ಕನ್ನಡ ಚಿತ್ರರಂಗದಲ್ಲಿ ಪ್ರತಿ ವಾರ ಎರಡು ಮೂರು ಚಿತ್ರಗಳು ಬಿಡುಗಡೆಯಾಗುತ್ತವೆ. ಆ ಮಟ್ಟಿಗೆ ಚಿತ್ರಗಳು ಸೆಟ್ಟೇರುತ್ತಿವೆ. ಈ ವಾರ 'ಮೂರನೇ ಕ್ಲಾಸ್ ಮಂಜ ಬಿಕಾಂ ಭಾಗ್ಯ' ಹಾಗೂ' ನೀನ್ಯಾರೇ' ಚಿತ್ರಗಳು ಚಿತ್ರ ತೆರೆಗೆ ಬರಲಿದೆ.
ಮೂರನೇ ಕ್ಲಾಸ್ ಮಂಜ ಬಿಕಾಂ ಭಾಗ್ಯ
MOKSHENDRA
'ಮೆಂಟಲ್ ಮಂಜ' ಚಿತ್ರದ ಮೂಲಕ ಗಾಂಧಿನಗರದಲ್ಲಿ ಸ್ವಾರ್ ಪಟ್ಟ ಗಿಟ್ಟಿಸಿಕೊಂಡ ಅರ್ಜುನ್ ಈಗ ಮೂರನೇ ಕ್ಲಾಸ್ ಮಂಜನಾಗಿದ್ದಾನೆ. ಈ ಚಿತ್ರವನ್ನು ಅವರ ಸಹೋದರ ಸಾಯಿಸಾಗರ್ ನಿರ್ದೇಶಿಸಿದ್ದಾರೆ. ಈ ಜೋಡಿಯ ಮೂರನೇ ಚಿತ್ರ ಇದು. ಒಂದು ಪ್ರೇಮಕಥೆಯನ್ನು ವಿಭಿನ್ನ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ ಎನ್ನುತ್ತಾರೆ ನಿರ್ದೇಶಕ ಸಾಯಿಸಾಗರ್. ಮೆಂಟಲ್ ಮಂಜ ನಂತರ ಈ ಜೋಡಿಯ 'ತಿಮ್ಮ' ಚಿತ್ರ ಯಶಸ್ವಿಯಾಗಲಿಲ್ಲ.
'ಮೂರನೇ ಕ್ಲಾಸ್ ಮಂಜ ಬಿಕಾಂ ಭಾಗ್ಯ'ದ ವಿಶಿಷ್ಟ ಪೋಸ್ಟರ್‌ಗಳು ಈಗಾಗಲೇ ಜನರಲ್ಲಿ ಕುತೂಹಲ ಹುಟ್ಟಿಸಿದೆ. ಚಿತ್ರದಲ್ಲಿ ಅರ್ಜುನ್ ಬೇರೆ ಬೇರೆ ಗೆಟಪ್‌ನಲ್ಲಿ ಕಂಗೊಳಿಸಿದ್ದಾರೆ. ಈ ಚಿತ್ರ ತನಗೊಂದು ಬ್ರೇಕ್ ಕೊಡಬಹುದೆಂಬ ನಿರೀಕ್ಷೆಯಲ್ಲಿ ಅರ್ಜುನ್ ಶುಭ ಶುಕ್ರವಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಚಿತ್ರದಲ್ಲಿ ಅಶ್ವಿನಿ ಹಾಗೂ ಸುನೀತ ಶೆಟ್ಟಿ ನಾಯಕಿಯರು. ಚಿತ್ರಕ್ಕೆ ವೆಂಕಟ್ ನಾರಾಯಣ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರವನ್ನು ಚಳವಳಿ ನಾರಾಯಣ್ ನಿರ್ಮಿಸಿದ್ದಾರೆ.
ನೀನ್ಯಾರೆ
MOKSHENDRA
ಈ ವಾರ ಬಿಡುಗಡೆಯಾಗಲಿರುವ ಮತ್ತೊಂದು ಚಿತ್ರ 'ನೀನ್ಯಾರೆ'. ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಬೇಕಾಗಿದ್ದ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಸದಾ ತನ್ನ ಮಗ ಸುಖವಾಗಿರಬೇಕೆಂದು ಯೋಚಿಸುವ ತಂದೆಗೆ ಕೊನೆ ಕಾಲದಲ್ಲಿ ಬೇಕಾಗಿರುವುದು ಏನೆಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆಯಂತೆ. ಪ್ರೇಮಕಥೆಯ ಜೊತೆಗೆ ಇದೊಂದು ಫ್ಯಾಮಿಲಿ ಡ್ರಾಮಾ ಎನ್ನುತ್ತಾರೆ ನಿರ್ದೇಶ ಶಶಿ ಸಿಂಧೂರ್.
ಚಿತ್ರದಲ್ಲಿ ಹೊಸ ಮುಖಗಳಾದ ಸೂರಜ್ ಹಾಗೂ ಸಂಭ್ರಮ ನಾಯಕ ನಾಯಕಿಯರಾಗಿ ಅಭಿನಯಿಸಿದ್ದಾರೆ. ಪ್ರೇಕ್ಷಕರು ನೀನ್ಯಾರೆಯನ್ನು ಯಾವ ರೀತಿ ಸ್ವೀಕರಿಸುತ್ತಾರೆ ಕಾದು ನೋಡಬೇಕು. ಚಿತ್ರವನ್ನು ಟಿ.ವರದ ರೆಡ್ಡಿ ನಿರ್ಮಿಸಿದ್ದು, ಕೆ.ಎಂ. ವಿಷ್ಣುವರ್ಧನ್ ಅವರ ಛಾಯಾಗ್ರಹಣವಿದೆ.