9000 | Ganesh A | Latest Kannada Movie News | Kannada Film News | Kannada Actress)
PR
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅವರ ಸಂಸಾರದಲ್ಲಿ ಹುಳಿ ಹಿಂಡಿದ್ದಾರೆ ಎಂದು ಹೇಳಲಾಗಿರುವ ನಿಖಿತಾ ನಡುವಿನ ಪ್ರೇಮ ಪ್ರಸಂಗವನ್ನು ಆಧಾರವಾಗಿಟ್ಟುಕೊಂಡು ಕನ್ನಡದಲ್ಲೇ ಸಿನಿಮಾವೊಂದು ನಿರ್ಮಾಣವಾಗುವ ಸೂಚನೆಗಳು ಕಂಡು ಬರುತ್ತಿವೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸುದೀಪ್ ನಾಯಕರಾಗಿದ್ದ 'ಮಹಾರಾಜ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಿಖಿತಾ, ಇತ್ತೀಚಿನ ದಿನಗಳಲ್ಲಿ ದರ್ಶನ್‌ಗೆ ಹತ್ತಿರವಾಗಿದ್ದರು. ಇವರ ಲವ್ವಿ-ಡವ್ವಿ ಬರಬರುತ್ತಾ ಜೋರಾಗಿತ್ತು. ಇದು ಸ್ಫೋಟಗೊಂಡ ಪರಿಣಾಮ ಪತ್ನಿ ವಿಜಯಲಕ್ಷ್ಮಿ ಆಸ್ಪತ್ರೆ ಸೇರಿದ್ದರೆ, ದರ್ಶನ್ ಜೈಲು ಪಾಲಾಗಿದ್ದರು.

ಇದನ್ನೇ ಆಧಾರವಾಗಿಟ್ಟುಕೊಂಡು ಚಿತ್ರ ನಿರ್ಮಿಸಲು ಹೊರಟಿರುವುದು 'ದಂಡಂ ದಶಗುಣಂ'ನಲ್ಲಿ ರಮ್ಯಾ ಜತೆ ಗಲಾಟೆ ಮಾಡಿಕೊಂಡಿದ್ದ ನಿರ್ಮಾಪಕ ಎ. ಗಣೇಶ್. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಗಣೇಶ್ ಚಿತ್ರದ ಹೆಸರನ್ನು ನೋಂದಣಿ ಮಾಡಿದ್ದಾರೆ.

ಭಾರೀ ಕುತೂಹಲ ಕೆರಳಿಸಿರುವ ಈ ಚಿತ್ರದ ಹೆಸರು 'ನಿಖಿ ಲವ್ಸ್ ಕೈದಿ ನಂ.9000'. ಇದು ದರ್ಶನ್-ನಿಖಿತಾ ನಡುವಿನ ಲವ್ ಸ್ಟೋರಿ ಎಂಬುದನ್ನು ಎಲ್ಲೂ ಗಣೇಶ್ ಹೇಳಿಕೊಂಡಿಲ್ಲವಾದರೂ, ಚಿತ್ರಕ್ಕಿಟ್ಟಿರುವ ಹೆಸರು ಅದನ್ನು ಸ್ಪಷ್ಟಪಡಿಸಿದೆ. ಇದಕ್ಕೆ ಕಾರಣ, ಜೈಲು ಸೇರಿದ್ದ ದರ್ಶನ್‌ಗೆ ಅಲ್ಲಿ ಕೊಡಲಾಗಿರುವ ನಂಬರ್. ಪರಪ್ಪನ ಅಗ್ರಹಾರದಲ್ಲಿ ಅವರಿಗೆ ನಂ.9000ವನ್ನು ನೀಡಲಾಗಿತ್ತು.

ಕೆಲವು ದಿನಗಳ ಹಿಂದಷ್ಟೇ ಜೈಲು ಸೇರಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಕುರಿತು ಇನ್ನೊಬ್ಬ ನಿರ್ಮಾಪಕ ಸೂರಪ್ಪ ಬಾಬು ಹೊರಟಿದ್ದರು. ಆ ಚಿತ್ರಕ್ಕೆ 'ಬಳ್ಳಾರಿ ಕೈದಿ 697' ಎಂಬ ಹೆಸರನ್ನಿಡಲಾಗಿತ್ತು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