ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಪುಟ್ಟಬಾಲಕಿಯ ಕನಸಿನಕೊಡೆ 'ಬ್ಲೂ ಅಂಬ್ರೆಲಾ'
ಸಿನಿಮಾ ಮುನ್ನೋಟ
Feedback Print Bookmark and Share
 
ಪುಟಾಣಿ ಪ್ರಪಂಚಕ್ಕೆ ಜನಪ್ರಿಯ ವ್ಯಕ್ತಿ ರಸ್ಕಿನ್‌ಬಾಂಡ್‌ . ಮಕ್ಕಳಿಗಾಗಿ ಅವರು ಬರೆದ ಕಥೆಗಳು ನಿತ್ಯ ನೂತನ.ಅವರ ಕಥಾ ಲೋಕದ ಮೋಹಕ ಜಾಲವೇ ಹಾಗೆ ಮಕ್ಕಳನ್ನು ಕಥೆಗಳತ್ತ ಸೆಳೆಯುತ್ತವೆ.ಬಾಂಡ್‌ ಅವರ ಜನಪ್ರಿಯ ಕಥೆಗಳಲ್ಲೊಂದು 'ಬ್ಲೂ ಅಂಬ್ರೆಲ್ಲಾ'. ಇದೀಗ ಸಿನಿಮಾ ರೂಪಕ್ಕಿಳಿಯುತ್ತಿದೆ.

ಭಾರತೀಯ ಮೂಲದ ಬ್ರಿಟಿಷ್‌ ಲೇಖಕರಾಗಿರುವ ರಸ್ಕಿನ್‌ ಬಾಂಡ್‌ ಬರೆದ ನೂರಕ್ಕೂ ಅಧಿಕ ಕಥೆಗಳು, ಅಷ್ಟೇ ಪ್ರಮಾಣದ ಕಾದಂಬರಿಗಳು ವ್ಯಾಪಕ ಸಂಖ್ಯೆಯ ಓದುಗರನ್ನು ಅವುಗಳತ್ತ ಸೆರೆಹಿಡಿದಿವೆ.ರಸ್ಕಿನ್‌ ಬಾಂಡ್‌ ಬರೆದ ಬ್ಲೂ ಅಂಬ್ರೆಲ್ಲಾದ ಸಿನಿಮಾ ರೂಪ ತೆರೆಕಾಣುವ ದಿನರಕ್ಕಾಗಿ ಇದೀಗ ಪುಟಾಣಿಗಳಂತೆಯೇ 'ಮಾಜಿಪುಟಾಣಿ'ಗಳೂ ನಿರೀಕ್ಷಿಸುತ್ತಿದ್ದಾರೆ.

ಬ್ಲೂ ಅಂಬ್ರೆಲ್ಲಾವನ್ನು ತೆರೆಗಿಳಿಸುವವರು ಪ್ರತಿಭಾನ್ವಿತಾ ಸಿನಿ ನಿರ್ದೇಶಕ ವಿಶಾಲ್‌ ಭಾರದ್ವಾಜ್‌. ಇವರು 'ಓಂಕಾರ್‌'ಚಿತ್ರದ ಮೂಲಕ ಈಗಾಗಲೇ ಸಿನಿ ಪ್ರಪಂಚಕ್ಕೆ ಪರಿಚಿತರು.
ಅದೇ ರೀತಿ ಸಾಹಿತ್ಯ ಕೃತಿಗಳನ್ನು ಸಿನಿಮಾವಾಗಿಸುವದಲ್ಲೂ ಭಾರದ್ವಾಜ್‌ ನೈಪುಣ್ಯ ದೃಢಪಟ್ಟಿದೆ. ಮಖ್‌ಬೀಲ್‌ ಹಾಗೂ ಓಂಕಾರ್‌ ಅನುಕ್ರಮವಾಗಿ ಷೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್‌ ಹಾಗೂ ಒಥೆಲ್ಲೊ ನಾಟಕಗಳನ್ನಾಧರಿಸಿದವುಗಳು.ಸಿನಿಮಾ ರೂಪದಲ್ಲೂ ಹಿಟ್‌ ಆಗಿವೆ.ಈ ಎಲ್ಲಾ ಕಾರಣಗಳಿಂದ ಬ್ಲೂ ಅಂಬ್ರೆಲ್ಲಾ ಕಡೆಗೆ ಎಲ್ಲರ ಗಮನಹರಿದಿದೆ.

ಬ್ಲೂ ಅಂಬ್ರೆಲ್ಲಾದ ಕಥೆಯು ಉತ್ತರ ಭಾರತದ ಪರ್ವತ ಪ್ರಾಂತದ ಗ್ರಾಮವೊಂದರ 11ರ ಹರೆಯದ ಬಾಲಕಿ ಬಿನಿಯಾಳ ಕಥಾನಕವನ್ನು ಹೊಂದಿದೆ.ಆಕೆಯ ನೀಲಿಛತ್ರಿಯೇ ಕಥಾವಸ್ತು.ಆಕೆಗೆ ಅದು ಎಲ್ಲವನ್ನೂ ಕೊಡುತ್ತದೆ. ಇದೇ ಕಾರಣಕ್ಕೆ ಆ ಛತ್ರಿ ಎಲ್ಲರ ಗಮನ ಸೆಳೆಯುತ್ತದೆ. ಗ್ರಾಮದ ಸಣ್ಣ ಹೊಟೇಲ್‌ ಮಾಲಕ ನಂದ ಕಿಶೋರನ ಸ್ವಾರ್ಥಿಕಣ್ಣುಗಲು ಆ ಕೊಡೆಯನ್ನು ಪಡೆಯಲು ಸಂಚು ನೆಡಸುತ್ತವೆ. ಅದಕ್ಕಾಗಿ ತಾನು ಪಳಗಿಸಿದ ಮಕ್ಕಳ ತಂಡವನ್ನು ಬಳಸುತ್ತಾನೆ.

ನಂದ ಕಿಶೋರದ ಕೊಡೆಗಾಗಿ ಬಹಳಷ್ಟು ಪ್ರಯತ್ನ ನಡೆಸುತ್ತಾನೆ.ಅದಕ್ಕಾಗಿ ಕಷ್ಟಗಳನ್ನೂ ಅನುಭವಿಸುತ್ತಾನೆ. ಅದುವರೆಗೆ ನೆಮ್ಮದಿಯಿಂದಿದ್ದ ಗ್ರಾಮ ಈ ನೀಲಿ ಛತ್ರಿಯಿಂದಾಗಿ ಸಂಕಷ್ಟಕ್ಕೆ ತಲುಪುತ್ತದೆ.ಅಲ್ಲಿನ ಸಹಬಾಳ್ಳೆ ಒಗ್ಗಟ್ಟಿಗೆ ಮಾರಕವಾಗುತ್ತದೆ.ಬಿನಿಯಾಳಲ್ಲಿರುವ ಸಣ್ಣ ಆಯುಧ, ಕೊಡೆ ಆಕೆಗೆ ಅತಿಮಾನುಷ ಶಕ್ತಿ ನೀಡುತ್ತದೆ.

(ಭಾರದ್ವಾಜ್)