ಈ ವಾರ ಮೂರು ಚಿತ್ರಗಳು ತೆರೆ ಕಾಣುತ್ತಿವೆ. ಪ್ರಶಾಂತ್ ರಾಜ್ ನಿರ್ದೇಶನದ ಲವ್ ಗುರು, ಜಗ್ಗೇಶ್ ಅಭಿನಯದ ಎದ್ದೇಳು ಮಂಜುನಾಥ ಹಾಗೂ ಯೋಗೇಶ್ ನಾಯಕನಾಗಿರುವ ಮಿಸ್ಟರ್ ಪೇಂಟರ್.
ಲವ್ ಗುರು ಇದು ನಾಯಕ ತರುಣ್‌ಗೆ ಅದೃಷ್ಟ ಪರೀಕ್ಷೆಯ ಚಿತ್ರ. ಹುಡುಗ-ಹುಡುಗಿಯರ ಭಾವನೆಯೇ ಈ ಲವ್ ಗುರು. ಇದು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಎಲ್ಲರೂ ನೋಡಬಹುದಾದ ಚಿತ್ರ ಇದಾಗಿದೆ ಎನ್ನುತ್ತಾರೆ ನಿರ್ದೇಶಕ ಪ್ರಶಾಂತ್ ರಾಜ್. ಚಿತ್ರದಲ್ಲಿ ನಾಯಕಿಯಾಗಿ ಮೊಗ್ಗಿನ ಮನಸು ಖ್ಯಾತಿಯ ರಾಧಿಕಾ ಪಂಡಿತ್ ಕೂಡಾ ನಟಿಸಿದ್ದಾರೆ. ಮೊಗ್ಗಿನ ಮನಸು ಚಿತ್ರದ ಬಳಿಕ ಮತ್ತೊಂದು ಗ್ಲಾಮರಸ್ ಪಾತ್ರ ಸಿಕ್ಕಿದೆ ಎಂಬುದು ರಾಧಿಕಾ ಅನಿಸಿಕೆ. ಇವರೊಂದಿಗೆ ದಿಲೀಪ್ ರಾಜ್ ಹಾಗೂ ಒಂದು ಪ್ರೀತಿಯ ಕಥೆ ಖ್ಯಾತಿಯ ಯಜ್ಞಾ ಶೆಟ್ಟಿ ನಟಿಸುತ್ತಿದ್ದಾರೆ. ಚಿತ್ರವನ್ನು ನವೀನ್ ನಿರ್ಮಿಸುತ್ತಿದ್ದಾರೆ.
MOKSHA
ಈ ವಾರ ಬಿಡುಗಡೆಯಾಗುವ ಇನ್ನೊಂದು ಚಿತ್ರ ಎದ್ದೇಳು ಮಂಜುನಾಥ. ಇದು ಜಗ್ಗೇಶ್ ಅವರ 25ನೇ ಚಿತ್ರ. ಎಂದಿನಂತೆ ಕಾಮಿಡಿ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಪ್ರಿಮಿಯರ್ ಶೋನಲ್ಲಿ ಪತ್ರಕರ್ತರಿಂದ ಭೇಷ್ ಎನಿಸಿಕೊಂಡಿದೆ. ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ನಿರ್ದೇಶಕ ಗುರುಪ್ರಸಾದ್. ಈ ಚಿತ್ರದಲ್ಲಿ ನಾಯಕಿಯಾಗಿ ಯಜ್ಞಾ ಶೆಟ್ಟಿ ನಟಿಸುತ್ತಿದ್ದಾರೆ. ಈ ವಾರ ಎರಡು ಚಿತ್ರಗಳಲ್ಲಿ ಯಜ್ಞಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಎರಡು ಗೆಲ್ಲಲಿ ಎಂಬುದೇ ಅವರ ಹಾರೈಕೆ.
ಇದರ ಜೊತೆಗೆ ಈ ವಾರ ಯೋಗೇಶ್ ಅಭಿನಯದ ಮಿಸ್ಟರ್ ಪೈಂಟರ್ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ವಿ. ಗಣೇಶ್ ಮತ್ತು ಉಮೇಶ್ ಬಣಕಾರ್ ಜೊತೆಯಾಗಿ ನಿರ್ಮಿಸಿದ್ದಾರೆ. ಮುಖ್ಯಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಳ್ಳುತ್ತಿದ್ದಾರೆ ಅಂದರೆ ಇದೊಂದು ಕಾಮಿಡಿ ಚಿತ್ರ ಎನ್ನಬಹುದು. ಚಿತ್ರವನ್ನು ಕತೆ, ಚಿತ್ರಕತೆ ಬರೆಯುವುದರೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನು ದಿನೇಶ್ ಬಾಬು ವಹಿಸಿಕೊಂಡಿದ್ದರು. ಏನೇ ಆಗಲಿ ಮೂವರಲ್ಲಿ ಯಾರು ಉತ್ತಮರು ಎಂದು ಪ್ರೇಕ್ಷಕ ಶೀಘ್ರವೇ ನಿರ್ಧರಿಸಲಿದ್ದಾನೆ.