ಹಗಲು ಬೆಳಕಿನಲ್ಲೆ ಎನ್‌ಕೌಂಟರ್ ಶೂಟ್‌ಔಚ್‌ಎಟ್ ಲೋಕಂಡ್ ವಾಲ
ಬಾಲಿವುಡ್ ನಿರ್ದೇಶಕ ಅಪೂರ್ವ ಲಾಖಿಯ ಹೊಸ ಚಿತ್ರವೊಂದರ ಮೂಲಕ ಮತ್ತೆ ಕಾಣಿಸಿಕೊಂಡಿದ್ದಾರೆ. ಶೂಟ್‌ಔಚ್‌ಎಟ್ ಲೋಕಂಡ್ ವಾಲ ಎಂಬುದು ಚಿತ್ರದ ಹೆಸರು. ನಿಜ ಜೀವನದ ದುರಂತವೊಂದರತ್ತ ಭ್ರಮಾತ್ಮಕ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿ ನಡೆದಿದೆ.
ಶೂಟ್‌ಔಚ್ ಎಟ್ ಲೋಕಂಡ್ ವಾಲ ಸಿನಿಮಾವು 1991ರಲ್ಲಿ ಸಂಭವಿಸಿದ ನೈಜ ಘಟನೆಯನ್ನಾಧರಿಸಿದ ಕಾಲ್ಪನಿಕ ಚಿತ್ರ.ಹಾಡುಹಗಲೇ ಪೊಲೀಸರಿಂದ ಸಂಭವಿಸಿದ ಎನ್‌ಕೊಂಟರ್‌ವೊಂದರ ನೈಜ ಕಥೆಯನ್ನಾಧರಿಸಿ ಚಿತ್ರದ ಕಥಾನಕ ಹೆಣೆಯಲಾಗಿದೆ. ಬಾಲಿವುಡ್ ಕಂಡಿರುವ ಭೂಗತ ಜಗತ್ತು,ಭಯೋತ್ಪಾದಕರು,ದಕ್ಷ ಅದಕ್ಷ ಪೋಲೀಸರು ಮುಂತಾದ ಕಥೆಗಳೇ ಆದರೂ ಹಲವು ವಿಶೇಷತೆಗಳಿವೆ.
ಮಹಾನಗರವನ್ನು ಹರಿದು ಚೆಲ್ಲಲು ಸಿದ್ಧರಾದ ಭಯೋತ್ಪಾದಕರು, ಭೂಗತ ವ್ಯಕ್ತಿಗಳನ್ನು ಮಟ್ಟಹಾಕಲು ಪ್ರಯತ್ನಿದ ಭಯೋತ್ಪಾದಕ ನಿಗ್ರಹ ದಳದ ದಿಟ್ಟ ಪೊಲೀಸ್ ಅಧಿಕಾರಿ. ಬಂಧೂಕಿನ ಗದ್ದಲದ ನಡುವೆಯೂ ಜೀವ ಭಯವಿಲ್ಲದ ಇಂತಹ ವ್ಯಕ್ತಿಗಳನ್ನು ಮಾನವ ಹಕ್ಕುಗಳ ಹೆಸರಲ್ಲಿ ಶಿಕ್ಷಿಸಿದ ಸರ್ಕಾರದ ಕ್ರಮ ಇತ್ಯಾದಿಗಳು ಶೂಟ್‌ಔಚ್‌ಎಟ್ ಲೋಕಂಡ್ ವಾಲ ಚಿತ್ರದಲ್ಲಿ ಅನಾವರಣಗೊಳ್ಳುತ್ತಿದೆ.
ಹೊಸ ಚಿತ್ರವನ್ನು ಅಪೂರ್ವ ಲೋಖಿಯ ನಿರ್ದೇಶಿಸುತ್ತಿದ್ದಾರೆ.ವೈಟ್ ಫೆದರ್ ಫಿಲಂ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ವಿರಾಗ್ ಮಿಶ್ರ, ಶಿಬಾನಿ ಕಾಶ್ಯಪ್ ಹಾಡುಗಳು, ಸ್ಟ್ರಿಂಗ್ಸ್ ಇಯೋಪಿಯಾ ಸಂಗೀತವಿದೆ. ತಾರಾಗಣದಲ್ಲಿ ಸಂಜಯ್‌ದತ್ತ್, ವಿವೇಕ್ ಒಬೆರಾಯ್,ತುಷಾರ್ ಕಪೂರ್ ಅಮಿತಾಬ್ , ಅಭಿಷೇಕ್‌ಬಚ್ಚನ್, ಅರ್ಬಾಜ್ ಖಾನ್, ರೋಹಿತ್ ರಾಯ್, ಸಮೀರ್ ದತ್ತಾನಿ, ಸಬ್ಬೀರ್ ಅಹ್ಲುವಾಲಿಯಾ ಮುಂತಾದ ಪ್ರಮುಖರಿದ್ದಾರೆ.
