ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಮುಖ್ಯಮಂತ್ರಿ ಐ ಲವ್ ಯೂ.
ಸಿನಿಮಾ ಮುನ್ನೋಟ
Feedback Print Bookmark and Share
 
ರಾಜ್ಯದ ಪ್ರತಿಷ್ಠಿತ ಪತ್ರಿಕೆಯಾದ " ಹಾಯ್ ಬೆಂಗಳೂರು" ಪತ್ರಿಕೆಯ ಸಂಪಾದಕರು ನಟ ನಿರ್ದೆಶಕ, ಸಾಮಾಜಿಕ ಕಳಕಳಿಯುಳ್ಳ ರವಿ ಬೆಳಗೆರೆ ಮಾಜಿ ಪ್ರಧಾನಿ ಎಚ್ ಡಿ. ದೇವೇಗೌಡ ಹಾಗೂ ಅವರ ಪುತ್ರರ ಕುರಿತು ಮುಖ್ಯಮಂತ್ರಿ ಐ ಲವ್ ಯೂ ಎನ್ನುವ ಚಿತ್ರಕಥೆಯನ್ನು ಸಿದ್ದಪಡಿಸಿದ್ದು ಭಾರಿ ತಾರಾಗಣದಲ್ಲಿ ಚಿತ್ರೀಕರಣ ಆರಂಭಿಸಿದ್ದಾರೆ.

ಚಿತ್ರಕಥೆಯಲ್ಲಿ ಕೌಟಂಬಿಕ ರಾಜಕಾರಣದ ಸುತ್ತ ಆಧರಿತವಾಗಿದೆ ನಾನು ಪತ್ರಕರ್ತನಾಗಿ( ಸಾಕ್ಷಿ ಬೆಳಗೆರೆ) ನಟಿಸುತ್ತಿದ್ದೇನೆ ಎಂದು ಚಿತ್ರದ ನಿರ್ದೆಶಕ ರವಿ ಬೆಳಗೆರೆ ತಿಳಿಸಿದ್ದಾರೆ.

ಎಚ್. ಡಿ ದೇವೇಗೌಡ ಅವರನ್ನು ಹೋಲುವ ತಂತ್ರೇಗೌಡ (ಲೋಕನಾಥ್ ನಟಿಸುತ್ತಿದ್ದಾರೆ ), ದೇವೇಗೌಡರ ಪತ್ನಿ ಮಲ್ಲಮ್ಮಾ (ಅವರ ಪಾತ್ರವನ್ನು ಸುಂದರಶ್ರೀ) ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕುಮಾರ್ (ದುನಿಯಾ ಚಿತ್ರದ ನಾಯಕ ವಿಜಯ್) ಶ್ರೀಮತಿ ಅನಿತಾ ಕುಮಾರಸ್ವಾಮಿ (ಹರಿಪ್ರಿಯಾ )ಮಾಜಿ ಮುಖ್ಯಮಂತ್ರಿಯ ಜೀವನದಲ್ಲಿ ಬಂದ ನಟಿ ರಾಧಾ (ಭಾವನಾ) ಎಚ್.ಡಿ.ರೇವಣ್ಣ ಅವರ ಪಾತ್ರವನ್ನು ದೈವಣ್ಣ (ರಂಗಾಯಣ ರಘು )ಮಾಜಿ ಸಚಿವ ಚೆಲುವರಾಯ ಸ್ವಾಮಿ ಪಾತ್ರವನ್ನು ಚೆಲುವಯ್ಯ (ಅಚ್ಯುತ ರಾವ್)ರೇಣುಕಾಚಾರ್ಯ ಪಾತ್ರದಲ್ಲಿ ರೇಣುಕಯ್ಯ(ಕೋಟೆ ಪ್ರಭಾಕರ ) ಶಿವಾನಿ ಇಲ್ಲಿ ಭವಾನಿ ಆಗಿದ್ದಾಳೆ. ಎಚ್‌.ಡಿ.ರೇವಣ್ಣ ಅವರ ಪತ್ನಿ ( ನವನೀತಾ ) ಕಾಮೆಡಿ ನಟ ಬುಲೆಟ್ ಪ್ರಕಾಶ್ ಚಿತ್ಕಾರಾ ಪಾತ್ರವನ್ನು ಮಾಡುತ್ತಿದ್ದಾರೆ.ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಡಾಕ್ಟರ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ರವಿ ಬೆಳಗೆರೆ ತಾರಾಗಣವನ್ನು ಪರಿಚಯಿಸಿದ್ದಾರೆ.

