ಆನೇಕಲ್ ಬಾಲರಾಜ್ ನಿರ್ಮಾಣದ 'ಕೆಂಪ' ಈ ವಾರ ತೆರೆ ಕಾಣುತ್ತಿದೆ. ಚಿತ್ರದಲ್ಲಿ ನಿರ್ಮಾಪಕರ ಮಗ ಸಂತೋಷ್ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದಾರೆ. ಚಿತ್ರವನ್ನು ಜಗದೀಶ್ ನಿರ್ದೇಶಿಸಿದ್ದಾರೆ. ಐದು ತಿಂಗಳ ಹಿಂದೆಯೇ ಬಿಡುಗಡೆಯಾಗಬೇಕಿದ್ದ ಚಿತ್ರ ಥಿಯೇಟರ್ ಸಮಸ್ಯೆಯಿಂದ ತಡವಾಗಿ ಬಿಡುಗಡೆಯಾಗುತ್ತಿದೆ. ಈ ಹಿಂದೆ ಚಿತ್ರಕ್ಕೆ 'ಗೊಲ್ಲ' ಎಂದು ಹೆಸರಿಡಲಾಗಿತ್ತು. ನಂತರ ಅದನ್ನು ಬದಲಿಸಿ ಕೆಂಪ ಮಾಡಲಾಗಿದೆ.
ಕೆಂಪ ಚಿತ್ರದಲ್ಲಿ ಮನರಂಜನೆಗೆ ಏನು ಬೇಕೋ ಎಲ್ಲವೂ ಇದೆ ಎನ್ನುತ್ತಾರೆ ನಿರ್ಮಾಪಕ ಬಾಲರಾಜ್. ಚಿತ್ರವನ್ನು ವೀರಪ್ಪನ್ ಊರಾದ ಗೋಪಿನಾಥಂನಲ್ಲಿ ಚಿತ್ರೀಕರಿಸಲಾಗಿದ್ದು, ಕ್ಲೈಮ್ಯಾಕ್ಸ್ ಅದ್ಬುತವಾಗಿ ಮೂಡಿ ಬಂದಿದೆ ಎನ್ನುತ್ತಾರೆ ನಿರ್ದೇಶಕ ಜಗದೀಶ್. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ.