'ರೋಡ್ ರೋಮಿಯೋ' ಚಿತ್ರದಲ್ಲಿ ನಟಿಸಿದ್ದ ಆಶಿತಾ ನಾಯಕಿಯಾಗಿರುವ 'ಮೈ ಗ್ರೀಟಿಂಗ್ಸ್'ಚಿತ್ರ ಈ ವಾರ ತೆರೆ ಕಾಣುತ್ತಿದೆ. ಚಿತ್ರದಲ್ಲಿ ತೆಲುಗಿನ ಆದಿತ್ಯಾ ಓಂ ನಾಯಕನಾಗಿ ನಟಿಸಿದ್ದಾರೆ. ಕೇಶವ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಈ ಚಿತ್ರವನ್ನು ನಿರ್ದೇಶಕರು ಹಿಂದಿಗೂ ಡಬ್ ಮಾಡುತ್ತಿದ್ದಾರೆ. ಚಿತ್ರದ ನಾಯಕಿ ಹೊಸ ವರ್ಷದ ಶುಭಾಶಯ ಕೋರಿ ಕಳುಹಿಸುವ ಮೆಸೇಜ್ ಆಕಸ್ಮಿಕವಾಗಿ ನಾಯಕನಿಗೆ ಹೋಗುತ್ತದೆ. ಅಲ್ಲಿಂದ ಅವರಿಬ್ಬರಿಗೂ ಪ್ರೀತಿ ಶುರುವಾಗುತ್ತದೆ. ಇವರಿಬ್ಬರು ಮದುವೆಯಾಗಿ ಸ್ವಿಟ್ಜರ್ಲೆಂಡ್ಗೆ ಹನಿಮೂನ್ಗೆ ಹೋದಾಗ ಅಲ್ಲಿ ಅಪರಿಚಿತರು ಇವರ ಮೇಲೆ ಹಲ್ಲೆ ಮಾಡುವ ಕಥಾ ಹಂದರ ಹೊಂದಿದೆ.
ಚಿತ್ರರಂಗದಿಂದ ದೂರವಿದ್ದ ಆಶಿತಾ ಈ ಚಿತ್ರದ ಬಗ್ಗೆ ನೀರೀಕ್ಷೆ ಇಟ್ಟುಕೊಂಡಿದ್ದಾರೆ.