ಚಿತ್ರಕಥೆ ಮಾಜಿ ಪ್ರಧಾನಿ ದೇವೇಗೌಡರ ಕೌಟುಂಬಿಕ ಹಿನ್ನೆಲೆಯನ್ನು ಹೊಂದಿದ್ದರೂ ಕೊನೆಗೆ ಒಂದು ಸಂದೇಶವನ್ನು ನೀಡುತ್ತದೆ. ಮೊದಲ ಹಂತದಲ್ಲಿ ತಮ್ಮ ಪ್ರೀತಿಯ ಮುಖ್ಯಮಂತ್ರಿ ಹೇಗಿರಬೇಕು?ಅಡಳಿತ ಹೇಗೆ ನಡೆಸಬೇಕು? ಕೊನೆಯದಾಗಿ ಮುಖ್ಯಮಂತ್ರಿಗಳು ಅಡಳಿತ ನಡೆಸುವಲ್ಲಿ ವಿಫಲವಾದಲ್ಲಿ ಜನತೆ ಚಪ್ಪಲಿಗಳನ್ನು ತೆಗೆದು ಹೇಗೆ ಹೊಡೆಯುತ್ತಾರೆ ಎನ್ನುವುದನ್ನು ತೋರಿಸಲಾಗಿದೆ ಎಂದರು.

ಚಿತ್ರೀಕರಣ ಬೆಂಗಳೂರು ಮತ್ತು ಮಡಿಕೇರಿ ಸುತ್ತ ನಡೆದಿದ್ದು 45 ದಿನಗಳಲ್ಲಿ ಚಿತ್ರೀಕರಣ ಅಂತಿಮಗೊಳ್ಳಲಿದೆ. ಮುಂಬರುವ ವಿಧಾನಸಭೆ ಚುನಾವಣೆಗಿಂತ ಮೊದಲು ಅಂದರೆ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲಿದೆ. ಇದೊಂದು ವಾಣಿಜ್ಯ ಚಿತ್ರವಾಗಿದ್ದರಿಂದ ಚಿತ್ರದಲ್ಲಿ ಐದು ಹಾಡುಗಳನ್ನು ಸೇರಿಸಲಾಗಿದೆ.ನಾಲ್ಕು ಹೊಡೆದಾಟಗಳನ್ನು ಹೊಂದಿದೆ ಎಂದು ರವಿ ಬೆಳಗೆರೆ ವಿವರಿಸಿದರು

ಚಿತ್ರದ ತಾಂತ್ರಿಕ ನಿರ್ದೇಶಕರಾಗಿ ದ್ವಾರಕಿ ಅವರು ನಿರ್ವಹಿಸುತ್ತಿದ್ದು ಗುನ್ನಾ ಚಿತ್ರ ನಿರ್ಮಿಸಿದ ಖ್ಯಾತಿಯನ್ನು ಹೊಂದಿದ್ದಾರೆ. ಪಿ.ಕೆ.ಎಚ್. ದಾಸ್ ಕ್ಯಾಮರಾಮೆನ್, ಹರಿಕೃಷ್ಣ ಸಂಗೀತವನ್ನು ಅಳವಡಿಸಿದ್ದಾರೆ.ನಾನು ಜೀವನದಲ್ಲಿ ಯಾರಿಗೂ ಹೆದರುವುದಿಲ್ಲ ಎಂದು ಕೊನೆಯ ಸಂದೇಶವನ್ನು ರವಿ ಬೆಳಗೆರೆ ಸೇರಿಸಿದ್ದಾರೆ.