75 ರ ಸಂಭ್ರಮದಲ್ಲಿ ಈ ವರ್ಷ ಪ್ರಾರಂಭದಿಂದಲೇ ಸಾಕಷ್ಟು ಚಿತ್ರಗಳು ಬಂದು ಹೋಗಿವೆ. ಆದರೆ ಇದರಲ್ಲಿ ಎಷ್ಟು ಗೆದ್ದಿವೆ ಎನ್ನುವುದು ಬೇರೆ ವಿಷಯ. ಇದೀಗ ಈ ವಾರವು ಮೂರು ಚಿತ್ರ ತೆರೆಕಾಣಲಿದೆ.
ಕಾಶಿನಾಥ್ ಮಗ ಅಲೋಕ್ ನಾಯಕನಾಗಿ ಅಭಿನಯಿಸುತ್ತಿರುವ ಬಾಜಿ ಚಿತ್ರಕ್ಕೆ ಕೊನೆಗೂ ಥಿಯೇಟರ್ ಸಿಕ್ಕಿದೆ. ಶಿಡ್ಲಘಟ್ಟ ಶ್ರೀನಿವಾಸ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಜನರ ಕಿವಿಯಲ್ಲಿ ಗುಂಯುಗುಟ್ಟುತ್ತಿದೆ. ಆದರೆ ಚಿತ್ರ? ತೆರೆ ಮೇಲೆ ಬಂದ ಮೇಲೆ ತಿಳಿಯಬೇಕು.
ಇನ್ನೊಂದು ಅಂಜದಿರು. ಜನಾರ್ದನ್ ನಿರ್ದೇಶನದ ಚೊಚ್ಚಲ ಚಿತ್ರ ಇದು. ಹಿರಿಯ ಪೋಷಕ ನಟ ಕೃಷ್ಣೇಗೌಡರು ಇದನ್ನು ನಿರ್ಮಿಸಿದ್ದಾರೆ. ಮಗ ಮುರುಳೀಧರನನ್ನು ನಟನನ್ನಾಗಿಸುವ ತವಕದಲ್ಲಿರು ಗೌಡರು ಅದ್ದೂರಿತನದಿಂದ ಚಿತ್ರ ನಿರ್ಮಿಸಿದ್ದಾರೆ. ಸುಮನ್ ರಂಗನಾಥ್ ಐಟಂ ಸಾಂಗ್ಗೆ ಹೆಜ್ಜೆ ಹಾಕಿ ಹೋಗಿದ್ದಾರೆ. ಚಿತ್ರದಲ್ಲಿ ಪ್ರಶಾಂತ್ ಮತ್ತು ಶುಭಾ ಪೂಂಜಾ ನಾಯಕ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಮೂರನೇ ಚಿತ್ರ ಶಂಕರ ಪುಣ್ಯಕೋಟಿ. ಕಲಾ ನಿರ್ದೇಶಕ ಜಿ. ಮೂರ್ತಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಭಕ್ತಿ ಭಾವದ ಈ ಚಿತ್ರವನ್ನು ಅಮರನಾಥ್ ಮತ್ತು ಶ್ರೀನಿವಾಸ್ ಸುಧಾ ನಿರ್ಮಿಸಿದ್ದಾರೆ. ಒಟ್ಟಿನಲ್ಲಿ ಮೂವರಲ್ಲಿ ಗೆಲುವು ಯಾರಿಗೆ ಕಾದು ನೋಡಬೇಕಿದೆ.