ಅಂದು ಲೋಕಂಡವಾಲ ಸಂಕೀರ್ಣದಲ್ಲಿ ಐದು ಮಂದಿ ಖಾಲಿಸ್ತಾನಿ ಪಾತಕಿಗಳು ತಂಗಿದ್ದರು. ಇವರಲ್ಲಿ ಮಯ ಹಾಗೂ ದಿಲೀಪ್ ಕುಖ್ಯಾತರು. ಇವರು ಕಟ್ಟಡದ ಕೊಠಡಿಯೊಂದರಲ್ಲಿ 70 ಲಕ್ಷ ರೂ. ಹಣದ ಕಟ್ಟನ್ನು ಎಣಿಸತೊಡಗಿದ್ದರು. ಇದೇ ಸಮಯ ದಕ್ಷ ಪೊಲೀಸ್ ಅಧಿಕಾರಿ ಎಸಿಪಿ ಖಾನ್ ತನ್ನ ಶಸ್ತ್ರ ಸಜ್ಜಿತ ಪೊಲೀಸ್ ಪಡೆಯನ್ನು ಸಿದ್ದಗೊಳಿಸಿ ಶರಣಾಗಲು ಆಗ್ರಹಿಸುತ್ತಾನೆ.
ಆದರೆ ಇದು ಕೇವಲ ಕಳ್ಳ-ಪೊಲೀಸ್ ಕಣ್ಣುಮುಚ್ಚಾಲೆಯಾಗಿರಲಿಲ್ಲ. 6 ತಾಸುಗಳ ಹಣಾಹಣಿ ನಡೆಸಿ ಮುಂಬೈಯ ಉಪನಗರದಲ್ಲಿರು ಕುಖ್ಯಾತ ಪ್ರದೇಶದಲ್ಲಿ ಹಗಲು ಬೆಳಕಲ್ಲೇ ಆರೋಪಿಗಳನ್ನು ಗುಂಡಿಕ್ಕಿ ಸುಡಲಾಯಿತು. ದೇಶದಾದ್ಯಂತ ಈ ವಿಷಯ ಚರ್ಚೆಗೀಡಾಯಿತು. ಗದ್ದಲಕ್ಕೂ ಕಾರಣವಾಗಿತ್ತು.
ಸಿನಿಮಾ ಕಥೆಯಲ್ಲಿ ಎಸಿಪಿ ಖಾನ್‌ನ ಕಥೆ ಚಿತ್ರಿತವಾಗಿದೆ. ಈತ ಖಾಲಿಸ್ಥಾನ್ ವಿಮೋಚನ ದಳದ ಉಗ್ರಗಾಮಿಗಳನ್ನು ಬೆನ್ನಟ್ಟುತ್ತಾನೆ.ಈತನ ಸಹವರ್ತಿಗಳಾಗಿ ಕವಿರಾಜ್ ಪಾಟಿಲ್ ಹಾಗೂ ಕಾನ್‌ಸ್ಟೆಬಲ್ ಜಾವೇದ್‌ಶೇಕ್ ಇರುತ್ತಾರೆ.ಬಂದೂಕಿನ ಸಿಡಿತಲೆಯಲ್ಲೇ ಜೀವನ ನಡೆಸಲು ಖುಷಿಪಡುವ ಅಧಿಕಾರಿಗಳಿವರು.
ಖಾನ್‌ನ ಎನ್‌ಕೌಂಟರ್ ಚಟುವಟಿಕೆ ಆತನಿಗೆ ಮಾನವ ಹಕ್ಕುಗಳ ಕಾಯ್ದೆ ಉಲ್ಲಂಘನೆಗಾಗಿ ಪೊಲೀಸ್ ತನಿಖೆಗೂ ಕಾರಣವಾಯಿತು.ಶೂಟ್‌ಔಟ್ ಲೋಕಂಡ್‌ವಾಲ ಬೆಳೆಯುತ್ತಿರುವ ಮಾಫಿಯ ಭಯೋತ್ಪಾದಕ ಚಟುವಟಿಕೆಗಳು, ಎನ್‌ಕೌಂಟರ್, ತನಿಖೆಯ ಮೂಲಕ ಅಧಿಕಾರಿಗಳ ಮೇಲೆ ಸೇಡು ತೀರಿಸುವ ಕ್ರಮಗಳ ಕಥೆ ಹೇಳುತ್ತದೆ.